kn_tw/bible/names/nileriver.md

4.2 KiB

ನೈಲ್ ನದಿ, ಐಗುಪ್ತ ನದಿ, ನೈಲ್

ಸತ್ಯಾಂಶಗಳು:

ನೈಲ್ ಎನ್ನುವುದು ಈಶಾನ್ಯ ಆಫ್ರಿಕಾದಲ್ಲಿರುವ ಉದ್ದವಾದ ಮತ್ತು ಅಗಲವಾದ ನದಿಯಾಗಿರುತ್ತದೆ. ಇದು ವಿಶೇಷವಾಗಿ ಐಗುಪ್ತ ದೇಶದ ಮುಖ್ಯ ನದಿಯಾಗಿ ಪ್ರಸಿದ್ಧಿ ಹೊಂದಿರುತ್ತದೆ..

  • ನೈಲ್ ನದಿ ಉತ್ತರ ಐಗುಪ್ತದಿಂದ ಮೆಡಿಟರೇನಿಯನ್ ಸಮುದ್ರದೊಳಗೆ ಹರಡುತ್ತದೆ.
  • ನೈಲ್ ನದಿಯ ಎರಡು ಬದಿಗೆ ಇರುವ ಫಲವತ್ತಾದ ಭೂಮಿಯಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ.
  • ಇದು ಬೆಳೆಗಳಿಗೆ ಬೇಕಾದ ನೀರಿನ ಮುಖ್ಯ ಆಧಾರವಾಗಿರುವದರಿಂದ ನೈಲ್ ನದಿಯ ಪಕ್ಕದಲ್ಲಿಯೇ ಐಗುಪ್ತರಲ್ಲಿ ಹೆಚ್ಚಾಗಿ ಜೀವಿಸುತ್ತಾರೆ.
  • ಇಸ್ರಾಯೇಲ್ಯರು ಗೋಷೆನ್ ಸೀಮೆಯಲ್ಲಿ ನಿವಾಸವಾಗಿದ್ದರೂ, ಇದು ನೈಲ್ ನದಿ ಪಕ್ಕದಲ್ಲಿಯೇ ಇದ್ದಿತ್ತು ಮತ್ತು ತುಂಬಾ ಫಲವತ್ತಾದ ಭೂಮಿಯಾಗಿದ್ದಿತ್ತು.
  • ಮೋಶೆ ಶಿಶುವಾಗಿದ್ದಾಗ ತನ್ನನ್ನು ಫರೋಹನ ಮನುಷ್ಯರಿಂದ ಬಚ್ಚಿಡುವುದಕ್ಕೆ ತನ್ನ ತಂದೆತಾಯಿಗಳು ನೈಲ್ ಜೊಂಡುಗಳ ಮಧ್ಯೆಯಲ್ಲಿ ಒಂದು ಬುಟ್ಟಿಯಲ್ಲಿ ಹಾಕಿ ಬಿಟ್ಟಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಗೋಷೆನ್, ಮೋಶೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 08:04_ ಐಗುಪ್ತ ದೇಶವು ಶಕ್ತಿಯುತವಾದ ದೊಡ್ಡ ದೇಶವಾಗಿರುತ್ತದೆ, ಇದು ___ ನೈಲ್ ನದಿಯ ____ ಪಕ್ಕದಲ್ಲಿ ಕಂಡುಬರುತ್ತದೆ.
  • 09:04_ ಇಸ್ರಾಯೇಲ್ಯರು ಅನೇಕಮಂದಿ ಶಿಶುಗಳನ್ನು ಹೊಂದುತ್ತಿದ್ದಾರೆಂದು ಫರೋಹನು ಕಂಡನು, ಆದ್ದರಿಂದ ಇಸ್ರಾಯೇಲ್ಯರ ಎಲ್ಲಾ ಶಿಶುಗಳನ್ನು ಕೊಂದು ___ ನೈಲ್ ನದಿಯಲ್ಲಿ ___ ಬಿಸಾಡಿರಿ ಎಂದು ತನ್ನ ಜನರಿಗೆ ಅಪ್ಪಣೆ ಕೊಟ್ಟನು.
  • 09:06_ ತನ್ನ ತಂದೆತಾಯಿಯರು ಶಿಶುವನ್ನು ಹೆಚ್ಚಿನ ಕಾಲ ಬಚ್ಚಿಡುವುದಕ್ಕಾಗದ ಕಾರಣದಿಂದ, ಆ ಶಿಶುವು ಸಾಯದಂತೆ ತನ್ನ ರಕ್ಷಿಸುವುದಕ್ಕೆ ___ ನೈಲ್ ನದಿಯ ___ ತುದಿ ಭಾಗದಲ್ಲಿ ಜೊಂಡುಗಳ ಮಧ್ಯೆಯಲ್ಲಿ ತೇಲಾಡುವ ಬುಟ್ಟಿಯಲ್ಲಿ ಅವನನ್ನು ಇಟ್ಟು ನೀರಿನ ಮೇಲೆ ಬಿಟ್ಟರು.
  • 10:03_ ದೇವರು ____ ನೈಲ್ ನದಿಯನ್ನು ___ ರಕ್ತವನ್ನಾಗಿ ಮಾರ್ಪಡಿಸಿದರು, ಆದರೂ ಫರೋಹನು ಇಸ್ರಾಯೇಲ್ಯರನ್ನು ಬಿಡಲಿಲ್ಲ.

ಪದ ಡೇಟಾ:

  • Strong's: H2975, H4714, H5104