kn_tw/bible/names/sheba.md

2.5 KiB

ಸೇಬ

ಸತ್ಯಾಂಶಗಳು:

ಪುರಾತನ ಕಾಲಗಳಲ್ಲಿ ಸೇಬ ಎನ್ನುವುದು ಪುರಾತನ ನಾಗರಿಕತೆಯಾಗಿದ್ದಿತ್ತು ಅಥವಾ ದಕ್ಷಿಣ ಅರೇಬಿಯಾದಲ್ಲಿ ಕಂಡುಬರುವ ಭೂಮಿಯ ದೇಶವಾಗಿದ್ದಿತ್ತು.

  • ಸೇಬ ದೇಶವು ಅಥವಾ ಪ್ರಾಂತ್ಯವು ಈಗಿನ ದೇಶಗಳಾಗಿರುವ ಯೆಮೆನ್ ಮತ್ತು ಇಥಿಯೋಪ್ಯಗಳ ಪಕ್ಕದಲ್ಲಿ ಬಹುಶಃ ಕಂಡುಬರುತ್ತಿರಬಹುದು.
  • ಈ ಸೀಮೆಯ ನಿವಾಸಿಗಳು ಬಹುಶಃ ಹಾಮ್ ಸಂತತಿಯಾಗಿರಬಹುದು.
  • ಸೇಬ ದೇಶದ ರಾಣಿ ಅರಸನಾದ ಸೊಲೊಮೋನನ ಜ್ಞಾನದ ಕುರಿತಾಗಿ ಮತ್ತು ವೈಭವದ ಕುರಿತಾಗಿ ಕೇಳಿಸಿಕೊಂಡಾಗ, ಆಕೆ ಆತನನ್ನು ಸಂದರ್ಶಿಸುವುದಕ್ಕೆ ಬಂದಿದ್ದಳು,
  • ಹಳೇ ಒಡಂಬಡಿಕೆ ವಂಶಾವಳಿಗಳಲ್ಲಿ “ಸೇಬ” ಎನ್ನುವ ಹೆಸರಿನ ಮೇಲೆ ಅನೇಕಮಂದಿಯನ್ನು ಪಟ್ಟಿ ಮಾಡಲಾಗಿರುತ್ತದೆ. ಸೇಬ ಎನ್ನುವ ಪ್ರಾಂತ್ಯವು ಬಹುಶಃ ಈ ಮನುಷ್ಯರಿಂದಲೇ ಬಂದಿದೆ ಎನ್ನುವುದಕ್ಕೆ ಸಾಧ್ಯತೆಗಳಿವೆ.
  • ಹಳೇ ಒಡಂಬಡಿಕೆಯಲ್ಲಿ ಬೇರ್ಷೆಬ ಎನ್ನುವ ಪಟ್ಟಣವನ್ನು ಸೇಬಗೆ ಹೋಲಿಸಿ ಒಂದುಸಲ ಹೇಳಲ್ಪಟ್ಟಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಅರೇಬಿಯಾ, ಬೇರ್ಷೆಬ, ಇಥಿಯೋಪ್ಯ, ಸೊಲೊಮೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5434, H7614