kn_tw/bible/names/arabah.md

2.5 KiB

ಆರಾಬಾ

ಸತ್ಯಾಂಶಗಳು:

“ಆರಾಬಾ” ಎನ್ನುವ ಹಳೇ ಒಡಂಬಡಿಕೆಯ ಪದವು ಅತೀ ದೊಡ್ಡ ಮರುಭೂಮಿಯನ್ನು ಮತ್ತು ಯೊರ್ದನ್ ನದಿಯ ಸುತ್ತಮುತ್ತ ಬಯಲು ಸೀಮೆಗಳನ್ನೊಳಗೊಂಡ ತೋಪುಗಳನ್ನು ಮತ್ತು ಕೆಂಪು ಸಮುದ್ರದ ಉತ್ತರದ ಕೊನೆ ಭಾಗದಿಂದ ದಕ್ಷಿಣದ ವರೆಗೆ ವಿಸ್ತರಿಸಿದ ಪ್ರಾಂತ್ಯವನ್ನು ಸೂಚಿಸುತ್ತದೆ.

  • ಇಸ್ರಾಯೇಲ್ಯರು ಐಗುಪ್ತದಿಂದ ಕಾನಾನ್ ಭೂಮಿಗೆ ಮಾಡಿದ ತಮ್ಮ ಪ್ರಯಾಣವನ್ನು ಈ ಮರುಭೂಮಿಯ ಸೀಮೆಯಿಂದಲೇ ಮಾಡಿದರು.
  • “ಆರಾಬಾ ಸಮುದ್ರ” ಎನ್ನುವದನ್ನು “ಆರಾಬಾ ಮರುಭೂಮಿಯ ಸೀಮೆಯಲ್ಲಿರುವ ಸಮುದ್ರ” ಎಂದೂ ಅನುವಾದ ಮಾಡಬಹುದು. ಈ ಸಮುದ್ರವನ್ನು ಅನೇಕಬಾರಿ “ಉಪ್ಪು ಸಮುದ್ರ” ಎಂದು ಅಥವಾ “ಮೃತ ಸಮುದ್ರ” ಎಂದೂ ಸೂಚಿಸುತ್ತಾರೆ.
  • “ಆರಾಬಾ” ಎನ್ನುವ ಪದವನ್ನು ಸಾಧಾರಣವಾಗಿ ಇತರ ಯಾವುದೇ ಮರುಭೂಮಿ ಪ್ರಾಂತ್ಯಕ್ಕೆ ಸೂಚನೆಯಾಗಿ ತೆಗೆದುಕೊಳ್ಳುತ್ತಾರೆ.

(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಮರುಭೂಮಿ, ಹುಲ್ಲುಗಾವಲುಗಳ ಸಮುದ್ರ, ಯೊರ್ದನ್ ನದಿ, ಕಾನಾನ್, ಉಪ್ಪು ಸಮುದ್ರ, ಐಗುಪ್ತ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1026, H6160