kn_tw/bible/names/shiloh.md

3.1 KiB

ಶಿಲೋವ

ಸತ್ಯಾಂಶಗಳು:

ಶಿಲೋವ ಎನ್ನುವುದು ಗೋಡೆಗಳ ಕಾನಾನ್ ಪಟ್ಟಣವಾಗಿತ್ತು, ಇದನ್ನು ಯೆಹೋಶುವನ ನಾಯಕತ್ವದಲ್ಲಿ ಇಸ್ರಾಯೇಲ್ಯರ ಮೂಲಕ ಜಯಸಲ್ಪಟ್ಟಿತ್ತು.

  • ಶಿಲೋವ ಪಟ್ಟಣವು ಬೇತೆಲ್ ಪಟ್ಟಣದ ಈಶಾನ್ಯ ಭಾಗದಲ್ಲಿ ಮತ್ತು ಯೊರ್ದನ್ ಹೊಳೆಯ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ.
  • ಯೆಹೋಶುವನು ಇಸ್ರಾಯೇಲ್ ಜನರನ್ನು ನಡೆಸುತ್ತಿರುವ ಸಂದರ್ಭದಲ್ಲಿ ಶಿಲೋವ ಪಟ್ಟಣವು ಇಸ್ರಾಯೇಲ್ ಜನರೆಲ್ಲರು ಭೇಟಿಯಾಗುವ ಸ್ಥಳವಾಗಿದ್ದಿತ್ತು.
  • ಇಸ್ರಾಯೇಲ್ ಹನ್ನೆರಡು ಕುಲಗಳಿಗೆ ಕಾನಾನ್ ಭೂಮಿಯನ್ನು ಯಾರ್ಯಾರಿಗೆ ಯಾವ ಭಾಗವನ್ನು ಕೊಡಬೇಕೆಂದು ಹೇಳುವ ಯೆಹೋಶುವನ ಮಾತುಗಳನ್ನು ಕೇಳುವುದಕ್ಕೆ ಅವರೆಲ್ಲರು ಶಿಲೋವಿನಲ್ಲಿ ಭೇಟಿಯಾಗುತ್ತಿದ್ದರು.
  • ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟುವುದಕ್ಕೆ ಮುಂಚಿತವಾಗಿ, ಇಸ್ರಾಯೇಲ್ಯರು ದೇವರಿಗೆ ಸರ್ವಾಂಗ ಹೋಮಗಳನ್ನು ಮಾಡುವುದಕ್ಕೆ ಶಿಲೋವಿಗೆ ಬರುತ್ತಿದ್ದರು.
  • ಸಮುವೇಲನು ಚಿಕ್ಕ ವಯಸ್ಸಿನಲ್ಲಿರುವಾಗ ತನ್ನ ತಾಯಿ ಹನ್ನಳು ತನ್ನ ಮಗನು ಯೆಹೋವನನ್ನು ಸೇವಿಸುವುದಕ್ಕೆ ಯಾಜಕನಾದ ಏಲಿಯಿಂದ ತರಬೇತಿಯನ್ನು ಹೊಂದುವುದಕ್ಕೆ ಶಿಲೋವಿನಲ್ಲಿರಲು ಅವನನ್ನು ಕರೆದುಕೊಂಡುಬಂದಿದ್ದಳು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೆತೇಲ್, ಪ್ರತಿಷ್ಠಾಪಿಸು, ಹನ್ನಳು, ಯೆರೂಸಲೇಮ್, ಯೊರ್ದನ್ ಹೊಳೆ, ಯಾಜಕ, ಹೋಮ, ಸಮುವೇಲ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7886, H7887