2.3 KiB
2.3 KiB
ನಿರ್ದೋಷಿ
ಅರ್ಥವಿವರಣೆ
“ನಿರ್ದೋಷಿ” ಎನ್ನುವ ಪದಕ್ಕೆ “ದೋಷ ಇಲ್ಲದವನು” ಎಂದರ್ಥ. ದೇವರನ್ನು ಪೂರ್ಣಮನಸ್ಸಿನಿಂದ ವಿಧೇಯರಾಗಿರುವವರನ್ನು ಸೂಚಿಸಲು ಇದನ್ನು ಉಪಯೋಗಿಸುತ್ತಾರೆ, ಅಂದರೆ ಆದರೆ ಆ ವ್ಯಕ್ತಿಯಲ್ಲಿ ಪಾಪವಿಲ್ಲವೆಂದು ಅರ್ಥವಲ್ಲ.
- ಅಬ್ರಹಾಮನು ಮತ್ತು ನೋಹನು ದೇವರ ಸನ್ನಿಧಿಯಲ್ಲಿ ನಿರ್ದೋಷಿಗಳೆಂದು ಪರಿಗಣಿಸಲ್ಪಟ್ಟರು.
- “ನಿರ್ದೋಷಿ” ಎಂದು ಖ್ಯಾತಿ ಹೊಂದಿರುವವನು ದೇವರನ್ನು ಗೌರವಿಸುವ ರೀತಿಯಲ್ಲಿ ನಡೆದುಕೊಳ್ಳುವನು.
- ಒಂದು ವಚನದ ಪ್ರಕಾರ ನಿರ್ದೋಷಿಯಾದ ವ್ಯಕ್ತಿ ಎಂದರೆ “ದೇವರಲ್ಲಿ ಭಯಭಕ್ತಿಯುಳ್ಳವನಾಗಿರುವವನು ಮತ್ತು ಕೆಟ್ಟದ್ದನ್ನು ನಿರಾಕರಿಸುವವನು”.
ಅನುವಾದ ಸಲಹೆಗಳು:
- “ಅವನ ಗುಣದಲ್ಲಿ ಯಾವ ತಪ್ಪಿಲ್ಲದವನು” ಅಥವಾ “ದೇವರಿಗೆ ಸಂಪೂರ್ಣವಾಗಿ ವಿಧೇಯನಾಗುವವನು” ಅಥವಾ “ಪಾಪವನ್ನು ತಡೆಯುವವನು” ಅಥವಾ “ಕೆಟ್ಟತನವನ್ನು ದೂರವಾಗಿ ಇಡುವವನು” ಎಂದು ಇದನ್ನು ಅನುವಾದ ಮಾಡಬಹುದು.
ಸತ್ಯವೇದದ ಉಲ್ಲೇಖಗಳು :
- 1 ಥೆಸಲೋನಿಕ 2:10-12
- 1 ಥೆಸಲೋನಿಕ 3:11-13
- 2 ಪೇತ್ರ 3:14-16
- ಕೊಲೊಸ್ಸೆ 1:21-23
- ಆದಿಕಾಂಡ 17:1-2
- ಫಿಲಿಪ್ಪಿ 2:14-16
- ಫಿಲಿಪ್ಪಿ 3:6-7
ಪದದ ದತ್ತಾಂಶ:
- Strong's: H5352, H5355, H8535, G02730, G02740, G02980, G03380, G04100, G04230