kn_tw/bible/names/gabriel.md

3.1 KiB

ಗಬ್ರಿಯೇಲ

ಸತ್ಯಾಂಶಗಳು:

ಗಬ್ರಿಯೇಲ ಎನ್ನುವುದು ದೇವರ ದೂತರಗಳಲ್ಲಿ ಒಂದು ದೂತನ ಹೆಸರಾಗಿರುತ್ತದೆ. ಈ ದೂತನ ಹೆಸರು ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ಅನೇಕಸಲ ದಾಖಲಿಸಿರುತ್ತದೆ.

  • ಪ್ರವಾದಿಯಾದ ದಾನಿಯೇಲನು ಕಂಡ ದರ್ಶನದ ಅರ್ಥವನ್ನು ದಾನಿಯೇಲನಿಗೆ ಹೇಳುವುದಕ್ಕೆ ದೇವರು ಗಬ್ರಿಯೇಲನನ್ನು ಕಳುಹಿಸಿದನು.
  • ಇನ್ನೊಂದು ಸಮಯದಲ್ಲಿ ದಾನಿಯೇಲನು ಪ್ರಾರ್ಥನೆ ಮಾಡುತ್ತಿರುವಾಗ, ದೂತನಾದ ಗಬ್ರಿಯೇಲನು ಅವನ ಬಳಿಗೆ ಹಾರಿಹೋಗಿ, ಭವಿಷ್ಯತ್ತಿನಲ್ಲಿ ಸಂಭವಿಸುವುದರ ಕುರಿತಾಗಿ ಪ್ರವಾದಿಸಿದನು. ದಾನಿಯೇಲನು ಆ ದೂತನನ್ನು “ಮನುಷ್ಯ” ಎಂಬುದಾಗಿ ಕರೆದನು.
  • ಹೊಸ ಒಡಂಬಡಿಕೆಯಲ್ಲಿ ಗಬ್ರಿಯೇಲನು ಜೆಕರ್ಯನ ಬಳಿಗೆ ಬಂದು, ಯೋಹಾನ ಎಂಬುವ ಒಬ್ಬ ಗಂಡು ಮಗನನ್ನು ನಿನ್ನ ವೃದ್ಧ ಹೆಂಡತಿಯಾದ ಎಲಿಸಬೇತಳು ಹಡೆಯುವಳು ಎಂದು ಪ್ರವಾದಿಸಿರುವ ದಾಖಲಾತಿ ಇದೆ.
  • ಆರು ತಿಂಗಳುಗಳಾದ ಮೇಲೆ, “ದೇವರು ಅದ್ಭುತಕರವಾಗಿ “ದೇವರ ಮಗ” ಎನ್ನುವ ಒಬ್ಬ ಕೂಸಿಗೆ ಗರ್ಭ ಧರಿಸುವುದಕ್ಕೆ ಆಕೆಯನ್ನು ಬಲಪಡಿಸಿದನು” ಎಂದು ಮರಿಯಳಿಗೆ ಹೇಳುವುದಕ್ಕೆ ಗಬ್ರಿಯೇಲನು ಆಕೆಯ ಬಳಿಗೆ ಕಳುಹಿಸಲ್ಪಟ್ಟನು, ಆ ಮಗನಿಗೆ “ಯೇಸು” ಎಂದು ಹೆಸರಿಡಬೇಕೆಂದು ದೇವರು ಮರಿಯಳಿಗೆ ಹೇಳಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದೂತ, ದಾನಿಯೇಲ, ಎಲಿಸಬೇತ್, ಸ್ನಾನಿಕನಾದ ಯೋಹಾನ, ಮರಿಯ, ಪ್ರವಾದಿ, ದೇವರ ಮಗ, ಜೆಕರ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1403, G1043