37 lines
4.8 KiB
Markdown
37 lines
4.8 KiB
Markdown
# ಪರಿಶುದ್ಧ ಸ್ಥಳ
|
|
|
|
## ಪದದ ಅರ್ಥವಿವರಣೆ:
|
|
|
|
ಸತ್ಯವೇದದಲ್ಲಿ ಕಂಡುಬರುವ “ಪರಿಶುದ್ಧ ಸ್ಥಳ” ಮತ್ತು “ಅತಿ ಪರಿಶುದ್ಧ ಸ್ಥಳ” ಎನ್ನುವ ಪದಗಳು ಗುಡಾರ ಅಥವಾ ದೇವಾಲಯ ಭವನದ ಎರಡು ಭಾಗಗಳನ್ನು ಸೂಚಿಸುತ್ತದೆ.
|
|
|
|
* “ಪರಿಶುದ್ಧ” ಸ್ಥಳವು ಮೊದಲನೇ ಭಾಗ (ಅಥವಾ ಮೊದಲನೇ ಕೊಠಡಿ), ಇದರಲ್ಲಿ ಧೂಪವೇದಿ ಮತ್ತು ವಿಶೇಷವಾದ ಮೇಜಿನ ಮೇಲೆ “ಸಮ್ಮುಖದ ನೈವೇದ್ಯದ ರೊಟ್ಟಿಗಳು” ಇಡಲ್ಪಟ್ಟಿರುತ್ತವೆ.
|
|
* “ಅತಿ ಪರಿಶುದ್ಧ ಸ್ಥಳ” ಎರಡನೇ ಭಾಗವಾಗಿರುತ್ತದೆ, ಅದು ಒಳಗಡೆ ಇರುವ ಕೊಠಡಿ, ಮತ್ತು ಅದರಲ್ಲಿ ಒಡಂಬಡಿಕೆಯ ಮಂಜೂಷವನ್ನು ಇಟ್ಟಿರುತ್ತಾರೆ.
|
|
* ತುಂಬಾ ದಪ್ಪವಾಗಿರುವ, ಒಜೆಯಾಗಿರುವ ಒಂದು ತೆರೆ ಒಳಗಡೆ ಕೊಠಡಿಯನ್ನು ಮತ್ತು ಹೊರಗಿನ ಕೊಠಡಿಯನ್ನು ಬೇರ್ಪಡಿಸುತ್ತದೆ.
|
|
* ಮಹಾ ಯಾಜಕನು ಮಾತ್ರವೇ ಅತಿ ಪರಿಶುದ್ಧ ಸ್ಥಳಕ್ಕೆ ಹೋಗಲು ಅನುಮತಿ ಹೊಂದಿರುತ್ತಾನೆ.
|
|
* ಕೆಲವೊಂದುಬಾರಿ “ಪರಿಶುದ್ಧ ಸ್ಥಳ” ಎನ್ನುವ ಮಾತು ಗುಡಾರದ ಅಥವಾ ದೇವಾಲಯದ ಅಂಗಳದ ಆವರಣವನ್ನು ಮತ್ತು ಭವನವನ್ನೂ ಸೂಚಿಸುತ್ತದೆ. ದೇವರಿಗೆ ಪ್ರತ್ಯೇಕಿಸಿರುವ ಯಾವುದೇ ಸ್ಥಳವನ್ನು ಸಾಧಾರಣವಾಗಿ ಈ ಪದವು ಸೂಚಿಸುತ್ತದೆ.
|
|
|
|
## ಅನುವಾದ ಸಲಹೆಗಳು:
|
|
|
|
* “ಪರಿಶುದ್ಧ ಸ್ಥಳ” ಎನ್ನುವ ಪದವನ್ನು “ದೇವರಿಗೆ ಪ್ರತ್ಯೇಕಿಸಿರುವ ಕೊಠಡಿ” ಅಥವಾ “ದೇವರನ್ನು ಭೇಟಿ ಮಾಡುವುದಕ್ಕೆ ವಿಶೇಷವಾದ ಕೊಠಡಿ” ಅಥವಾ “ದೇವರಿಗಾಗಿ ಕಾಯ್ದಿರಿಸಿರುವ ಸ್ಥಳ” ಎಂದೂ ಅನುವಾದ ಮಾಡಬಹುದು.
|
|
* “ಅತಿ ಪರಿಶುದ್ಧ ಸ್ಥಳ” ಎನ್ನುವ ಮಾತನ್ನು “ದೇವರಿಗೋಸ್ಕರ ಹೆಚ್ಚಾಗಿ ಪ್ರತ್ಯೇಕಿಸಿರುವ ಕೊಠಡಿ” ಅಥವಾ “ದೇವರನ್ನು ಭೇಟಿ ಮಾಡುವುದಕ್ಕೆ ಅತಿ ವಿಶೇಷವಾದ ಕೊಠಡಿ” ಎಂದೂ ಅನುವಾದ ಮಾಡಬಹುದು.
|
|
* ಸಂದರ್ಭಾನುಸಾರವಾಗಿ, “ಪರಿಶುದ್ಧ ಸ್ಥಳ” ಎನ್ನುವ ಸಾಧಾರಣ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಪ್ರತಿಷ್ಠಾಪಿಸಿದ ಸ್ಥಳ” ಅಥವಾ “ದೇವರು ಪ್ರತ್ಯೇಕಿಸಿಕೊಂಡಿರುವ ಸ್ಥಳ” ಅಥವಾ “ದೇವಾಲಯದ ಸಂಕೀರ್ಣದಲ್ಲಿ ಪರಿಶುದ್ಧವಾದ ಸ್ಥಳ” ಅಥವಾ “ದೇವರ ಪರಿಶುದ್ಧ ಆಲಯದ ಅಂಗಳದ ಆವರಣ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಧೂಪವೇದಿ](../other/altarofincense.md), [ಒಡಂಬಡಿಕೆಯ ಮಂಜೂಷ](../kt/arkofthecovenant.md), [ರೊಟ್ಟಿ](../other/bread.md), [ಪ್ರತಿಷ್ಠಾಪಿಸು](../kt/consecrate.md), [ಅಂಗಳ](../other/courtyard.md), [ತೆರೆ](../other/curtain.md), [ಪರಿಶುದ್ಧ](../kt/holy.md), [ಪ್ರತ್ಯೇಕಿಸು](../kt/setapart.md), [ಗುಡಾರ](../kt/tabernacle.md), [ದೇವಾಲಯ](../kt/temple.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಅರಸ.06:16-18](rc://*/tn/help/1ki/06/16)
|
|
* [ಅಪೊ.ಕೃತ್ಯ.06:12-15](rc://*/tn/help/act/06/12)
|
|
* [ವಿಮೋ.26:31-33](rc://*/tn/help/exo/26/31)
|
|
* [ವಿಮೋ.31:10-11](rc://*/tn/help/exo/31/10)
|
|
* [ಯೆಹೆ.41:1-2](rc://*/tn/help/ezk/41/01)
|
|
* [ಎಜ್ರಾ.09:8-9](rc://*/tn/help/ezr/09/08)
|
|
* [ಇಬ್ರಿ.09:1-2](rc://*/tn/help/heb/09/01)
|
|
* [ಯಾಜಕ.16:17-19](rc://*/tn/help/lev/16/17)
|
|
* [ಮತ್ತಾಯ.24:15-18](rc://*/tn/help/mat/24/15)
|
|
* [ಪ್ರಕ.15:5-6](rc://*/tn/help/rev/15/05)
|
|
|
|
## ಪದ ಡೇಟಾ:
|
|
|
|
* Strong's: H1964, H4720, H4725, H5116, H6918, H6944, G39, G40, G3485, G5117
|