kn_tw/bible/names/jehoram.md

3.2 KiB

ಯೆಹೋರಾಮ, ಯೋರಾಮ

ಸತ್ಯಾಂಶಗಳು:

“ಯೆಹೋರಾಮ” ಎನ್ನುವ ಹೆಸರಿನ ಮೇಲೆ ಹಳೇ ಒಡಂಬಡಿಕೆಯಲ್ಲಿ ಇಬ್ಬರು ಅರಸರು ಇದ್ದಾರೆ. ಆ ಇಬ್ಬರ ಅರಸರು “ಯೋರಾಮ” ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿದ್ದಾರೆ.

  • ಯೆಹೋರಾಮ ಎನ್ನುವ ಒಬ್ಬ ಅರಸ ಎಂಟು ವರ್ಷಗಳು ಯೂದಾ ರಾಜ್ಯವನ್ನು ಆಳಿದನು. ಇವನು ಯೆಹೋಷಾಫಾಟನ ಮಗನಾಗಿರುತ್ತಾನೆ. ಈ ಅರಸನೇ ಯೆಹೋರಾಮ ಎಂದು ಹೆಚ್ಚಾಗಿ ಹೆಸರುವಾಸಿಯಾಗಿರುತ್ತಾನೆ.
  • ಯೆಹೋರಾಮ ಹೆಸರಿನ ಮೇಲೆ ಇರುವ ಇನ್ನೊಬ್ಬ ಅರಸನು ಹನ್ನೆರಡು ವರ್ಷಗಳ ಕಾಲ ಇಸ್ರಾಯೇಲ್ ರಾಜ್ಯವನ್ನು ಆಳಿದನು. ಇವನು ಅರಸನಾದ ಆಹಾಬನ ಮಗನಾಗಿದ್ದನು.
  • ಯೂದಾ ಅರಸನಾಗಿರುವ ಯೆಹೋರಾಮನು ಯೆರೆಮೀಯ, ದಾನಿಯೇಲ, ಓಬದ್ಯ, ಮತ್ತು ಯೆಹೆಜ್ಕೇಲರು ಯೂದಾ ರಾಜ್ಯದಲ್ಲಿ ಪ್ರವಾದಿಸುವ ಕಾಲದಲ್ಲಿ ಆಳಿದನು.
  • ಯೂದಾ ರಾಜ್ಯದ ಮೇಲೆ ಅರಸನಾದ ಯೆಹೋರಾಮನ ತಂದೆ ಅರಸನಾದ ಯೆಹೋಷಾಫಾಟನು ಅಳುತ್ತಿರುವಾಗ ಅವನೂ ಪಾಲನೆ ಮಾಡಿದ್ದನು.
  • ಕೆಲವೊಂದು ಅನುವಾದಗಳಲ್ಲಿ “ಯೆಹೋರಾಮ” ಎನ್ನುವ ಹೆಸರನ್ನು ಇಸ್ರಾಯೇಲ್ ಅರಸನಿಗೆ ಉಪಯೋಗಿಸಿದಾಗ, “ಯೋರಾಮ” ಎನ್ನುವ ಹೆಸರನ್ನು ಯೂದಾ ಅರಸನಿಗೆ ಉಪಯೋಗಿಸುವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.
  • ಇಬ್ಬರನ್ನು ಚೆನ್ನಾಗಿ ಗುರುತಿಸುವ ಬೇರೊಂದು ವಿಧಾನದಲ್ಲಿ ಅವರ ಹೆಸರುಗಳ ಪಕ್ಕಕ್ಕೆ ಅವರ ತಂದೆಗಳ ಹೆಸರುಗಳನ್ನು ಬಳಸುವುದು ಉತ್ತಮ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಆಹಾಬ, ಯೆಹೋಷಾಫಾಟ, ಯೋರಾಮ, ಯೂದಾ, ಇಸ್ರಾಯೇಲ್ ರಾಜ್ಯ, ಓಬದ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3088, H3141, G2496