kn_tw/bible/kt/exalt.md

30 lines
3.6 KiB
Markdown

# ಹೆಚ್ಚಿಸು, ಹೆಚ್ಚಿಸಲಾಗಿದೆ, ಹೆಚ್ಚಿಸುವುದು, ಮೇಲಕ್ಕೆ ಎತ್ತುವುದು
## ಪದದ ಅರ್ಥವಿವರಣೆ:
ಹೆಚ್ಚಿಸು ಎನ್ನುವ ಪದಕ್ಕೆ ಒಬ್ಬರನ್ನು ಹೆಚ್ಚಾಗಿ ಪ್ರಶಂಸಿಸುವುದು ಮತ್ತು ಹೆಚ್ಚಾಗಿ ಗೌರವಿಸುವುದು ಎಂದರ್ಥ. ಉನ್ನತ ಸ್ಥಾನದಲ್ಲಿ ಒಬ್ಬರನ್ನು ಇರಿಸುವುದು ಎನ್ನುವ ಅರ್ಥವೂ ಈ ಪದಕ್ಕೆ ಇದೆ.
* ಸತ್ಯವೇದದಲ್ಲಿ, “ಹೆಚ್ಚಿಸು” ಎನ್ನುವ ಪದವು ದೇವರನ್ನು ಹೆಚ್ಚಿಸುವುದಕ್ಕೋಸ್ಕರವೆ ಉಪಯೋಗಿಸಲ್ಪಟ್ಟಿರುತ್ತದೆ.
* ಒಬ್ಬ ವ್ಯಕ್ತಿ ತನ್ನನ್ನು ತಾನು ಹೆಚ್ಚಿಸಿಕೊಂಡರೆ, ಅದಕ್ಕೆ ಅವನು ಅಹಂಕಾರ ವಿಧಾನದಲ್ಲಿ ಅಥವಾ ಗರ್ವದಿಂದ ತನ್ನ ಕುರಿತು ಆಲೋಚನೆ ಮಾಡಿಕೊಳ್ಳುವುದು ಎಂದರ್ಥ.
## ಅನುವಾದ ಸಲಹೆಗಳು:
* “ಹೆಚ್ಚಿಸು” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಹೆಚ್ಚಾಗಿ ಪ್ರಶಂಸಿಸು” ಅಥವಾ “ಘನವಾಗಿ ಗೌರವಿಸು” ಅಥವಾ “ಸ್ತೋತ್ರ ಮಾಡು” ಅಥವಾ “ಉನ್ನತವಾಗಿ ಮಾತನಾಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಕೆಲವೊಂದು ಸಂದರ್ಭಗಳಲ್ಲಿ “ಉನ್ನತ ಸ್ಥಾನದಲ್ಲಿರಿಸು” ಅಥವಾ “ಹೆಚ್ಚಾದ ಗೌರವವನ್ನು ಕೊಡು” ಅಥವಾ “ಗರ್ವದಿಂದ ಮಾತನಾಡು” ಎಂದು ಅರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
* “ನಿನ್ನನ್ನು ನೀನು ಹೆಚ್ಚಿಸಿಕೊಳ್ಳಬೇಡ” ಎನ್ನುವ ಮಾತನ್ನು “ನಿನ್ನ ಕುರಿತಾಗಿ ನೀನು ಹೆಚ್ಚಾಗಿ ಆಲೋಚನೆ ಮಾಡಿಕೊಳ್ಳಬೇಡ” ಅಥವಾ “ನಿನ್ನ ಕುರಿತಾಗಿ ಬಡಿವಾರ ಮಾಡಬೇಡ” ಎಂದೂ ಅನುವಾದ ಮಾಡಬಹುದು.
* ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವವರು” ಎನ್ನುವ ಮಾತಿಗೆ “ಅವರ ಕುರಿತಾಗಿ ಅವರು ಗರ್ವದಿಂದ ಆಲೋಚನೆ ಮಾಡಿಕೊಳ್ಳುವವರು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಸ್ತುತಿ ಮಾಡು](../other/praise.md), [ಆರಾಧನೆ](../kt/worship.md), [ಮಹಿಮೆ](../kt/glory.md), [ಹೊಗಳಿಗೆ](../kt/boast.md), [ಗರ್ವ](../other/proud.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೇತ್ರ.05:5-7](rc://*/tn/help/1pe/05/05)
* [2 ಸಮು.22:47-49](rc://*/tn/help/2sa/22/47)
* [ಅಪೊ.ಕೃತ್ಯ.05:29-32](rc://*/tn/help/act/05/29)
* [ಫಿಲಿಪ್ಪ.02:9-11](rc://*/tn/help/php/02/09)
* [ಕೀರ್ತನೆ.018:46-47](rc://*/tn/help/psa/018/046)
## ಪದ ಡೇಟಾ:
* Strong's: H1361, H4984, H5375, H5549, H5927, H7311, H7426, H7682, G1869, G5229, G5251, G5311, G5312