2.7 KiB
2.7 KiB
ವಿಶ್ವಾಸರಹಿತ, ವಿಶ್ವಾಸಘಾತುಕತೆ
ಪದದ ಅರ್ಥವಿವರಣೆ
“ವಿಶ್ವಾಸರಹಿತ” ಎನ್ನುವ ಪದಕ್ಕೆ ವಿಶ್ವಾಸ ಅಥವಾ ನಂಬಿಕೆ ಇಲ್ಲವೆಂದು ಅರ್ಥ.
- ದೇವರಲ್ಲಿ ನಂಬಿಕೆಯಿಲ್ಲದ ಜನರನ್ನು ಕುರಿತಾಗಿ ಈ ಪದವನ್ನು ಉಪಯೋಗಿಸುತ್ತಾರೆ. ಅವರು ಅನೈತಿಕವಾಗಿ ಮಾಡುವ ಕೆಲಸದ ಮೂಲಕ ಅವರ ಅಪನಂಬಿಕೆಯನ್ನು ತೋರಿಸುತ್ತದೆ.
- ಇಸ್ರಾಯೇಲ್ ಜನರು ವಿಶ್ವಾಸರಹಿತರಾಗಿದ್ದರೆಂದು ಮತ್ತು ದೇವರಿಗೆ ಅವಿಧೇಯರಾಗಿದ್ದರೆಂದು ಯೆರೆಮೀಯ ಪ್ರವಾದಿ ಅವರನ್ನು ಆರೋಪಿಸಿದನು.
- ಯೆಹೋವನಿಗೆ ವಿಧೇಯತೆ ತೋರದ ಅಥವಾ ಆರಾಧಿಸದ ಜನರು ಮಾಡುವಂತೆ ಅವರು ವಿಗ್ರಹಾರಧನೆ ಮಾಡಿದರು ಮತ್ತು ಅದೈವಿಕ ಪದ್ಧತಿಗಳನ್ನು ಆಚರಿಸುತ್ತಿದ್ದರು.
ಅನುವಾದ ಸಲಹೆಗಳು:
- ಸಂದರ್ಭಾನುಸಾರವಾಗಿ, “ವಿಶ್ವಾಸರಹಿತ” ಎನ್ನುವ ಪದವನ್ನು “ಅವಿಶ್ವಾಸ” ಅಥವಾ “ಅಪನಂಬಿಕೆ” ಅಥವಾ “ದೇವರಿಗೆ ಅವಿಧೇಯರಾಗಿರುವುದು” ಅಥವಾ “ನಂಬುವುದಿಲ್ಲ” ಎಂದು ಅನುವಾದ ಮಾಡಬಹುದು.
- “ವಿಶ್ವಾಸಘಾತುಕತೆ” ಎನ್ನುವ ಪದವನ್ನು “ಅಪನಂಬಿಕೆ” ಅಥವಾ “ಅವಿಶ್ವಾಸ” ಅಥವಾ “ದೇವರಿಗೆ ಅವಿಧೇಯತೆ ತೋರುವುದು” ಎಂದು ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ)
(ಈ ಪದಗಳನ್ನು ಸಹ ನೋಡಿರಿ : ನಂಬಿಕೆ, ವಿಶ್ವಾಸ, ಅವಿಧೇಯತೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: G571