kn_tw/bible/kt/compassion.md

29 lines
3.5 KiB
Markdown

# ಕನಿಕರ, ಕರುಣೆ
## ಪದದ ಅರ್ಥವಿವರಣೆ:
“ಕನಿಕರ” ಎನ್ನುವ ಪದವು ಜನರ ಮೇಲೆ ಅಥವಾ ವಿಶೇಷವಾಗಿ ಶ್ರಮೆಗಳನ್ನು ಅನುಭವಿಸುತ್ತಿರುವವರ ಮೇಲೆ ದಯೆಯನ್ನು ತೋರಿಸುವ ಭಾವನೆಯನ್ನು ಸೂಚಿಸುತ್ತದೆ. “ಕರುಣೆಯುಳ್ಳ” ವ್ಯಕ್ತಿಯು ಇತರ ಜನರ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ.
* “ಕನಿಕರ” ಎನ್ನುವ ಪದವು ಅಗತ್ಯತೆಯಲ್ಲಿರುವ ಜನರ ಕುರಿತಾಗಿ ಕಾಳಜಿ ಇಡುವುದನ್ನು, ಅವರಿಗೆ ಸಹಾಯ ಮಾಡುವುದಕ್ಕೆ ಕ್ರಿಯೆಯಲ್ಲಿ ಪ್ರೀತಿ ತೋರಿಸುವುದನ್ನು ಸೂಚಿಸುತ್ತದೆ.
* ದೇವರು ಕರುಣೆಯುಳ್ಳವನು ಎಂದು ಸತ್ಯವೇದ ಹೇಳುತ್ತದೆ, ಅಂದರೆ ಆತನು ಪ್ರೀತಿಯನ್ನು ಮತ್ತು ಕನಿಕರವನ್ನು ಹೊಂದಿರುವಾತನು ಎಂದರ್ಥ.
* ಪೌಲನು ಕೊಲೊಸ್ಸದವರಿಗೆ ಬರೆದ ಪತ್ರಿಕೆಯಲ್ಲಿ “ಕನಿಕರವನ್ನು ಧರಿಸಿಕೊಳ್ಳಿರಿ” ಎಂದು ಅವರಿಗೆ ಬರೆದಿದ್ದಾನೆ. ಅಗತ್ಯತೆಯಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂದು ಮತ್ತು ಜನರ ಕುರಿತಾಗಿ ಕಾಳಜಿ ವಹಿಸಬೇಕೆಂದು ಆತನು ಅವರಿಗೆ ಆಜ್ಞಾಪಿಸಿದ್ದಾನೆ.
## ಅನುವಾದ ಸಲಹೆಗಳು:
* “ಕನಿಕರ” ಎನ್ನುವ ಪದಕ್ಕೆ “ಅತ್ಯಂತ ಕರುಣೆ” ಎಂದರ್ಥವಾಗಿರುತ್ತದೆ. ಈ ಪದಕ್ಕೆ “ಕರುಣೆ” ಅಥವಾ “ಸಹಾನುಭೂತಿ” ಎನ್ನುವ ಅರ್ಥಗಳು ಇವೆ. ಇತರ ಭಾಷೆಗಳು ಈ ಅರ್ಥಗಳು ಬರುವ ತಮ್ಮ ಸ್ವಂತ ಪದಗಳನ್ನು ಒಳಗೊಂಡಿರಬಹುದು.
* “ಕನಿಕರ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಆಳವಾದ ಆರೈಕೆ” ಅಥವಾ “ಸಹಾಯ ಮಾಡುವ ಕರುಣೆ” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
* “ಕರುಣೆ” ಎನ್ನುವ ಪದಕ್ಕೆ “ಇತರರನ್ನು ನೋಡಿಕೊಳ್ಳುವುದು ಮತ್ತು ಸಹಾಯ ಮಾಡುವುದು” ಅಥವಾ “ಆಳವಾಗಿ ಪ್ರೀತಿಸುವುದು ಮತ್ತು ಕರುಣೆ ತೋರಿಸುವುದು” ಎನ್ನುವ ಮಾತುಗಳನ್ನು ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.01:8-10](rc://*/tn/help/dan/01/08)
* [ಹೋಶೆಯ.13:14](rc://*/tn/help/hos/13/14)
* [ಯಾಕೋಬ.05:9-11](rc://*/tn/help/jas/05/09)
* [ಯೋನ.04:1-3](rc://*/tn/help/jon/04/01)
* [ಮಾರ್ಕ.01:40-42](rc://*/tn/help/mrk/01/40)
* [ರೋಮಾ.09:14-16](rc://*/tn/help/rom/09/14)
## ಪದ ಡೇಟಾ:
* Strong's: H2550, H7349, H7355, H7356, G1653, G3356, G3627, G4697, G4834, G4835