kn_tw/bible/names/paddanaram.md

3.0 KiB

ಪದ್ದನ್ ಅರಾಮ್

ಸತ್ಯಾಂಶಗಳು:

ಪದ್ದನ್ ಆರಾಮ್ ಎನ್ನುವುದು ಅಬ್ರಾಹಾಮನು ಕಾನಾನ್ ಭೂಮಿಗೆ ಹೋಗುವುದಕ್ಕೆ ಮುಂಚಿತವಾಗಿ ತನ್ನ ಕುಟುಂಬವೆಲ್ಲ ನಿವಾಸವಾಗಿರುವ ಪ್ರಾಂತ್ಯದ ಹೆಸರಾಗಿರುತ್ತದೆ. ಈ ಮಾತಿಗೆ “ಆರಾಮ್ ಬಯಲು” ಎಂದರ್ಥ.

  • ಅಬ್ರಾಹಾಮನು ಪದ್ದನ್ ಅರಾಮಿನಲ್ಲಿರುವ ಹಾರಾನ್ ಬಿಟ್ಟು ಕಾನಾನ್ ಭೂಮಿಗೆ ಪ್ರಯಾಣ ಮಾಡಿದಾಗ, ಉಳಿದ ತನ್ನ ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಹಾರಾನಿನಲ್ಲಿಯೇ ಜೀವಿಸಿದ್ದರು.
  • ಅನೇಕ ವರ್ಷಗಳಾದನಂತರ ಅಬ್ರಾಹಾಮನ ಬಂಧುಗಳಲ್ಲಿ ಇಸಾಕನಿಗೆ ಹೆಂಡತಿಯನ್ನು ಕಂಡುಕೊಳ್ಳಲು ಅಬ್ರಾಹಾಮನ ದಾಸನು ಪದ್ದನ್ ಅರಾಮಿಗೆ ಹೋದನು, ಅಲ್ಲಿ ಬೆತೂವೇಲನ ಮೊಮ್ಮೊಗಳಾದ ರೆಬೆಕ್ಕಳನ್ನು ಕಂಡುಕೊಂಡನು.
  • ಇಸಾಕ ಮತ್ತು ರೆಬೆಕ್ಕರವರ ಮಗನಾದ ಯಾಕೋಬನು ಕೂಡ ಪದ್ದನ್ ಅರಾಮಿಗೆ ಪ್ರಯಾಣ ಮಾಡಿದನು ಮತ್ತು ಹಾರಾನಿನಲ್ಲಿ ಜೀವಿಸುತ್ತಿರುವ ರೆಬೆಕ್ಕಳ ಅಣ್ಣನಾಗಿರುವ ಲಾಬಾನನ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಮಾಡಿಕೊಂಡನು.
  • ಆರಾಮ್, ಪದ್ದನ್-ಆರಾಮ್ ಮತ್ತು ಆರಾಮ್ ಸೀಮೆ ಎನ್ನುವವುಗಳು ಈಗಿನ ಸಿರಿಯಾ ದೇಶವಿರುವ ಸ್ಥಳದ ಒಂದೇ ಪ್ರಾಂತ್ಯಕ್ಕೆ ಸಂಬಂಧಪಟ್ಟವುಗಳಾಗಿರುತ್ತವೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಆರಾಮ್, ಬೆತೂವೇಲ, ಕಾನಾನ್, ಹಾರಾನ್, ಯಾಕೋಬ, ಲಾಬಾನ್, ರೆಬೆಕ್ಕ, ಸಿರಿಯಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6307