kn_ta/translate/translate-wforw/01.md

11 KiB
Raw Permalink Blame History

ವಿವರಣೆಗಳು.

ಒಂದು ಪದಕ್ಕೆ ಒಂದು ಪದ ಬದಲಾಗಿ ಬಳಸುವುದು ಹೆಚ್ಚಾಗಿ ಅಕ್ಷರಶಃ ನಮೂನೆಯ ಭಾಷಾಂತರದಲ್ಲಿ. ಒಳ್ಳೆಯ ಭಾಷಾಂತರ ಮಾಡಲು ಇದು ಉತ್ತಮ ಆಯ್ಕೆಯಲ್ಲ. ಒಂದು ಪದಕ್ಕಾಗಿ ಒಂದು ಪದವನ್ನು ಭಾಷಾಂತರ ಮಾಡುವುದಾದರೆ ಸರಳವಾಗಿ ಬದಲೀಪದ ಅಥವಾ ಸಮಾನ ಪದವನ್ನು ಭಾಷಾಂತರಮಾಡುತ್ತಿರುವ ಭಾಷೆಯಲ್ಲಿ ಪ್ರತಿಪದಕ್ಕೂ ಮೂಲಭಾಷೆಯಿಂದ ಪದಗಳನ್ನು ಪಡೆಯಲು ಪ್ರಯತ್ನಿಸಬೇಕು.

ಪದಕ್ಕಾಗಿ ಪದದ ಭಾಷಾಂತರ.

  • ಸಮಯಕ್ಕೆ ಒಂದು ಪದವನ್ನು ಕೇಂದ್ರೀಕರಿಸಬೇಕು.
  • ಸಹಜವಾದ ವಾಕ್ಯದ ರಚನೆ, ಪದಗುಚ್ಛಗಳ ರಚನೆ ಮತ್ತು ಅಲಂಕಾರಗಳು ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ನಿರ್ಲಕ್ಷಿಸಲಾಗಿದೆ.
  • ಪದಕ್ಕಾಗಿ ಪದದ ಭಾಷಾಂತರದ ಪ್ರಕ್ರಿಯೆ ತುಂಬಾ ಸರಳವಾದುದು.
  • ಮೂಲವಾಕ್ಯಭಾಗದಲ್ಲಿನ ಮೊದಲ ಪದ ಸಮಾನ ಪದದಿಂದ ಭಾಷಾಂತರವಾಗುತ್ತದೆ.
  • ಅನಂತರ ಮುಂದಿನ ಪದವನ್ನು ಭಾಷಾಂತರಿಸಲಾಗುತ್ತದೆ. ಇದು ಪೂರ್ತಿ ವಾಕ್ಯವು ಭಾಷಾಂತರವಾಗುವವರೆಗೆ ಮುಂದುವರೆಯುತ್ತದೆ,.
  • ಪದಕ್ಕಾಗಿ ಪದದ ಭಾಷಾಂತರದ ಪ್ರಯೋಗ ಸರಳವಾಗಿರುವುದರಿಂದ ಇದು ಆಕರ್ಷಕವಾಗಿರುತ್ತದೆ.

ಆದರೆ ಇದು ಕಳಪೆಮಟ್ಟದ ಭಾಷಾಂತರವಾಗಿ ಪ್ರತಿಫಲಿತವಾಗುತ್ತದೆ. ಪದಕ್ಕಾಗಿ ಬದಲೀಪದದ ಭಾಷಾಂತರ ಓದಲು ಅಸಹಜವಾಗಿರುತ್ತದೆ. ಕೆಲವೊಮ್ಮೆ ಅವು ಗೊಂದಲ ಉಂಟುಮಾಡಬಹುದು, ತಪ್ಪು ಅರ್ಥ ನೀಡಬಹುದು ಅಥವಾ ಅರ್ಥರಹಿತ ವಾಗಿರ ಬಹುದು. ನೀವು ಇಂತಹ ಭಾಷಾಂತರ ಮಾಡುವುದನ್ನು ತಡೆಗಟ್ಟಬೇಕು. ಇಲ್ಲಿ ಕೆಲವು ಉದಾಹರಣೆಗಳಿವೆ.

ಪದಗಳ ಕ್ರಮ.

ಇಲ್ಲಿ ULBಯ ಲೂಕ 3:16ರ ಉದಾಹರಣೆ ಇದೆ.

ಯೋಹಾನನು ಅವರೆಲ್ಲರಿಗೆ ನಾನಂತೂ ನಿಮಗೆ ನೀರಿನ ಸ್ನಾನ ಮಾಡಿಸುವವನು, ಆದರೆ ನನಗಿಂತ ಶಕ್ತನು ಬರುತ್ತಾನೆ ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ "ಆತನು ಪವಿತ್ರಾತ್ಮದಲ್ಲಿಯೂ, ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು" ಈ ಭಾಷಾಂತರ ಸ್ಪಷ್ಟವಾಗಿ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿದೆ.

ಆದರೆ ಭಾಷಾಂತರಗಾರರು ಪದಕ್ಕಾಗಿ ಪದವನ್ನು ಭಾಷಾಂತರ ಮಾಡಿದ್ದರೆ. ಭಾಷಾಂತರ ಯಾವ ರೀತಿ ಇರುತ್ತಿತ್ತು? ಇಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮೂಲ ಗ್ರೀಕ್ ಭಾಷೆಯಲ್ಲಿದ್ದಂತೆ ಪದಗಳ ಕ್ರಮವನ್ನು ಭಾಷಾಂತರಿಸಲಾಗಿದೆ.

ನಾನಂತೂ ನಿಮಗೆ ನೀರಿನಿಂದ ದೀಕ್ಷಾ ಸ್ನಾನ ಮಾಡಿಸಿದ್ದೇನೆ. ಆದರೆ ನಂತರ ಬರುವವನು ನನಗಿಂತ ಶಕ್ತನಾಗಿರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮ ದಲ್ಲಿಯೂ, ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು ಈ ಭಾಷಾಂತರ ಅಷ್ಟೇನೂ ಚೆನ್ನಾಗಿಲ್ಲ ಇಂಗ್ಲೀಷ್ ಭಾಷೆಯಲ್ಲಿ ಇದು ಅಷ್ಟು ಅರ್ಥಪೂರ್ಣವಾಗಿಲ್ಲ ಮೇಲೆ ಕೊಟ್ಟಿರುವ ULB ಪ್ರತಿಯನ್ನು ನೋಡಿ.

ಇಂಗ್ಲೀಷ್ ಭಾಷೆಯಲ್ಲಿ ULB ಪ್ರತಿಯನ್ನು ಭಾಷಾಂತರಿಸಿದವರು ಮೂಲಗ್ರೀಕ್ ಭಾಷೆಯ ಪದಕ್ರಮವನ್ನು ಅನುಸರಿಸಿಲ್ಲ. ಇಂಗ್ಲೀಷ್ ಭಾಷೆಯ ವ್ಯಾಕರಣ ನಿಯಮಕ್ಕೆ ಅನುಗುಣವಾಗಿ ಪದಗಳನ್ನು ವಾಕ್ಯದಲ್ಲಿ ಎಲ್ಲೆಲ್ಲಿ ಸೇರಿಸಬಹುದೋ ಅಲ್ಲಲ್ಲಿ ಸೇರಿಸಿದ್ದಾರೆ. ಅವರು ಪದಗಳನ್ನು ಸಹ ಬದಲಾಯಿಸಿದ್ದಾರೆ ಉದಾಹರಣೆಗೆ ಇಂಗ್ಲೀಷ್ ULBಯಲ್ಲಿ, "ಯೋಹಾನನು ಅವರೆಲ್ಲರಿಗೆ ಹೀಗೆ ಉತ್ತರಿಸಿದನು." ಎಂಬುದರ ಬದಲಾಗಿ "ಯೋಹಾನನು ಅವರೆಲ್ಲರನ್ನು ಕುರಿತು ಹೇಳಿದನು" ಎಂದಿದೆ.

ಅವರು ವಿಭಿನ್ನ ಕ್ರಮದಲ್ಲಿ ವಿಭಿನ್ನ ಪದಗಳನ್ನು ಬಳಸಿದ್ದಾರೆ. ಏಕೆಂದರೆ ಇದು ಮೂಲ ವಾಕ್ಯಭಾಗವನ್ನು ಸಹಜವಾಗಿರುವಂತೆ ಮಾಡಲು, ಯಶಸ್ವಿಯಾಗಿ ಮೂಲ ಅರ್ಥವನ್ನು ತಿಳಿಸಲು ಬಳಸಲಾಗಿದೆ. ಗ್ರೀಕ್ ಭಾಷೆಯ ವಾಕ್ಯಭಾಗದಲ್ಲಿರುವಂತೆಯೇ ಭಾಷಾಂತರಗಳು ತಿಳಿಸುವಂತಿರಬೇಕು. ಈ ಉದಾಹರಣೆಯಲ್ಲಿ ಇಂಗ್ಲೀಷ್ ನ ULB ಭಾಷಾಂತರವು ಕಳಪೆ ಮಟ್ಟದ ಪದಕ್ಕಾಗಿ ಪದದ ಭಾಷಾಂತರಕ್ಕಿಂತ ಉತ್ತಮವಾಗಿದೆ.

ಪದಗಳ ಅರ್ಥದ ಮಟ್ಟ

ಇದರೊಂದಿಗೆ ಪದಕ್ಕಾಗಿ ಬದಲಿ ಪದ ಬಳಸಿ ಮಾಡುವ ಭಾಷಾಂತರಗಳು ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲೂ ಪರಿಗಣಿಸುವುದಿಲ್ಲ ಏಕೆಂದರೆ ಎಲ್ಲಾ ಭಾಷೆಗಳನ್ನು ಅಯಾ ಪದಗಳಿಗೆ ಅದರದೇ ಆದ ಗುಣಮಟ್ಟದ ಅರ್ಥವಿರುತ್ತದೆ. ಯಾವುದೇ ವಾಕ್ಯಭಾಗದಲ್ಲಿ ಸಾಮಾನ್ಯವಾಗಿ ಲೇಖಕನು ಪದಗಳಿಗೆ ಬೇಕಾದ ಸೂಕ್ತ ಅರ್ಥವನ್ನು ತನ್ನ ಮನದಲ್ಲಿ ನಿರ್ಧರಿಸಿರುತ್ತಾನೆ. ವಿಭಿನ್ನ ವಾಕ್ಯಭಾಗದಲ್ಲಿ ವಿಭಿನ್ನ ಸನ್ನಿವೇಶಗಳಲ್ಲಿ ವಿಭಿನ್ನ ಅರ್ಥವನ್ನು ಮನದಲ್ಲಿ ನಿರ್ಧರಿಸಬಹುದು. ಆದರೆ ಪದಕ್ಕಾಗಿ ಬದಲಿ ಪದ ಎಂಬ ಪರಿಕಲ್ಪನೆ ಇಟ್ಟುಕೊಂಡು ಮಾಡಿದ ಭಾಷಾಂತರದಲ್ಲಿ ಸಾಮಾನ್ಯವಾಗಿ ಒಂದೇ ಒಂದು ಪದವನ್ನು, ಅಋವನ್ನು ಆಯ್ಕೆಮಾಡಿ ಇಡೀ ಭಾಷಾಂತರ ಪ್ರಕ್ರಿಯೆಯಲ್ಲಿ ಅದನ್ನೇ ಬಳಸುವರು. ಉದಾಹರಣೆಗೆ ಗ್ರೀಕ್ ಪದವಾದ "aggelos" ಅಗ್ಗಿಲೋಸ್ ಒಬ್ಬ ಮಾನವ ಅಥವಾ ಒಬ್ಬ ದೇವದೂತನನ್ನು ಕುರಿತು ಹೇಳಿರುವಂತದ್ದು.

ಇಗೋ ಇಲ್ಲಿ ಬರೆದಿರುವುದನ್ನು ನೋಡಿ "ನನ್ನ ದೂತನು ನಿನ್ನ ಮುಂದೆ ಹೋಗಿ ಸರಿಮಾಡುವನು" (ಲೂಕ 7:27)

ಇಲ್ಲಿ "aggelos" ಎಂಬ ಪದ ಮಾನವ ಸಂದೇಶಕನನ್ನು ಕುರಿತು ಹೇಳಿದಂತಿದೆ. ಯೇಸು ಇಲ್ಲಿ ಸ್ನಾನಿಕನಾದ ಯೊಹಾನನ ಬಗ್ಗೆ ಮಾತನಾಡುತ್ತಿದ್ದಾನೆ.

ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೊರಟುಹೋದರು (ಲೂಕ 2:15)

ಇಲ್ಲಿ "aggelos" ಎಂಬ ಪದ ಪರಲೋಕದಿಂದ ಬಂದ ದೇವದೂತರನ್ನು ಕುರಿತು ಹೇಳಿದ್ದು. ಪದಕ್ಕಾಗಿ ಪದವನ್ನು ಭಾಷಾಂತರ ಮಾಡುವ ಪ್ರಕ್ರಿಯೆ ಎರಡೂ ವಾಕ್ಯಗಳಲ್ಲಿ ಒಂದೇ ಪದವನ್ನು ಬಳಸುತ್ತದೆ. ಇಲ್ಲಿ ಎರಡು ವಿಭಿನ್ನ ಪಾತ್ರಗಳಿದ್ದರೂ ಒಂದೇ ಪದ ಬಳಸುತ್ತದೆ. ಈ ರೀತಿಯ ಭಾಷಾಂತರ ಓದುಗರಿಗೆ ಗೊಂದಲ ಉಂಟುಮಾಡಬಹುದು.

ಅಲಂಕಾರಗಳು

ಅಂತಿಮವಾಗಿ ಹೇಳುವುದಾದರೆ ಅಲಂಕಾರಗಳ ಬಗ್ಗೆ ಹೇಳುವಾಗ ಪದಕ್ಕಾಗಿ ಪದವನ್ನು ಭಾಷಾಂತರ ಮಾಡುವುದು ಸೂಕ್ತವಾಗಿರುವುದಿಲ್ಲ. ಅಲಂಕಾರಗಳಲ್ಲಿ ಬರುವ ಸ್ವತಂತ್ರ ಪದಗಳ ಅರ್ಥವು ವಿಭಿನ್ನವಾದ ಪದಗಳಾಗಿದ್ದು ಪದಕ್ಕಾಗಿ ಪದವನ್ನು ಭಾಷಾಂತರ ಮಾಡಿದ್ದು ಸರಿಯಾಗಿ ಅನ್ವಯವಾಗುವುದಿಲ್ಲ. ಪದಕ್ಕಾಗಿ ಪದ ಭಾಷಾಂತರವಾದಾಗ ಅಲಂಕಾರದ ಅರ್ಥ ಮತ್ತು ಸೊಗಸು ಕಳೆದು ಹೋಗುತ್ತದೆ. ಭಾಷಾಂತರವಾಗುತ್ತಿರುವ ಭಾಷೆಯ ಪದಕ್ರಮವನ್ನು ಬಳಸುವುದರಿಂದಲೂ ಅದರ ಸೊಗಸು ಕಳೆದು ಹೋಗುತ್ತದೆ. See the ಅಲಂಕಾರಗಳು ಈ ಪುಟವನ್ನು ನೋಡಿ ಸರಿಯಾದ ಭಾಷಾಂತರ ಮಾಡುವುದು ಹೇಗೆ ತಿಳಿಯಿರಿ.