kn_tw/bible/names/hoshea.md

2.6 KiB

ಹೋಶೇಯ

ಸತ್ಯಾಂಶಗಳು:

ಹೋಶೇಯ ಎನ್ನುವ ಹೆಸರು ಇಸ್ರಾಯೇಲ್ ಅರಸನ ಹೆಸರಾಗಿರುತ್ತದೆ ಮತ್ತು ಹಳೇ ಒಡಂಬಡಿಕೆಯಲ್ಲಿ ಅನೇಕಮಂದಿ ಪುರುಷರು ಈ ಹೆಸರಿನ ಮೇಲೆ ಇದ್ದಾರೆ.

  • ಅಲಾ ಮಗನಾದ ಹೋಶೇಯ ಇಸ್ರಾಯೇಲ್ ಅರಸನಾಗಿದ್ದನು, ಇವನು ಯೆಹೂದ್ಯ ಅರಸರಾಗಿರುವ ಆಹಾಜ ಮತ್ತು ಹಿಜ್ಕೀಯ ಪಾಲನೆಗಳು ನಡೆಯುತ್ತಿರುವ ಸಮಯದಲ್ಲಿ ಸುಮಾರು ಒಂಭತ್ತು ವರ್ಷಗಳ ಆಳಿದನು.
  • ನೂನನ ಮಗನಾದ ಯೆಹೋಶುವನಿಗೆ ಮತ್ತೊಂದು ಹೆಸರು ಹೋಶೇಯ ಆಗಿತ್ತು. ಮೋಶೆ ಕಾನಾನ್ಯರ ಭೂಮಿಯೊಳಗೆ ಗೂಢಚಾರಿಗಳನ್ನಾಗಿ ಕಳುಹಿಸಿದ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿರುವ ಹೋಶೇಯನ ಹೆಸರನ್ನು ಯೊಹೋಶುವ ಎಂಬುದಾಗ ಮಾರ್ಪಡಿಸಿದನು.
  • ಮೋಶೆ ಮರಣಿಸಿದನಂತರ ಯೆಹೋಶುವನು ಕಾನಾನ್ ಭೂಮಿಯನ್ನು ವಶಪಡಿಸಿಕೊಳ್ಳಲು ಇಸ್ರಾಯೇಲ್ ಜನರನ್ನು ನಡೆಸಿದ್ದನು.
  • ಹೋಶೆಯ ಎನ್ನುವ ಹೆಸರಿನ ಮೇಲೆ ಇನ್ನೊಬ್ಬ ವ್ಯಕ್ತಿ ಆಹಾಜನ ಮಗನಾಗಿದ್ದನು, ಇವನು ಎಫ್ರಾಯಿಮ್ಯರ ನಾಯಕರಲ್ಲಿ ಒಬ್ಬನಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಆಹಾಜ, ಕಾನಾನ್, ಎಫ್ರಾಯಿಮ್, ಹಿಜ್ಕೀಯ, ಯೆಹೋಶುವ, ಮೋಶೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1954