kn_tw/bible/names/balaam.md

3.1 KiB

ಬಿಳಾಮ

ಸತ್ಯಾಂಶಗಳು:

ಇಸ್ರಯೇಲರು ಕಾನಾನ್ ದೇಶವನ್ನು ಸೇರಲು ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಬಯಲಿನಲ್ಲಿ ಇಳಿದುಕೊಂಡಿರುವಾಗ ಅರಸನಾದ ಬಾಲಾಕನು ಇಸ್ರಯೇಲರನ್ನು ಶಪಿಸಲು ಅನ್ಯ ಪ್ರವಾದಿಯಾದ ಬಿಳಾಮನನ್ನು ನೇಮಕ ಮಾಡಿದನು.

  • ಬಿಳಾಮನು ಯೂಫ್ರೆಟೀಸ್ ನದಿಯ ತೀರದಲ್ಲಿರುವ ಪೆತೋರ್ ಎಂಬ ಊರಿನವನಾಗಿದ್ದನು, ಅದು ಮೋವಾಬ್ಯರ ದೇಶದಿಂದ 400 ಮೈಲುಗಳ ದೂರದಲ್ಲಿತ್ತು.
  • ಇಸ್ರಾಯೇಲರು ಬಹಳ ಜನವಾಗಿರುವುದರಿಂದ ಮಿದ್ಯಾನ್ ಅರಸನಾದ ಬಾಲಾಕನು, ಬಹಳ ಭಯಪಟ್ಟು ಹೆದರಿ, ಅವರನ್ನು ಶಪಿಸಲು ಬಿಳಾಮನನ್ನು ಆರಿಸಿಕೊಂಡನು.

ಬಿಳಾಮನು ಇಸ್ರಾಯೇಲ್ ದೇಶಕ್ಕೆ ಹೋಗುತ್ತಿರುವಾಗ, ಯೆಹೋವನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು, ಆದಕಾರಣ ಬಿಳಾಮನ ಕತ್ತೆಯು ನಿಂತುಕೊಂಡಿತು. ಬಿಳಾಮನೊಂದಿಗೆ ಮಾತನಾಡಲು ಯೆಹೋವನು ಕತ್ತೆಗೆ ಶಕ್ತಿಕೊಟ್ಟನು.

  • ಬಿಳಾಮನು ಇಸ್ರಾಯೇಲರನ್ನು ಶಪಿಸಲು ಅಪ್ಪಣೆ ಕೊಡಲಿಲ್ಲ ಬದಲಿಗೆ ಅವರನ್ನು ಆಶಿರ್ವಾದಿಸಲು ಆಜ್ಞಾಪಿಸಿದನು.
  • ಆದರೆ ಅನ್ಯದೇವತೆಯಾದ ಪೆಗೋರದ ಬಾಳನನ್ನು ಆರಾಧಿಸಲು ಇಸ್ರಾಯೇಲರನ್ನು ಪ್ರೋತ್ಸಾಹಿಸುವ ಮೂಲಕ ಬಿಳಾಮನು ಅವರ ಮೇಲೆ ದುಷ್ಟತನವನ್ನು ತಂದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದಿಸಿರಿ

(ಈ ಪದಗಳನ್ನು ಸಹ ನೋಡಿರಿ : ಆಶಿರ್ವಾದ, ಕಾನಾನ್, ಶಾಪ, ಕತ್ತೆ, ಯೂಫ್ರೆಟೀಸ್ ನದಿ, ಯೊರ್ದನ್ ನದಿ, ಮಿದ್ಯಾನ್, ಮೋವಾಬ್, ಪೆಗೋರ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1109, G903