kn_tw/bible/names/josephnt.md

6.5 KiB

ಯೋಸೇಫ (ಹೊಸ ಒಡಂಬಡಿಕೆ)

ಸತ್ಯಾಂಶಗಳು:

ಯೋಸೇಫನು ಯೇಸುವಿನ ಭೂಲೋಕದ ತಂದೆಯಾಗಿದ್ದನು ಮತ್ತು ತನ್ನ ಮಗನನ್ನಾಗಿ ಸಾಕಿದನು. ಇವನು ನೀತಿವಂತನಾಗಿದ್ದನು ಮತ್ತು ಬಡಿಗಿ ಕೆಲಸ ಮಾಡುವವನಾಗಿದ್ದನು.

  • ಯೋಸೇಫನು ಯೆಹೂದ್ಯರ ಹುಡಿಗಿಯಾದ ಮರಿಯಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು, ಅವರು ಪ್ರಧಾನ ಮಾಡಿಕೊಂಡಿರುವ ಸಮಯದಲ್ಲಿಯೇ, ದೇವರು ಮೆಸ್ಸೀಯನಾದ ಯೇಸುಕ್ರಿಸ್ತನಿಗೆ ಮರಿಯಳನ್ನು ತಾಯಿಯನ್ನಾಗಿ ಮಾಡಿದನು.
  • ಪವಿತ್ರಾತ್ಮನು ಅದ್ಭುತವಾದ ರೀತಿಯಲ್ಲಿ ಮರಿಯಳು ಗರ್ಭ ಧರಿಸುವಂತೆ ಮಾಡಿದನೆಂದು ಮತ್ತು ಮರಿಯಳ ಶಿಶುವು ದೇವರ ಮಗನೆಂದು ದೂತನು ಯೋಸೇಫನಿಗೆ ಹೇಳಿದನು.
  • ಯೇಸು ಹುಟ್ಟಿದನಂತರ, ಹೆರೋದನಿಂದ ಯೇಸುವನ್ನು ತಪ್ಪಿಸಲು ಶಿಶುವನ್ನು ಮತ್ತು ಮರಿಯಳನ್ನು ಐಗುಪ್ತಕ್ಕೆ ಕರೆದುಕೊಂಡು ಹೋಗಬೇಕೆಂದು ದೂತನು ಯೋಸೇಫನಿಗೆ ತಿಳಿಸಿದನು.
  • ಸ್ವಲ್ಪ ಕಾಲವಾದನಂತರ ಯೋಸೇಫ ಮತ್ತು ತನ್ನ ಕುಟುಂಬವು ಗಲಿಲಾಯದಲ್ಲಿರುವ ನಜರೇತನಲ್ಲಿ ಜೀವಿಸಿದರು, ಅಲ್ಲಿಯೇ ಅವನು ಬಡಿಗೆ ಕೆಲಸವನ್ನು ಮಾಡಿಕೊಳ್ಳುತ್ತಾ ಜೀವನವನ್ನು ಮುಂದೆವರಿಸಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕ್ರಿಸ್ತ, ಗಲಿಲಾಯ, ಯೇಸು, ನಜರೇತ, ದೇವರ ಮಗ, ಕನ್ನಿಕೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 22:04 ಈಕೆ (ಮರಿಯ) ಕನ್ನಿಕೆಯಾಗಿದ್ದಳು ಮತ್ತು ___ ಯೋಸೇಫ __- ಎನ್ನುವ ಹೆಸರಿನವನನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು.
  • 23:01 ನೀತಿವಂತನಾಗಿರುವ __ -ಯೋಸೇಫ ___ ಎನ್ನುವ ವ್ಯಕ್ತಿಗೆ ಮತ್ತು ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು. ಮರಿಯಳು ಗರ್ಭವನ್ನು ಧರಿಸಿದ್ದಾಳೆಂದು ಅವನು ಕೇಳಿದಾಗ, ಆ ಶಿಶುವು ನನ್ನದಲ್ಲ ಎಂದು ಮನದಲ್ಲಿ ತಿಳಿದನು. ಅವನು ಆಕೆಯನ್ನು ಅವಮಾನ ಮಾಡಬೇಕೆಂದು ಬಯಸಲಿಲ್ಲ, ಇದರಿಂದ ಅವನು ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚನೆ ಮಾಡಿದ್ದನು.
  • 23:02 “__ ಯೋಸೇಫನೇ ___ , ನಿನ್ನ ಹೆಂಡತಿಯಾದ ಮರಿಯಳನ್ನು ಕರೆದುಕೊಂಡು ಹೋಗುವುದಕ್ಕೆ ಹೆದರಬೇಡ” ಎಂದು ದೂತ ಹೇಳಿದನು. ಆಕೆಯ ಗರ್ಭದಲ್ಲಿರುವ ಶಿಶುವು ಪವಿತ್ರಾತ್ಮನಿಂದ ಬಂದಿರುವ ಶಿಶುವಾಗಿರುತ್ತದೆ. ಆಕೆ ಒಬ್ಬ ಮಗನಿಗೆ ಜನ್ಮವನ್ನು ಕೊಡುತ್ತಾಳೆ. ಆತನಿಗೆ ಯೇಸು ಹೆಸರಿಡಬೇಕು (ಈ ಹೆಸರಿಗೆ “ಯೆಹೋವನು ರಕ್ಷಿಸುವನು” ಎಂದರ್ಥ), ಯಾಕಂದರೆ ಆತನು ಜನರ ಪಾಪಗಳಿಂದ ಅವರನ್ನು ರಕ್ಷಿಸುವನು.
  • 23:03 ಆದ್ದರಿಂದ ___ ಯೋಸೇಫನು ____ ಮರಿಯಳನ್ನು ಮದುವೆ ಮಾಡಿಕೊಂಡನು ಮತ್ತು ಆತನು ಆಕೆಯನ್ನು ತನ್ನ ಹೆಂಡತಿಯಾಗಿ ಕರೆದುಕೊಂಡು ಹೋದನು, ಆದರೆ ಆಕೆ ಹೆರೆಗೆ ಆಗುವವರೆಗೂ ಅವನು ಆಕೆಯೊಂದಿಗೆ ಕೂಡಿರಲಿಲ್ಲ.
  • 23:04 ___ ಯೋಸೇಫನು ___ ಮತ್ತು ಮರಿಯಳು ನಿವಾಸವಾಗಿದ್ದ ನಜರೇತಿನಿಂದ ಬೆತ್ಲೆಹೇಮಿಗೆ ಸೇರಲು ತುಂಬಾ ದೂರ ಪ್ರಯಾಣ ಮಾಡಬೇಕಾಗಿದ್ದಿತ್ತು. ಯಾಕಂದರೆ ಅವರ ಪೂರ್ವಜನಾಗಿರುವ ದಾವೀದನ ಊರು ಬೆತ್ಲೆಹೇಮ್ ಆಗಿತ್ತು.
  • 26:04 “ನಿಮ್ಮೊಂದಿಗೆ ನಾನು ಹೇಳುತ್ತಿರುವ ಈ ಮಾತುಗಳೆಲ್ಲವೂ ಈ ಕ್ಷಣದಲ್ಲಿಯೇ ನೆರವೇರಿಸಲ್ಪಡುತ್ತಿವೆಯೆಂದು” ಯೇಸು ಹೇಳಿದನು. ಅಲ್ಲಿರುವ ಎಲ್ಲಾ ಜನರು ಬೆರಗಾದರು. ಅವರೆಲ್ಲರು “ಇವನು ____ ಯೋಸೇಫನ ___ ಮಗನಲ್ಲವೋ?” ಎಂದು ಹೇಳಿಕೊಂಡರು.

ಪದ ಡೇಟಾ:

  • Strong's: G2501