kn_tw/bible/names/amaziah.md

2.6 KiB

ಅಮಚ್ಯ

ಸತ್ಯಾಂಶಗಳು:

ಅಮಚ್ಯ ತಂದೆ ಅರಸನಾದ ಯೋವಾಷನು ಕೊಂದು ಹಾಕಲ್ಪಟ್ಟಾಗ ಯೆಹೂದ ರಾಜ್ಯವನ್ನು ಆಳುವುದಕ್ಕೆ ಅರಸನಾದನು.

  • ಅರಸನಾದ ಅಮಚ್ಯ ಯೆಹೂದ ರಾಜ್ಯವನ್ನು ಕ್ರಿ.ಪೂ.796 ರಿಂದ 767 ರವರೆಗೆ ಸುಮಾರು ಇಪ್ಪತ್ತೊಂಭತ್ತು ವರ್ಷಗಳ ಕಾಲ ಆಳಿದನು.
  • ಇವರು ಒಳ್ಳೇಯ ಅರಸರಾಗಿದ್ದರು, ಆದರೆ ವಿಗ್ರಹಗಳಿಗೆ ಆರಾಧನೆ ಮಾಡುವ ಸ್ಥಳಗಳನ್ನು ತೆಗೆದು ಹಾಕಲಿಲ್ಲ.
  • ಅಮಚ್ಯ ಕೊನೆಗೆ ತನ್ನ ತಂದೆಗೆ ಕೊಲೆಗೆ ಕಾರಣವಾದ ಎಲ್ಲಾ ಜನರನ್ನು ಸಾಯಿಸಿದನು.
  • ಈತನು ತನಗೆ ವಿರುದ್ಧವಾಗಿರುವ ಎದೋಮ್ಯರನ್ನು ಸೋಲಿಸಿದನು ಮತ್ತು ಅವರೆಲ್ಲರನ್ನು ಯೆಹೂದ ರಾಜ್ಯದ ವಶದಲ್ಲಿರುವಂತೆ ಮಾಡಿದನು.
  • ಈತನು ಯುದ್ಧ ಮಾಡುವುದಕ್ಕೆ ಇಸ್ರಾಯೇಲ್ ಅರಸನಾದ ಯೋವಾಷನಿಗೆ ಸವಾಲು ಬೀಸಿದನು. ಯೆರೂಸಲೇಮಿನ ಗೋಡೆಗಳ ಭಾಗವು ಕೆಳಗೆ ಬಿದ್ದುಹೋಗಿತ್ತು ಮತ್ತು ದೇವಾಲಯದ ಬೆಳ್ಳಿ, ಬಂಗಾರಗಳು ಕದಿಯಲ್ಪಟ್ಟಿದ್ದವು.
  • ಕೆಲವು ವರ್ಷಗಳಾದನಂತರ, ಅರಸನಾದ ಅಮಚ್ಯನು ಯೆಹೋವ ದೇವರಿಂದ ದೂರವಾದರು ಮತ್ತು ಯೆರೂಸಲೇಮಿನಲ್ಲಿರುವ ಕೆಲವೊಂದು ಮನುಷ್ಯರು ಇವನನ್ನು ಸಿಕ್ಕಿಸಿಕೊಂಡು, ಸಾಯಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಯೋವಾಷ, ಎದೋಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H558