kn_tw/bible/names/samuel.md

2.8 KiB

ಸಮುವೇಲ

ಸತ್ಯಾಂಶಗಳು:

ಸಮುವೇಲ ಪ್ರವಾದಿಯಾಗಿದ್ದನು ಮತ್ತು ಇಸ್ರಾಯೇಲ್ ಕೊನೆಯ ನ್ಯಾಯಾಧೀಶನಾಗಿದ್ದನು. ಈತನು ಸೌಲ ಮತ್ತು ದಾವೀದರಿಬ್ಬರನ್ನು ಇಸ್ರಾಯೇಲ್ ಮೇಲೆ ಅರಸರನ್ನಾಗಿ ಅಭಿಷೇಕ ಮಾಡಿದ್ದನು.

  • ಸಮುವೇಲನು ಎಲ್ಕಾನ ಮತ್ತು ಹನ್ನಳಿಗೆ ರಾಮದಲ್ಲಿ ಜನಿಸಿದ್ದನು.
  • ಹನ್ನಳು ಬಂಜೆಯಾಗಿದ್ದಳು, ಆದ್ದರಿಂದ ದೇವರು ತನಗೆ ಒಂದು ಮಗುವನ್ನು ಕೊಡಬೇಕೆನ್ನುವ ಪ್ರಾರ್ಥನೆಯನ್ನು ಆಕೆ ಮಾಡಿದ್ದಳು. ಆ ಪ್ರಾರ್ಥನೆಗೆ ಸಮುವೇಲನೇ ಉತ್ತರವಾಗಿದ್ದನು.
  • ತನ್ನ ಪ್ರಾರ್ಥನೆಗೆ ದೇವರು ಉತ್ತರ ಕೊಟ್ಟು ಒಂದು ಗಂಡು ಮಗುವನ್ನು ಕೊಟ್ಟರೆ, ಹನ್ನಳು ಆ ಮಗುವನ್ನು ಯೆಹೋವನಿಗೆ ಸಮರ್ಪಿಸುತ್ತೇನೆಂದು ವಾಗ್ಧಾನ ಮಾಡಿದ್ದಳು, ಹಾಗೆಯೇ ಆಕೆಯ ಪ್ರಾರ್ಥನೆಗೆ ಉತ್ತರವನ್ನು ಪಡೆದುಕೊಂಡಳು.
  • ಆ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕೆ ಸಮುವೇಲನು ಚಿಕ್ಕವನಾಗಿದ್ದಾಗಲೇ, ಹನ್ನಳು ಅವನನ್ನು ದೇವಾಲಯದಲ್ಲಿ ಯಾಜಕನಾಗಿರುವ ಏಲಿಗೆ ಸಹಾಯ ಮಾಡಲು ಮತ್ತು ಆತನೊಂದಿಗೆ ಜೀವಿಸುವುದಕ್ಕೆ ಕಳುಹಿಸಿದಳು.
  • ದೇವರು ಸಮುವೇಲನನ್ನು ದೊಡ್ಡ ಪ್ರವಾದಿಯನ್ನಾಗಿ ಮಾಡಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಹನ್ನಳು, ತೀರ್ಪು ಮಾಡು, ಪ್ರವಾದಿ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H8050, G4545