2.3 KiB
2.3 KiB
ಇಬ್ರಿ, ಇಬ್ರಿಯರು
ಪದದ ಅರ್ಥವಿವರಣೆ:
“ಇಬ್ರಿಯರು” ಇಸಾಕ ಮತ್ತು ಯಾಕೋಬರ ಮೂಲಕ ಅಬ್ರಾಹಾಮನಿಂದ ಬಂದ ಸಂತಾನದ ಜನರಾಗಿರುತ್ತಾರೆ. ಅಬ್ರಾಹಾಮನನ್ನೇ ಮೊಟ್ಟ ಮೊದಲು ಸತ್ಯವೇದದಲ್ಲಿ “ಇಬ್ರಿಯನು” ಎಂದು ಕರೆಯಲ್ಪಟ್ಟಿದ್ದಾನೆ.
- “ಇಬ್ರಿ” ಎನ್ನುವ ಪದವು ಇಬ್ರಿಯರು ಮಾತನಾಡುವ ಭಾಷೆಯನ್ನು ಕೂಡ ಸೂಚಿಸುತ್ತದೆ. ಹಳೇ ಒಡಂಬಡಿಕೆಯ ಹೆಚ್ಚಿನ ಭಾಗವನ್ನು ಇಬ್ರಿಯ ಭಾಷದಲ್ಲಿಯೇ ಬರೆದಿರುತ್ತಾರೆ.
- ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ಇಬ್ರಿಯರನ್ನು “ಯೆಹೂದ್ಯದ ಜನರು” ಅಥವಾ “ಇಸ್ರಾಯೇಲ್ಯರು” ಎಂದು ಕರೆಯಲ್ಪಟ್ಟಿದ್ದಾರೆ. ವಾಕ್ಯದಲ್ಲಿ ಈ ಮೂರು ಪದಗಳನ್ನು ಉಪಯೋಗಿಸುವುದು ಉತ್ತಮ, ಯಾಕಂದರೆ ಈ ಪದಗಳು ಒಂದೇ ವರ್ಗದ ಜನರನ್ನು ಸೂಚಿಸುತ್ತವೆ.
(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಯೆಹೂದ್ಯ, ಯೆಹೂದ್ಯ ನಾಯಕರು)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.26:12-14
- ಆದಿ.39:13-15
- ಆದಿ.40:14-15
- ಆದಿ.41:12-13
- ಯೋಹಾನ.05:1-4
- ಯೋಹಾನ.19:12-13
- ಯೋನ.01:8-10
- ಫಿಲಿಪ್ಪಿ.03:4-5
ಪದ ಡೇಟಾ:
- Strong's: H5680, G1444, G1445, G1446, G1447