kn_tw/bible/names/redsea.md

3.3 KiB

ಜೊಂಡುಗಳ ಸಮುದ್ರ, ಕೆಂಪು ಸಮುದ್ರ

ಸತ್ಯಾಂಶಗಳು:

“ಜೊಂಡುಗಳ ಸಮುದ್ರ” ಎನ್ನುವುದು ಐಗುಪ್ತ ಮತ್ತು ಅರೇಬಿಯಾ ಮಧ್ಯೆದಲ್ಲಿರುವ ನೀರಿನ ಭಾಗದ ಹೆಸರಾಗಿರುತ್ತದೆ. ಈಗ ಇದನ್ನು “ಕೆಂಪು ಸಮುದ್ರ” ಎಂದು ಕರೆಯುತ್ತಿದ್ದಾರೆ.

  • ಕೆಂಪು ಸಮುದ್ರವು ತುಂಬಾ ಉದ್ದವಾಗಿದ್ದು, ಇಕ್ಕಟ್ಟಾಗಿರುತ್ತದೆ. ಇದು ಒಂದು ಕೆರೆಗಿಂತ ಅಥವಾ ನದಿಗಿಂತ ದೊಡ್ಡದಾಗಿರುತ್ತದೆ, ಆದರೆ ಒಂದು ಸಾಗರಕ್ಕಿಂತ ತುಂಬಾ ಚಿಕ್ಕದಾಗಿರುತ್ತದೆ.
  • ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾಗಿ ಬಂದಾಗ ಅವರು ಕೆಂಪು ಸಮುದ್ರವನ್ನು ದಾಟಿದ್ದರು. ದೇವರು ಅದ್ಭುತವನ್ನು ಮಾಡಿದ್ದರು ಮತ್ತು ಆ ಸಮುದ್ರದ ನೀರನ್ನು ಎರಡು ಭಾಗಗಳನ್ನಾಗಿ ಮಾಡಿದರು, ಇದರಿಂದ ಜನರು ಒಣ ನೆಲದ ಮೇಲೆ ನಡೆದು ಆ ಸಮುದ್ರವನ್ನು ದಾಟಿದರು.
  • ಕಾನಾನ್ ದೇಶವು ಈ ಸಮುದ್ರದ ಉತ್ತರ ಭಾಗದಲ್ಲಿರುತ್ತದೆ.
  • ಇದನ್ನು “ಜೊಂಡು ಸಮುದ್ರ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅರೇಬಿಯಾ . ಕಾನಾನ್, ಐಗುಪ್ತ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 12:04 ಐಗುಪ್ತ ಸೈನ್ಯವು ಹಿಂದಟ್ಟಿ ಬರುತ್ತಿದೆಯೆಂದು ಇಸ್ರಾಯೇಲ್ಯರು ನೋಡಿದಾಗ, ಅವರು ಫರೋಹನ ಸೈನ್ಯದಲ್ಲಿ ಮತ್ತು ___ ಕೆಂಪು ಸಮುದ್ರದಲ್ಲಿ ___ ಸಿಕ್ಕಿ ಬೀಳುತ್ತೇವೆಂದು ತಿಳಿದಿದ್ದರು.
  • 12:05 “___ ಕೆಂಪು ಸಮುದ್ರದ ___ ಮೂಲಕ ಹಾದು ಹೋಗಬೇಕೆಂದು ಜನರಿಗೆ ಹೇಳು” ಎಂದು ದೇವರು ಮೋಶೆಗೆ ಹೇಳಿದನು.
  • 13:01 ದೇವರು ಇಸ್ರಾಯೇಲ್ಯರನ್ನು ___ ಕೆಂಪು ಸಮುದ್ರದ ___ ಮೂಲಕ ನಡೆಸಿದನಂತರ, ಆತನು ಅವರನ್ನು ಸೀನಾಯಿ ಎನ್ನುವ ಪರ್ವತದ ಕಡೆಗೆ ಅರಣ್ಯದ ಮೂಲಕ ನಡೆಸಿದನು.

ಪದ ಡೇಟಾ:

  • Strong's: H3220, H5488, G2063, G2281