kn_tw/bible/names/judasiscariot.md

5.2 KiB

ಇಸ್ಕರಿಯೋತ ಯೂದ

ಸತ್ಯಾಂಶಗಳು:

ಇಸ್ಕರಿಯೋತ ಯೂದ ಯೇಸುವಿನ ಅಪೊಸ್ತಲರಲ್ಲಿ ಒಬ್ಬನಾಗಿರುತ್ತಾನೆ. ಇವನೇ ಯೇಸುವನ್ನು ಯೆಹೂದ್ಯ ನಾಯಕರಿಗೆ ಹಿಡಿಸಿಕೊಟ್ಟಿರುತ್ತಾನೆ.

  • “ಇಸ್ಕರಿಯೋತ” ಎನ್ನುವ ಹೆಸರಿಗೆ “ಕೆರಿಯೋತನಿಂದ ಬಂದವನು” ಎಂದರ್ಥ, ಇದು ಯೂದನು ಆ ಪಟ್ಟಣದಲ್ಲಿ ಬೆಳೆದಿರುತ್ತಾನೆಂದು ನಮಗೆ ಸೂಚಿಸುತ್ತಿದೆ.
  • ಇಸ್ಕರಿಯೋತ ಯೂದನು ಅಪೊಸ್ತಲರ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಮತ್ತು ಆದರೆ ಆ ಹಣದಲ್ಲಿ ಸ್ವಲ್ಪ ಹಣವನ್ನು ಕದಿಯುತ್ತಾ ತನಗೋಸ್ಕರ ಉಪಯೋಗಿಸಿಕೊಳ್ಳುತ್ತಿದ್ದನು.
  • ಯೇಸು ಎಲ್ಲಿರುತ್ತಾನೆನ್ನುವ ಸಮಾಚಾರವನ್ನು ಯೂದನು ಧರ್ಮ ನಾಯಕರಿಗೆ ಹೇಳುವುದರ ಮೂಲಕ ಯೇಸುವಿಗೆ ದ್ರೋಹ ಮಾಡಿದ್ದಾನೆ, ಇದರಿಂದ ಅವರು ಆತನನ್ನು ಬಂಧಿಸಿದರು.
  • ಧರ್ಮ ನಾಯಕರೆಲ್ಲರು ಯೇಸುವಿಗೆ ಸಾಯಿಸುವ ಶಿಕ್ಷೆ ಹಾಕಿದನಂತರ, ಯೇಸುವಿಗೆ ದ್ರೋಹ ಮಾಡಿದ್ದೇನೆಂದು ಯೂದನು ದುಃಖಪಟ್ಟನು, ಆದ್ದರಿಂದ ಅವನು ಮೋಸ ಮಾಡಿದ್ದಕ್ಕೆ ಕೊಟ್ಟ ಹಣವನ್ನು ಯೆಹೂದ್ಯರ ನಾಯಕರಿಗೆ ತಿರುಗಿ ಕೊಟ್ಟು, ತನ್ನನ್ನು ತಾನು ಸಾಯಿಸಿಕೊಂಡನು.
  • ಇನ್ನೊಬ್ಬ ಅಪೊಸ್ತಲ ಹೆಸರು ಕೂಡ ಯೂದ ಎಂದಿತ್ತು, ಇವನು ಯೇಸುವಿನ ಸಹೋದರರಲ್ಲಿ ಒಬ್ಬನಾಗಿದ್ದನು. ಯೇಸುವಿನ ಸಹೋದರನು ಕೂಡ “ಯೂದ” ಎನ್ನುವ ಹೆಸರಿನವನಿದ್ದಾನೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ದ್ರೋಹ, ಯೆಹೂದ್ಯರ ನಾಯಕರು, ಯಾಕೋಬನ ಮಗನು ಯೂದ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 38:02 ಯೇಸುವಿನ ಶಿಷ್ಯರುಗಳಲ್ಲಿ ___ ಯೂದ __ ಎನ್ನುವ ಹೆಸರಿನಲ್ಲಿ ಒಬ್ಬ ಮನುಷ್ಯನಿದ್ದನು. ಯೇಸು ಮತ್ತು ಶಿಷ್ಯರು ಯೆರೂಸಲೇಮಿನೊಳಗೆ ಬಂದಾಗ, ___ ಯೂದನು __ ಯೆಹೂದ್ಯರ ನಾಯಕರ ಬಳಿಗೆ ಹೋದನು ಮತ್ತು ಹಣಕ್ಕಾಗಿ ಯೇಸುವನ್ನು ಅವರ ಕೈಗೆ ಒಪ್ಪಿಸಿಕೊಟ್ಟನು.
  • 38:03 ಯೆಹೂದ್ಯ ನಾಯಕರೆಲ್ಲರು ಮಹಾ ಯಾಜಕನಿಂದ ನಡೆಸಲ್ಪಟ್ಟರು, ಯೇಸುವನ್ನು ಒಪ್ಪಿಸಿಕೊಟ್ಟಿದ್ದಕ್ಕಾಗಿ ___ ಯೂದನಿಗೆ ___ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
  • 38:14 ___ ಯೂದನು ___ ಯೆಹೂದ್ಯ ನಾಯಕರು, ಸೈನಿಕರು ಮತ್ತು ದೊಡ್ಡ ಜನಸಮೂಹದೊಂದಿಗೆ ಬಂದನು. ಅವರೆಲ್ಲರು ಖಡ್ಗ ಗಳನ್ನು ಮತ್ತು ಬೆತ್ತಗಳನ್ನು ಹೊತ್ತಿಕೊಂಡು ಹೋಗುತ್ತಿದ್ದರು. ___ ಯೂದ __ ಯೇಸುವಿನ ಬಳಿಗೆ ಬಂದು, “ಬೋಧಕನಿಗೆ ಶುಭಾಷಯಗಳನ್ನು” ಹೇಳಿ, ಆತನನ್ನು ಮುದ್ದಿಟ್ಟುಕೊಂಡನು.
  • 39:08 ಆ ಸಮಯದಲ್ಲಿಯೇ, ಯೆಹೂದ್ಯರ ನಾಯಕರು ಯೇಸುವನ್ನು ಮರಣ ಶಿಕ್ಷೆಯನ್ನು ಹಾಕಿದ್ದಾರೆಂದು ದ್ರೋಹಿಯಾದ ___ ಯೂದನು ___ ನೋಡಿದನು. ಆಗ ಅವನು ತುಂಬಾ ದುಃಖಪಟ್ಟನು ಮತ್ತು ಹೊರಗೆ ಹೋಗಿ, ತನ್ನನ್ನು ತಾನು ಸಾಯಿಸಿಕೊಂಡನು.

ಪದ ಡೇಟಾ:

  • Strong's: G2455, G2469