kn_tw/bible/names/job.md

3.4 KiB

ಯೋಬ

ಸತ್ಯಾಂಶಗಳು:

ಯೋಬನು ದೇವರ ಮುಂದೆ ನೀತಿವಂತನು ಮತ್ತು ದೋಷವಿಲ್ಲದವನು ಎಂಬುದಾಗಿ ಸತ್ಯವೇದದಲ್ಲಿ ವಿವರಿಸಲ್ಪಟ್ಟ ವ್ಯಕ್ತಿಯಾಗಿರುತ್ತಾನೆ. ಈತನು ಭಯಂಕರವಾದ ಶ್ರಮೆಗಳ ಮೂಲಕ ದೇವರಲ್ಲಿಟ್ಟ ಆತನ ನಂಬಿಕೆಯನ್ನು ಕಾಪಾಡಿಕೊಂಡ ಭಕ್ತನಾಗಿ ಪ್ರಸಿದ್ಧಿ ಹೊಂದಿದವನು.

  • ಯೋಬನು ಊಚ್ ದೇಶದಲ್ಲಿ ಜೀವಿಸಿದ್ದನು, ಇದು ಕಾನಾನ್ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ, ಬಹುಶಃ ಇದು ಎದೋಮ್ಯರ ಸೀಮೆಗೆ ತುಂಬಾ ಹತ್ತಿರವಾಗಿತ್ತು.
  • ಈತನು ಏಸಾವ ಮತ್ತು ಯಾಕೋಬರ ಕಾಲದಲ್ಲಿ ಜೀವಿಸಿದವನಾಗಿದ್ದನೆಂದು ಒಂದು ವಿವರಣೆಯಿದೆ, ಯಾಕಂದರೆ ಯೋಬನ ಸ್ನೇಹಿತರಲ್ಲಿ ಒಬ್ಬ ಸ್ನೇಹಿತನಾಗಿರುವ “ತೇಮಾನೀಯನಿದ್ದನು”, ಇದು ಏಸಾವನ ಮೊಮ್ಮೊಗನಾದ ಮೇಲೆ ಜನರ ಗುಂಪಿಗೆ ಹೆಸರಾಗಿದ್ದಿತ್ತು.
  • ಹಳೇ ಒಡಂಬಡಿಕೆಯಲ್ಲಿರುವ ಯೋಬನ ಗ್ರಂಥವು ಯೋಬನ ಶ್ರಮೆಗಳಲ್ಲಿ ಯೋಬನು ಮತ್ತು ತನ್ನ ಸ್ನೇಹಿತರು ಹೇಗೆ ಸ್ಪಂದಿಸಿದ್ದಾರೆನ್ನುವುದರ ಕುರಿತಾಗಿ ಹೇಳುತ್ತದೆ. ಸಾರ್ವಭೌಮಾಧಿಕಾರ ಸೃಷ್ಟಿಕರ್ತನನ್ನಾಗಿ ಮತ್ತು ಸರ್ವಸೃಷ್ಟಿಯನ್ನು ಆಳುವವನಾಗಿದ್ದ ದೇವರ ದೃಷ್ಟಿಕೋನವನ್ನು ಕೂಡ ಈ ಪುಸ್ತಕವು ನಮಗೆ ಕೊಡುತ್ತದೆ.
  • ಎಲ್ಲಾ ಶ್ರಮೆಗಳಾದನಂತರ ದೇವರು ಕೊನೆಗೆ ಯೋಬನನ್ನು ಸ್ವಸ್ಥಪಡಿಸಿದನು ಮತ್ತು ಆತನಿಗೆ ಅನೇಕಮಂದಿ ಮಕ್ಕಳನ್ನು ಮತ್ತು ಸಂಪತ್ತನ್ನು ಕೊಟ್ಟನು.
  • ಮರಣ ಸಮಯದಲ್ಲಿ ಯೋಬನು ತುಂಬಾ ವೃದ್ಧಾಪ್ಯದಲ್ಲಿದ್ದನೆಂದು ಯೋಬನ ಗ್ರಂಥವು ಹೇಳುತ್ತಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಏಸಾವ, ಪ್ರಳಯ, ಯಾಕೋಬ, ಜನರ ಗುಂಪು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H347, H3102, G2492