kn_tw/bible/names/jonah.md

2.7 KiB

ಯೋನ

ಪದದ ಅರ್ಥವಿವರಣೆ:

ಯೋನನು ಹಳೇ ಒಡಂಬಡಿಕೆಯಲ್ಲಿ ಇಬ್ರಿ ಪ್ರವಾದಿಯಾಗಿದ್ದನು.

  • ಯೋನನ ಗ್ರಂಥವು ನಿನೆವೆ ಜನರಿಗೆ ಸಂದೇಶವನ್ನು ಹೇಳುವುದಕ್ಕೆ ದೇವರು ಯೋನನನ್ನು ಕಳುಹಿಸಿದಾಗ ಏನು ನಡೆದಿದೆಯೆನ್ನುವ ಕಥೆಯನ್ನು ಚೆನ್ನಾಗಿ ವಿವರಿಸುತ್ತದೆ.
  • ಯೋನನು ನಿನೆವೆಗೆ ಹೋಗುವುದಕ್ಕೆ ನಿರಾಕರಿಸಿದನು ಮತ್ತು ತಾರ್ಷೀಷಿಗೆ ಹೋಗುವ ಹಡಗನ್ನು ಹಿಡಿದು ಅದರಲ್ಲಿ ಪ್ರಯಾಣಿಸಿದನು.
  • ಆ ಹಡಗು ತುಂಬಿ ಮುಳುಗುವಷ್ಟು ದೊಡ್ಡ ಬಿರುಗಾಳಿಯನ್ನು ದೇವರುಂಟು ಮಾಡಿದರು.
  • ಅವನು ದೇವರಿಂದ ಓಡಿ ಬಂದಿದ್ದೇನೆಂದು, ತನ್ನನ್ನು ಸಮುದ್ರದೊಳಗೆ ಎಸೆದು ಹಾಕಬೇಕೆನ್ನುವ ಸಲಹೆಯನ್ನು ಆ ಹಡಗನ್ನು ನಡೆಸುತ್ತಿರುವ ಮನುಷ್ಯರಿಗೆ ಯೋನನು ಹೇಳಿದನು. ಅವರು ಅವನು ಹೇಳಿದಂತೆ ಮಾಡಿದಾಗ ಆ ಬಿರುಗಾಳಿಯು ನಿಂತುಹೋಯಿತು.
  • ಯೋನನನ್ನು ಒಂದು ದೊಡ್ಡ ಮೀನು ನುಂಗಿಬಿಟ್ಟಿತು, ಮತ್ತು ಅವನು ಆ ಮೀನಿನೊಳಗೆ ಮೂರು ದಿನ ಹಗಲು ರಾತ್ರಿಗಳ ಕಾಲ ಇದ್ದನು.
  • ಆದಾದನಂತರ, ಯೋನನು ನಿನೆವೆಗೆ ಹೋದನು ಮತ್ತು ಅಲ್ಲಿರುವ ಜನರಿಗೆ ಸಂದೇಶವನ್ನು ಪ್ರಕಟಿಸಿದನು, ಮತ್ತು ಅವರು ತಮ್ಮ ಪಾಪಗಳಿಂದ ತಿರುಗಿಕೊಂಡರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅವಿಧೇಯತೆ, ನಿನೆವೆ, ತಿರುಗಿಕೋ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3124, G2495