kn_tw/bible/names/lystra.md

2.5 KiB

ಲೂಸ್ತ್ರ

ಸತ್ಯಾಂಶಗಳು:

ಲೂಸ್ತ್ರ ಎನ್ನುವುದು ಪುರಾತನ ಚಿಕ್ಕ ಆಸ್ಯದಲ್ಲಿ ಒಂದು ಪಟ್ಟಣವಾಗಿತ್ತು, ಪೌಲನು ಮಾಡಿದ ಸುವಾರ್ತೆ ಪ್ರಯಾಣಗಳಲ್ಲಿ ಈ ಪಟ್ಟಣವನ್ನು ಸಂದರ್ಶಿಸಿದ್ದನು. ಲುಕವೋನ್ಯ ಸೀಮೆಯಲ್ಲಿ ಇದು ಕಂಡುಬರುತ್ತದೆ, ಇದು ಈಗಿನ ಆಧುನಿಕ ದಿನದ ಟರ್ಕಿ ದೇಶದಲ್ಲಿರುತ್ತದೆ.

  • ಪೌಲನು ಮತ್ತು ತನ್ನ ಜೊತೆಯಲ್ಲಿರುವವರು ಇಕೋನ್ಯದಲ್ಲಿ ಯೆಹೂದ್ಯರಿಂದ ಬೆದರಿಸಲ್ಪಟ್ಟಾಗ ದೆರ್ಬೆ ಮತ್ತು ಲೂಸ್ತ್ರಗಳಿಗೆ ಹೋದರು.
  • ಲೂಸ್ತ್ರದಲ್ಲಿ ಪೌಲನು ತಿಮೊಥೆಯನ್ನು ಭೇಟಿಯಾದನು, ಈ ತಿಮೊಥೆಯನು ಸಹ ಸುವಾರ್ತೀಕನಾಗಿ ಮತ್ತು ಸಭೆಯ ಸ್ಥಾಪಕನಾಗಿ ಮಾರ್ಪಟ್ಟನು.
  • ಪೌಲನು ಲೂಸ್ತ್ರದಲ್ಲಿ ಹುಟ್ಟು ಕುಂಟನನ್ನು ಗುಣಪಡಿಸಿದನಂತರ, ಅಲ್ಲಿರುವ ಜನರು ಪೌಲನನ್ನು ಮತ್ತು ಬಾರ್ನಬನನ್ನು ದೇವರುಗಳಾಗಿ ಎನಿಸಿ, ಅವರನ್ನು ಆರಾಧಿಸುವುದಕ್ಕೆ ಯತ್ನಿಸಿದರು, ಆದರೆ ಅಪೊಸ್ತಲರು ಅವರನ್ನು ಗದರಿಸಿದರು ಮತ್ತು ಅದನ್ನು ಮಾಡದಂತೆ ಅವರನ್ನು ನಿಲ್ಲಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಸುವಾರ್ತಿಕ, ಇಕೋನ್ಯ, ತಿಮೊಥೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G3082