kn_tw/bible/names/moses.md

4.8 KiB

ಮೋಶೆ

ಸತ್ಯಾಂಶಗಳು:

ಮೋಶೆ ಸುಮಾರು 40 ವರ್ಷಗಳ ಕಾಲ ಇಸ್ರಾಯೇಲ್ ಜನರಿಗೆ ನಾಯಕನೂ ಮತ್ತು ಪ್ರವಾದಿಯೂ ಆಗಿದ್ದನು.

  • ಮೋಶೆ ಶಿಶುವಾಗಿದ್ದಾಗ, ಮೋಶೆ ತಂದೆತಾಯಿಗಳು ತನ್ನನ್ನು ಐಗುಪ್ತ ಫರೋಹನಿಗೆ ಕಾಣಿಸದಂತೆ ಬಚ್ಚಿಡಬೇಕೆಂದು ಒಂದು ಬುಟ್ಟಿಯಲ್ಲಿಟ್ಟು ನೈಲ್ ನದಿಯಲ್ಲಿ ಬಿಟ್ಟಿದ್ದರು. ಮೋಶೆಯ ಅಕ್ಕ ಆ ನದಿಯಲ್ಲಿ ಹೋಗುತ್ತಿರುವ ಆ ಬುಟ್ಟಿಗೆ ಕಾವಲುಗಾರಳಾಗಿದ್ದಳು. ಆಗ ಫರೋಹನ ಮಗಳು ಆ ಬುಟ್ಟಿಯನ್ನು ಕಂಡುಕೊಂಡಾಗ ಮೋಶೆ ಪ್ರಾಣವು ಕಾಪಾಡಲ್ಪಟ್ಟಿತ್ತು ಮತ್ತು ಅವನನ್ನು ತನ್ನ ಮಗನನ್ನಾಗಿ ಬೆಳೆಸಿಕೊಳ್ಳಲು ಅರಮನಗೆ ಕರೆದುಕೊಂಡು ಹೋದಳು.
  • ಐಗುಪ್ತ ದೇಶದಲ್ಲಿ ಗುಲಾಮಗಿರಿಯಲ್ಲಿರುವ ಇಸ್ರಾಯೇಲ್ಯರನ್ನು ಬಿಡಿಸುವುದಕ್ಕೆ ಮತ್ತು ಅವರನ್ನು ವಾಗ್ಧಾನ ದೇಶದೊಳಗೆ ಸೇರಲು ನಡೆಸುವುದಕ್ಕೆ ದೇವರು ಮೋಶೆಯನ್ನು ಆದುಕೊಂಡರು.
  • ಐಗುಪ್ತದಿಂದ ಇಸ್ರಾಯೇಲ್ಯರು ಬಿಡಿಸಲ್ಪಟ್ಟನಂತರ, ಅವರು ಅರಣ್ಯದಲ್ಲಿ ಹಾದು ಹೋಗುತ್ತಿರುವಾಗ, ದೇವರು ಮೋಶೆಗೆ ಹತ್ತು ಆಜ್ಞೆಗಳನ್ನು ಬರೆದಿರುವ ಎರಡು ಶಿಲಾಶಾಸನಗಳನ್ನು ಕೊಟ್ಟನು.
  • ಆತನ ಕೊನೆಯ ಜೀವನದಲ್ಲಿ, ಮೋಶೆ ವಾಗ್ಧಾನ ದೇಶವನ್ನು ನೋಡಿದನು, ಆದರೆ ಆ ದೇಶದೊಳಗೆ ಪ್ರವೇಶವಾಗಲಿಲ್ಲ, ಯಾಕಂದರೆ ಆತನು ದೇವರಿಗೆ ಅವಿಧೇಯನಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಮಿರ್ಯಾಮ, ವಾಗ್ಧಾನ ದೇಶ, ಹತ್ತು ಆಜ್ಞೆಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 09:12 ಒಂದು ದಿನ ___ ಮೋಶೆ ___ ಕುರಿಗಳನ್ನು ಮೇಯಿಸುತ್ತಿರುವಾಗ, ಅವನು ಉರಿಯುತ್ತಿರುವ ಪೊದೆಯನ್ನು ನೋಡಿದನು.
  • 12:05 “ಹೆದರುವುದನ್ನು ನಿಲ್ಲಿಸಿರಿ, ಈ ದಿನದಂದು ದೇವರು ನಿಮಗಾಗಿ ಯುದ್ಧ ಮಾಡುವನು ಮತ್ತು ನಿಮ್ಮನ್ನು ರಕ್ಷಿಸುವನು” ಎಂದು ___ ಮೋಶೆ ___ ಇಸ್ರಾಯೇಲ್ಯರಿಗೆ ಹೇಳಿದನು.
  • 12:07 ಸಮುದ್ರದ ಮೇಲೆ ನಿನ್ನ ಕೈಯನ್ನು ಚಾಚಿ, ನೀರು ವಿಭಾಗಿಸುವಂತೆ ಮಾಡಬೇಕೆಂದು ದೇವರು ____ ಮೋಶೆಗೆ ___ ಹೇಳಿದನು.
  • 12:12 ಐಗುಪ್ತದವರೆಲ್ಲರು ಸತ್ತು ಹೋಗಿರುವುದನ್ನು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರಲ್ಲಿ ಭರವಸೆವಿಟ್ಟರು ಮತ್ತು ಮೋಶೆ ದೇವರ ಪ್ರವಾದಿಯೆಂದು ನಂಬಿದರು.
  • 13:07 ಇದಾದನಂತರ, ದೇವರು ಈ ಎರಡು ಶಿಲಾಶಾಸನಗಳ ಮೇಲೆ ಈ ಹತ್ತು ಆಜ್ಞೆಗಳನ್ನು ಬರೆದು, ಅವುಗಳನ್ನು ___ ಮೋಶೆಗೆ ____ ಕೊಟ್ಟನು.

\

ಪದ ಡೇಟಾ:

  • Strong's: H4872, H4873, G3475