kn_tw/bible/names/jezreel.md

2.4 KiB

ಇಜ್ರೇಲ್, ಇಜ್ರೇಲ್ಯನು

ಪದದ ಅರ್ಥವಿವರಣೆ:

ಇಜ್ರೇಲ್ ಎನ್ನುವುದು ಇಸ್ಸಾಕಾರ್ ಕುಲದ ಕ್ಷೇತ್ರದಲ್ಲಿ ಮುಖ್ಯವಾದ ಇಸ್ರಾಯೇಲ್ ಪಟ್ಟಣವಾಗಿತ್ತು, ಇದು ಲವಣ ಸಮುದ್ರದ ನೈಋತ್ಯ ಭಾಗದಲ್ಲಿರುತ್ತದೆ.

  • ಇಜ್ರೇಲ್ ಪಟ್ಟಣವು ಮೆಗಿದ್ದೋ ಬಯಲಿನಲ್ಲಿ ಪಶ್ಚಿಮದಲ್ಲಿರುವ ಪ್ರಾಮುಖ್ಯವಾದ ಪಟ್ಟಣಗಳಲ್ಲಿ ಒಂದಾಗಿತ್ತು, ಇದನ್ನು “ಇಜ್ರೇಲಿನ ಕಣಿವೆ” ಎಂದೂ ಕರೆಯುತ್ತಾರೆ.
  • ಇಸ್ರಾಯೇಲ್ ರಾಜ್ಯದ ಅನೇಕಮಂದಿ ಅರಸರ ಅರಮನೆಗಳು ಇಜ್ರೇಲ್ ಪಟ್ಟಣದಲ್ಲಿಯೇ ಇದ್ದಿದ್ದವು.
  • ನಾಬೋತನ ದ್ರಾಕ್ಷಿತೋಟವು ಇಜ್ರೇಲಿನಲ್ಲಿರುವ ಅರಸನಾದ ಆಹಾಬನ ಅರಮನೆಯ ಪಕ್ಕದಲ್ಲಿಯೇ ಇದ್ದಿತ್ತು. ಪ್ರವಾದಿಯಾದ ಎಲೀಯ ಆಹಾಬನಿಗೆ ವಿರುದ್ಧವಾಗಿ ಪ್ರವಾದಿಸಿದನು.
  • ಆಹಾಬನ ದುಷ್ಟ ಹೆಂಡತಿಯಾದ ಈಜೆಬೆಲಳು ಇಜ್ರೇಲಿನಲ್ಲಿಯೇ ಕೊಂದು ಹಾಕಲ್ಪಟ್ಟಳು.
  • ಅನೇಕವಾದ ಪ್ರಾಮುಖ್ಯವಾದ ಸಂಘಟನೆಗಳೆಲ್ಲವು ಮತ್ತು ಅನೇಕವಾದ ಯುದ್ಧಗಳು ಈ ಪಟ್ಟಣದಲ್ಲಿಯೇ ನಡೆದಿದ್ದವು.

(ಈ ಪದಗಳನ್ನು ಸಹ ನೋಡಿರಿ : ಆಹಾಬ, ಎಲೀಯ, ಇಸ್ಸಾಕಾರ್, ಈಜೆಬೆಲ್, ಅರಮನೆ, ಲವಣ ಸಮುದ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3157, H3158, H3159