kn_tw/bible/names/judassonofjames.md

2.6 KiB

ಯಾಕೋಬನ ಮಗನಾದ ಯೂದ

ಸತ್ಯಾಂಶಗಳು:

ಯಾಕೋಬನ ಮಗನಾದ ಯೂದನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಈ ಯೂದ ಮತ್ತು ಇಸ್ಕರಿಯೋತ ಯೂದನು ಒಬ್ಬರಲ್ಲ, ಬೇರೆ ಬೇರೆಯಾಗಿರುತ್ತಾರೆ.

  • ಸತ್ಯವೇದದಲ್ಲಿ ಅನೇಕಸಲ ಪುರುಷರಿಗೆ ಒಂದೇ ಹೆಸರು ಇರುವಾಗ, ಅವರನ್ನು ತಮ್ಮ ತಂದೆಯ ಹೆಸರುಗಳನ್ನು ಜೋಡಿಸಿ ಕರೆಯುತ್ತಿದ್ದರು. ಇಲ್ಲಿ ಯೂದ ನು “ಯಾಕೋಬನ ಮಗ” ಎಂಬುದಾಗಿ ಗುರುತಿಸಲ್ಪಟ್ಟಿದ್ದಾನೆ.
  • ಇನ್ನೊಬ್ಬ ವ್ಯಕ್ತಿ ಹೆಸರು ಕೂಡ ಯೂದ ಆಗಿದ್ದನು, ಆದರೆ ಇವನು ಯೇಸುವಿನ ತಮ್ಮನಾಗಿದ್ದನು. ಇವನನ್ನು “ಯೂದಾ” ಎಂದೂ ಕರೆಯುತ್ತಾರೆ.
  • ಹೊಸ ಒಡಂಬಡಿಕೆಯಲ್ಲಿ “ಯೂದಾ” ಎಂದು ಕರೆಯಲ್ಪಡುವ ಪುಸ್ತಕವನ್ನು ಬಹುಶಃ ಯೇಸುವಿನ ಸಹೋದರನಾದ ಈ ಯುದಾನೇ ಬರೆದಿರಬಹುದು. ಯಾಕಂದರೆ ಈ ಪುಸ್ತಕದಲ್ಲಿ ರಚನಾಕಾರರು “ಯಾಕೋಬನ ಸಹೋದರ” ಎಂಬುದಾಗಿ ತನ್ನನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ಯಾಕೋಬನು ಯೇಸುವಿನ ಮತ್ತೊಬ್ಬ ಸಹೋದರನಾಗಿದ್ದನು.
  • ಯೂದಾ ಪುಸ್ತಕವು ಯಾಕೋಬನ ಮಗನು, ಯೇಸುವಿನ ಶಿಷ್ಯನಾದ ಯೂದಾನು ಬರೆದಿರುವುದಕ್ಕೆ ಸಾಧ್ಯತೆಗಳಿವೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಯಾಕೋಬ (ಜೆಬೆದಾಯನ ಮಗ), ಯೂದಾ ಇಸ್ಕರಿಯೋತ, ಮಗ, ಹನ್ನೆರಡು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2455