kn_ta/translate/translate-unknown/01.md

14 KiB

ಸಿಂಹ, ಅಂಜೂರದ ಮರ, ಬೆಟ್ಟ, ಯಾಜಕ/ ಪಾದ್ರಿ, ದೇವಾಲಯ ಎಂಬ ಪದಗಳನ್ನು ನನ್ನ ಸಂಸ್ಕೃತಿಯ ಜನರಿಗೆ ಪರಿಚಯವಿಲ್ಲದಿದ್ದರೆ, ನಮ್ಮ ಭಾಷೆಯಲ್ಲಿ ಅದಕ್ಕೆ ಸಮನಾದ ಪದಗಳು ಇಲ್ಲದಿದ್ದರೆ ನಾನು ಅವುಗಳನ್ನು ಹೇಗೆ ಅನುವಾದ/ ಭಾಷಾಂತರ ಮಾಡಬಹುದು?

ವಿವರಣೆ.

ಮೂಲ ಪ್ರತಿಯಲ್ಲಿ ಇರುವ ಕೆಲವು ಪದಗಳಿದ್ದು ಅವು ನಿಮ್ಮ ಸಂಸ್ಕೃತಿಯ ಜನರಿಗೆ ತಿಳಿಯದಿದ್ದರೆ ಅದನ್ನು ಅಪರಿಚಿತ ಪದಗಳು ಎಂದು ಕರೆಯುತ್ತಾರೆ. ಈ ಪದಗಳನ್ನು ಅರ್ಥಮಾಡಿಕೊಳ್ಳಲು ‘ಅನುವಾದದ ಪದಗಳ ಪುಟಗಳು’ ಮತ್ತು ‘ಅನುವಾದದ ಟಿಪ್ಪಣಿಗಳು’ ಸಹಾಯ ಮಾಡುತ್ತದೆ. ಅದನ್ನು ನೀವು ಅರ್ಥಮಾಡಿಕೊಂಡ ನಂತರ ನಿಮ್ಮ ಅನುವಾದವನ್ನು ಓದುವ ಜನರಿಗೆ ಅದನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ನೀವು ತಿಳಿಯಬೇಕು.

ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)

ಧಾನ್ಯಗಳನ್ನು ಸಣ್ಣಗೆ ಪುಡಿಮಾಡಿ ಅದನ್ನು ಎಣ್ಣೆಯಲ್ಲಿ ಮಿಶ್ರಮಾಡಿ ಸಿದ್ಧಪಡಿಸುವ ಆಹಾರವೇ ರೊಟ್ಟಿ. (ಇಲ್ಲಿ ಧಾನ್ಯ ಎಂದರೆ ಹುಲ್ಲಿನ ಬೀಜಗಳು). ಕೆಲವಾರು ಸಂಸ್ಕೃತಿಯಲ್ಲಿ ಈ ರೀತಿಯಾದ ರೊಟ್ಟಿಯನ್ನು ಜನರು ತಿಳಿಯದೆ ಇರಬಹುದು.

  • ಕಾರಣ ಇದೊಂದು ಭಾಷಾಂತರ ಸಮಸ್ಯೆ
  • ಸತ್ಯವೇದದಲ್ಲಿ ಇರುವ ಕೆಲವಾರು ವಸ್ತುಗಳು ಜನರಿಗೆ ತಿಳಿಯದೆ ಇರಬಹುದು ಇದಕ್ಕೆ ಕಾರಣ ಜನರು ಆ ಹಿಂದಿನ ಸಂಸ್ಕೃತಿಗೆ ಸಂಬಂಧಪಟ್ಟವರಲ್ಲ.
  • ಪಠೄದಲ್ಲಿರುವ ಕೆಲವಾರು ಜನರಿಗೆ ತಿಳಿಯದಿದ್ದರೆ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಭಾಷಾಂತರ ತತ್ವಗಳು

  • ನಿಮ್ಮ ಭಾಷೆಯಲ್ಲಿರುವ ಪದಗಳನ್ನೇ ಉಪಯೋಗಿಸಲು ಆದಷ್ಟು ಪ್ರಯತ್ನಪಡಿರಿ.
  • ಸಾಧ್ಯವಾದರೆ ಅಭಿವ್ಯಕ್ತಿಗಳು ಸಣ್ಣದಾಗಿರಲಿ.
  • ದೇವರ ಆಜ್ಞೆಗಳನ್ನು ಮತ್ತು ಐತಿಹಾಸಿಕ ಸಂಗತಿಗಳನ್ನು ಸ್ಪಷ್ಟವಾಗಿ ಪ್ರಕಟಿಸಿರಿ.

ಸತ್ಯವೇದಿಂದ ಉದಾಹರಣೆಗಳು

ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು (ಯೆರೆಮೀಯ 9:11 ULT)

ನರಿಗಳು ವಿಶ್ವದ ಕೆಲವು ಭಾಗಗಳಲ್ಲಿ ಕಂಡು ಬರುವ ನಾಯಿಯಂತಹ ಕಾಡು ಪ್ರಾಣಿ. ಕೆಲವು ಪ್ರದೇಶದಲ್ಲಿ ಅವುಗಳ ಪರಿಚಯವಿಲ್ಲದೆ ಇರಬಹುದು.

ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ, ಅವರು ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿ ಬರುತ್ತಾರೆ ಆದರೆ ಒಳಗೆ ನೋಡಿದರೆ ಅವರು ಹಿಡಿದುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULT)

ನಿಮ್ಮ ಅನುವಾದವನ್ನು ಓದುವ ಸ್ಥಳದಲ್ಲಿ ತೋಳ ಇಲ್ಲದಿದ್ದರೆ ಅಲ್ಲಿಯ ಜನರು ಇದು ನಾಯಿಯ ಹಾಗೆ ಇರುವ ಒಂದು ಉಗ್ರ ಕಾಡು ಪ್ರಾಣಿ, ಅವು ಕುರಿಗಳನ್ನು ಹಿಡಿಯುತ್ತವೆ ಎಂದು ಅವರಿಗೆ ತಿಳಿಯುವುದಿಲ್ಲ.

ಅಲ್ಲಿ ಆತನಿಗೆ ರಕ್ತಬೋಳಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ. (ಮಾರ್ಕ 15:23 ULT)

ರಕ್ತಬೋಳ ಎಂದರೇನು ಅದನ್ನು ಔಷಧಕ್ಕೆ ಬಳಸಲಾಗುವುದು ಎಂದು ಜನರಿಗೆ ತಿಳಿಯದೆ ಇರಬಹುದು

ಆತನು ಮಹಾಜ್ಯೋತಿರ್ಮಂಡಲಗಳನ್ನುಸೃಷ್ಟಿಸಿದ್ದಾನೆ (ಕೀರ್ತನೆ 136:7 ULT)

ಬೆಳಕು ಕೊಡುವ ಸಂಗತಿಗಳಿಗೆ ಕೆಲವು ಭಾಷೆಗಳಲ್ಲಿ ಬೆಳಕು, ಸೂರ್ಯ ಮತ್ತು ಬೆಂಕಿ ಪದಗಳಿದ್ದು ಅದಕ್ಕೆ ಆದ ಸಾಮಾನ್ಯವಾದ ಒಂದು ಪದವಿಲ್ಲ.

ನಿಮ್ಮ ಪಾಪಗಳು.. ಹಿಮದ ಹಾಗೆ ಬಿಳುಪಾಗುವುದು (ಯೆಶಾಯ. 1:18 ULT)

ಪ್ರಪಂಚದ ಅನೇಕ ಬಾಗಗಳಲ್ಲಿ ಜನರಿಗೆ ಹಿಮವನ್ನು ಕಂಡಿರುವುದಿಲ್ಲ. ಅದನ್ನು ಕೇವಲ ಚಿತ್ರಗಳಲ್ಲಿ ನೋಡಿರುತ್ತಾರೆ

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಗೆ ಅಪರಿಚಿತವಾದ ಪದಗಳನ್ನು ಈ ರೀತಿಯಲ್ಲಿ ನೀವು ಅನುವಾದ ಮಾಡಬಹುದು.

  1. ಅಪರಿಚಿತ ವಸ್ತುವನ್ನು ಪರಿಚಯಿಸಲು ಒಂದು ನುಡಿಗುಚ್ಚವನ್ನು ಉಪಯೋಗಿಸಿರಿ ಅಥವಾ ಆ ವಾಕ್ಯವನ್ನು ಅನುವಾದ ಮಾಡುವಲ್ಲಿ ಆ ಅಪರಿಚಿತ ವಸ್ತುವಿನ ಎಷ್ಟು ಪ್ರಾಮುಖ್ಯತೆ ಎಂದು ತಿಳಿಸಿರಿ.

  2. ನಿಮ್ಮ ಭಾಷೆಯಲ್ಲಿ ಅದೇ ಅರ್ಥವನ್ನು ನೀಡುವ ಮತ್ತೊಂದು ಪದವನ್ನು ಉಪಯೋಗಿಸಿರಿ, ಹಾಗೆ ಮಾಡಿದರೆ ಅದು ಐತಿಹಾಸಿಕ ವಾಸ್ತವವನ್ನು ತಪ್ಪಾಗಿ ತಿಳಿಸುವುದಿಲ್ಲ.

  3. ಬೇರೆ ಭಾಷೆಯಿಂದ ಒಂದು ಪದವನ್ನು ತೆಗೆದುಕೊಳ್ಳಿರಿ. ಜನರಿಗೆ ಅರ್ಥವಾಗುವಂತೆ ಅದಕ್ಕೆ ಒಂದು ಸಾಮಾನ್ಯ ಪದವನ್ನು ಅಥವಾ ವಿವರಣಾತ್ಮಕ ನುಡಿಗಟ್ಟನ್ನು ಉಪಯೋಗಿಸಿ ವಿವರಿಸಿರಿ.

  4. ಸರಳ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಿರಿ.

  5. ನಿರ್ಧಿಷ್ಟವಾದ ಅರ್ಥವನ್ನು ನೀಡುವ ನುಡಿಗಟ್ಟನ್ನು ಉಪಯೋಗಿಸಿರಿ

ಅನುವಾದದ ಕೌಶಲ್ಯಗಳನ್ನು ಅಳವಡಿಸಿಕೊಂಡಿರುವ ಉದಾಹರಣೆಗಳು

  1. ಅಪರಿಚಿತ ವಸ್ತುವನ್ನು ಪರಿಚಯಿಸಲು ಒಂದು ನುಡಿಗುಚ್ಚವನ್ನು ಉಪಯೋಗಿಸಿರಿ ಅಥವಾ ಆ ವಾಕ್ಯವನ್ನು ಅನುವಾದ ಮಾಡುವಲ್ಲಿ ಆ ಅಪರಿಚಿತ ವಸ್ತುವಿನ ಎಷ್ಟು ಪ್ರಾಮುಖ್ಯತೆ ಎಂದು ತಿಳಿಸಿರಿ.
  • ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ, ಅವರು ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿ ಬರುತ್ತಾರೆ ಆದರೆ ಒಳಗೆ ನೋಡಿದರೆ ಅವರು ಹಿಡಿದುಕೊಂಡು ಹೋಗುವ ತೋಳಗಳೇ. (ಮತ್ತಾಯ 7:15 ULT)

ಕುರಿ ವೇಷವನ್ನು ಹಾಕಿಕೊಂಡರೂ ಹಸಿದಿರುವ ಅಪಾಯಕಾರಿ ಪ್ರಾಣಿಗಳಹಾಗೆ ಬರುವ ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ ಇಲ್ಲಿ ನಾವು ಕಾಣುವ “ಕ್ರೂರವಾದ ತೋಳಗಳು” ರೂಪಕದ ಒಂದು ಭಾಗವಾಗಿದೆ. ಈ ತೋಳಗಳು ಕುರಿಗಳಿಗೆ ಬಹಳ ಅಪಾಯಕಾರಿಯಾದ ಪ್ರಾಣಿಗಳು ಎಂದು ಶೋತೃಗಳು ತಿಳಿದಿದ್ದರೆ ಆಗ ಮಾತ್ರ ಈ ರೂಪಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. (ಕುರಿಯು ಷ ಜನರಿಗೆ ಅಪರಿಚಿತವಾಗಿದ್ದ ಪಕ್ಷದಲ್ಲಿ ಅದನ್ನು ಅರ್ಥೈಸಲು ಭಾಷಾಂತರ ಕೌಶಲ್ಯವನ್ನು ಉಪಯೋಗಿಸಿ ಕುರಿ ಎಂಬ ಪದದ ಪದವನ್ನು ಅನುವಾದ ಮಾಡಿರಿ ಅಥವಾ ಭಾಷಾಂತರ ಕೌಶಲ್ಯವನ್ನು ಉಪಯೋಗಿಸಿರೂಪಕವನ್ನು ಬದಲಾಯಿಸಿರಿ. ವಿವರಗಳಿಗಾಗಿ ನೋಡಿರಿ Translating Metaphors.)

  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)
  • ಇಲ್ಲಿ ನಮ್ಮ ಬಳಿ ಕೇವಲ ಐದು ಧಾನ್ಯಗಳಿಂದ ಮಾಡಿರುವರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ.
  1. ನಿಮ್ಮ ಭಾಷೆಯಲ್ಲಿ ಅದೇ ಅರ್ಥವನ್ನು ನೀಡುವ ಮತ್ತೊಂದು ಪದವನ್ನು ಉಪಯೋಗಿಸಿರಿ, ಹಾಗೆ ಮಾಡಿದರೆ ಅದು ಐತಿಹಾಸಿಕ ವಾಸ್ತವವನ್ನು ತಪ್ಪಾಗಿ ತಿಳಿಸುವುದಿಲ್ಲ.
  • ನಿಮ್ಮ ಪಾಪಗಳು.. ಹಿಮದಹಾಗೆ ಬಿಳುಪಾಗುವುದು (ಯೆಶಾಯ. 1:18 ULT). ಈ ವಾಕ್ಯ ಹಿಮದ ಕುರಿತಾಗಿಲ್ಲ. ಆದರೆ ಜನರು ಅದು ಎಷ್ಟರ ಮಟ್ಟಿಗೆ ಬೆಳ್ಳಗಿದೆ ಎಂದು ತೋರಿಸಲು ಅಲಂಕಾರದ ಮೂಲಕ ಹಿಮದ ಚಿತ್ರವನ್ನು ನೀಡಲಾಗಿದೆ.
  • ನಿಮ್ಮ ಪಾಪಗಳು.. ಹಾಲಿನಹಾಗೆ ಬಿಳುಪಾಗಿರುವುದು
  • ನಿಮ್ಮ ಪಾಪಗಳು.. ಚಂದ್ರನಹಾಗೆ ಬಿಳುಪಾಗಿರುವುದು
  1. ಬೇರೆ ಭಾಷೆಯಿಂದ ಒಂದು ಪದವನ್ನು ತೆಗೆದುಕೊಳ್ಳಿರಿ. ಜನರಿಗೆ ಅರ್ಥವಾಗುವಂತೆ ಅದಕ್ಕೆ ಒಂದು ಸಾಮಾನ್ಯ ಪದವನ್ನು ಅಥವಾ ವಿವರಣಾತ್ಮಕ ನುಡಿಗಟ್ಟನ್ನು ಉಪಯೋಗಿಸಿ ವಿವರಿಸಿರಿ.
  • ಅಲ್ಲಿ ಆತನಿಗೆ ರಕ್ತಬೋಳಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ (ಮಾರ್ಕ 15:23 ULT). ರಕ್ತಬೋಳವನ್ನು ಅರ್ಥಮಾಡಿಸಲು ಅದನ್ನು ಔಷಧಿ ಎಂಬ ಸಾಮಾನ್ಯ ಪದವನ್ನು ಉಪಯೋಗಿಸಿರಿ.
  • ಅಲ್ಲಿ ಆತನಿಗೆ ರಕ್ತಬೋಳ ಎಂಬ ಔಷಧಿಯನ್ನುಬೆರೆಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು. ಆದರೆ ಆತನು ಅದನ್ನು ಕುಡಿಯಲ್ಲಿಲ್ಲ
  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT). ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಇದನ್ನು ಧಾನ್ಯದಿಂದ ಮಾಡಿದ ರೊಟ್ಟಿ ಎಂದು ತಿಳಿಸಬೇಕು.
  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ*
  1. ಸರಳ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಿರಿ.
  • ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು (ಯೆರೆಮೀಯ 9:11 ULT)
  • ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು
  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ (ಮತ್ತಾಯ 14:17 ULT)
  • ಇಲ್ಲಿ ನಮ್ಮ ಬಳಿ ಕೇವಲ ಐದು ರೊಟ್ಟಿಯ ತುಂಡುಗಳುಮತ್ತು ಎರಡು ಮೀನುಗಳಿವೆ.
  1. ನಿರ್ದಿಷ್ಟ ಅರ್ಥವನ್ನು ನೀಡುವ ನುಡಿಗಟ್ಟು ಮತ್ತು ಪದವನ್ನು ಉಪಯೋಗಿಸಿರಿ
  • ಆತನು ಮಹಾಜ್ಯೋತಿರ್ಮಂಡಲಗಳನ್ನುಸೃಷ್ಟಿಸಿದ್ದಾನೆ (ಕೀರ್ತನೆ 136:7 ULT)
  • ಆತನು ಸೂರ್ಯ ಮತ್ತು ಚಂದ್ರನನ್ನುಸೃಷ್ಟಿಸಿದ್ದಾನೆ