kn_ta/translate/translate-dynamic/01.md

12 KiB
Raw Permalink Blame History

ಪೀಠಿಕೆ.

ನಾವು ಅಕ್ಷರಶಃ ಭಾಷಾಂತರವನ್ನು ಬಹು ನಿಕಟವಾಗಿ ನೋಡಿ ತಿಳಿದುಕೊಂಡಿದ್ದೇವೆ. ಈಗ ನಾವು ಅರ್ಥ ಆಧಾರಿತ ಭಾಷಾಂತರವನ್ನು ನೋಡೋಣ. ಈ ಭಾಷಾಂತರವನ್ನು ಹೀಗೂ ಕರೆಯಬಹುದು.

  • ಸಮಾನ ಅರ್ಥವನ್ನು ಒಳಗೊಂಡ ಭಾಷಾಂತರ.
  • ಅನುರೂಪವಾದ (idiomatic)
  • ಕ್ರಿಯಾತ್ಮಕ

ಪ್ರಮುಖ ಲಕ್ಷಣಗಳು

ಅರ್ಥ ಆಧಾರಿತ ಭಾಷಾಂತರಗಳ ಪ್ರಮುಖ ಲಕ್ಷಣವೆಂದರೆ ಮೂಲವಾಕ್ಯಭಾಗದ ಮಾದರಿಯಂತೆ ಪ್ರಾಮುಖ್ಯತೆ ನೀಡಿ ಅರ್ಥ ಕೆಡದಂತೆ ಭಾಷಾಂತರ ಮಾಡುವುದು. ಇದು ಅವರು ಕೆಲವೊಮ್ಮೆ ಅರ್ಥ ಕೆಡದಂತೆ ಸ್ಪಷ್ಟವಾಗಿ ಉಳಿಸಿಕೊಳ್ಳಲು ವಾಕ್ಯಭಾಗದ ಕ್ರಮವನ್ನು ಅಗತ್ಯಬಿದ್ದರೆ ಬದಲಾಯಿಸುವರು. ಬಹುಪಾಲು ಇಂತಹ ಬದಲಾವಣೆಗಳನ್ನು ಹೊಂದಿರುವ ಅರ್ಥ ಆಧಾರಿತ ಭಾಷಾಂತರಗಳು ಈ ವಿಚಾರಗಳನ್ನು ಒಳಗೊಂಡಿರುತ್ತದೆ.

  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ವ್ಯಾಕರಣಕ್ಕೆ ತಕ್ಕಂತೆ ಪದಕ್ರಮವನ್ನು ಸರಿಹೊಂದಿಸುವುದು.
  • ಸ್ಥಳೀಯ, ಸಹಜ ವ್ಯಾಕರಣ ರಚನೆಗಳ ಮೂಲಕ ಅನ್ಯಭಾಷೆಯ ವ್ಯಾಕರಣ ರಚನೆಯನ್ನು ಬದಲಾಯಿಸಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿನ ತರ್ಕದಂತೆ ಸಹಜವಾದ ಕ್ರಮವನ್ನು ಕಾರಣಗಳ ಕ್ರಮ ಮತ್ತು ಅದರ ಫಲಿತಾಂಶದೊಂದಿಗೆ ಹೊಂದಿಸಲು ಪ್ರಯತ್ನಿಸಬೇಕು.
  • ಬದಲೀ ಪದ ಅಥವಾ ನುಡಿಗಟ್ಟುಗಳನ್ನು ವಿವರಿಸಿ.
  • ಇತರ ಭಾಷೆಯ ಪದಗಳನ್ನು ಭಾಷಾಂತರಿಸಿ ವಿವರಿಸಿ (ಉದಾಹರಣೆಗೆ ("Golgotha"ಗೋಲ್ಗೋಥಾ ="place of the skull" - ಕಪಾಲ ಸ್ಥಳ)
  • ಮೂಲ ವಾಕ್ಯಭಾಗದಲ್ಲಿರುವ ಅಸಾಧಾರಣ ಪದಗಳಿಗೆ ಮತ್ತು ಕಠಿಣಪದಗಳಿಗೆ ಸಮಾನವಾದ ಏಕ ಪದವನ್ನು ಬಳಸಲು ಪ್ರಯತ್ನಿಸುವ ಬದಲು ಸುಲಭವಾದ, ಸರಳವಾದ ಪದವನ್ನು ಬಳಸಬೇಕು.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅಪರಿಚಿತ ಪದಗಳಿದ್ದರೆ ಆ ಸಂಸ್ಕೃತಿಗೆ ಸಮಾನವಾದ ಅರ್ಥ ವಿವರಣೆ ದೊರೆಯದಿದ್ದರೆ ಅದನ್ನು ಬದಲಾಯಿಸಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಸಂಬಂಧಕಾರಕ ಪದಗಳು ಇಲ್ಲದಿದ್ದರೆ ಭಾಷಾಂತರ ಮಾಡುವಾಗ ಅವನ್ನು ಬಳಸಬೇಡಿ.
  • ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಸಮಾನವಾದ ಅಲಂಕಾರಗಳು ಮೂಲ ವಾಕ್ಯಭಾಗದಲ್ಲಿರುವ ಅಲಂಕಾರಗಳಿಗೆ ಸಮಾನ ಅರ್ಥನೀಡುವುದಾದರೆ ಬಳಸಬಹುದು.
  • ವಾಕ್ಯಭಾಗದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಾದರೆ ಅದರೊಂದಿಗೆ ಈಗಾಗಲೇ ತಿಳಿದ ಮಾಹಿತಿಯನ್ನು ಸೇರಿಸಬಹುದು.
  • ಅಸ್ಪಷ್ಟವಾದ ನುಡಿಗುಚ್ಛಗಳು ಮತ್ತು ರಚನೆಗಳನ್ನು ವಿವರಿಸಬೇಕು.

ಅರ್ಥ ಆಧಾರಿತ ಭಾಷಾಂತರಗಳಿಗೆ ಉದಾಹರಣೆಗಳು.

ಅರ್ಥ ಆಧಾರಿತ ಭಾಷಾಂತರಗಳು ಹೇಗೆ ಕಂಡುಬರುತ್ತವೆ? ನಾವು ಇಲ್ಲಿ ಒಂದೇ ವಾಕ್ಯವನ್ನು ಹೇಗೆ ವಿವಿಧ ರೀತಿಯಲ್ಲಿ ಭಾಷಾಂತರಿಸಲಾಗಿದೆ ಎಂಬುದನ್ನು ನೋಡೋಣ. ಲೂಕ 3:8

** ಗ್ರೀಕ್** ಭಾಷೆಯಲ್ಲಿ ಈ ವಾಕ್ಯಭಾಗದ ಅರ್ಥ ಭಾಗವು ಈ ಕೆಳಗೆ ತೋರಿಸಿದಂತಿದೆ.

Ποιήσατε οὖν καρποὺς ἀξίους τῆς μετανοίας

** ಇಂಗ್ಲೀಷ್** ಭಾಷೆಯಲ್ಲಿ ಗ್ರೀಕ್ ಪದದ ಕ್ರಮದಂತೆ ಪದಗಳು ಬಂದಿವೆ ಇಲ್ಲಿ ಕೆಲವು ಪರ್ಯಾಯ ಇಂಗ್ಲೀಷ್ ಪದಗಳನ್ನು ನಿಮ್ಮ ಆಯ್ಕೆಗಾಗಿ ನೀಡಿದೆ.

ಮಾಡಿ / ಮಾಡಿ ತೋರಿಸಿ / ಉತ್ಪಾದನೆ ಮಾಡಿ ಆದುದರಿಂದ ಹಣ್ಣುಗಳು ಇವೆ/ ಪಶ್ಚಾತ್ತಾಪ ಪಡುವುದಕ್ಕೆ ಸೂಕ್ತವಾಗಿದೆ.

ಅಕ್ಷರಶಃ

ಅಕ್ಷರ ಭಾಷಾಂತರ ಸಾಮಾನ್ಯವಾಗಿ ಗ್ರೀಕ್ ವಾಕ್ಯಭಾಗಗಳ ಪದಗಳನ್ನು ಮತ್ತು ಕ್ರಮಗಳನ್ನು ಎಷ್ಟು ಸಾಧ್ಯವೋ ಅಷ್ಟು ಅನುಸರಿಸಲು ರಯತ್ನಿಸುತ್ತಾರೆ.ಉದಾಹರಣೆಗೆ.

ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ಪಶ್ಚಾತ್ತಾಪದಿಂದ ತಿರುಗಿತೆಂಬುದನ್ನು ತಕ್ಕ ಫಲಗಳಿಂದ ತೋರಿಸಿರಿ. (ಲೂಕ 3:8 ULB)

ಇಂತಹ ಪರಿಷ್ಕೃತ ಅಕ್ಷರಶಃ ಭಾಷಾಂತರದಲ್ಲಿ " ತಕ್ಕಫಲ"ಮತ್ತು " ಪಶ್ಚಾತ್ತಾಪ " ಎಂಬ ಪದಗಳು ಹಾಗೆಯೇ ಉಳಿಯುವಂತೆ ನೋಡಿಕೊಳ್ಳುವ ಅಗತ್ಯವೆಂಬುದನ್ನು ಗಮನದಲ್ಲಿಡಬೇಕು. ಪದಗಳ ಕ್ರಮವನ್ನು ಸಹ ಗ್ರೀಕ್ ವಾಕ್ಯದಲ್ಲಿದ್ದಂತೆ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ULB ಭಾಷಾಂತರವು ಇತರ ಭಾಷಾಂತರಗಾರರಿಗೆ ಮೂಲವಾಕ್ಯಭಾಗದಲ್ಲಿರುವಂತೆ ಹೇಗೆ ಭಾಷಾಂತರಿಸ ಬೇಕು ಎಂಬುದನ್ನು ತೋರಿಸಿದೆ. ಆದರೆ ನಿಮ್ಮ ಭಾಷೆಗೆ ಭಾಷಾಂತರ ಮಾಡುವಾಗ ಭಾಷಾಂತರ ಮಾಡಿದ ವಾಕ್ಯಭಾಗ ಸಹಜವಾಗಿ ಮತ್ತು ಸ್ಪಷ್ಟವಾಗಿದ್ದು ಅರ್ಥಮಾಡಿಕೊಳ್ಳಲು ಹಾಗೂ ತಿಳಿಸಲು ಸುಭವಾಗಿರುವಂತೆ ನೋಡಿಕೊಳ್ಳಬೇಕು.

ಅರ್ಥಪೂರ್ಣಭಾಷಾಂತರ / ಅರ್ಥ ಆಧಾರಿತ

ಅರ್ಥಪೂರ್ಣ / ಅರ್ಥ ಆಧಾರಿತ ಭಾಷಾಂತರಗಳು ಇನ್ನೊಂದು ಕಡೆ ಪದಗಳ ಕ್ರಮವನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ. ಏಕೆಂದರೆ ಭಾಷಾಂತರಗಾರರು ತಮ್ಮ ಓದುಗರಿಗೆ ಸುಲಭವಾಗಿ ಅರ್ಥವಾಗುವುದರ ಕಡೆ ಗಮನವಹಿಸುವುದರಿಂದ ಹೀಗಾಗಬಹುದು. ಈ ಕೆಳಗೆ ಕೊಟ್ಟಿರುವ ಅರ್ಥ ಆಧಾರಿತ ಭಾಷಾಂತರಗಳನ್ನು ಪರಿಗಣಿಸಿ. ಲಿವಿಂಗ್ ಬೈಬಲ್ ನಿಂದ ಉದಾಹರಣೆಗಳು

... ನೀವು ನಿಮ್ಮ ಪಾಪಕಾರ್ಯಗಳಿಂದ ಪಶ್ಚಾತ್ತಾಪದಿಂದ ಬದಲಾಗಿದ್ದೀರಿ ಎಂಬುದನ್ನು ನೀವು ಮಾಡುವ ಒಳ್ಳೆ ಕಾರ್ಯಗಳಿಂದ ತೋರಿಸಿ.

New Living ಅನುವಾದದಿಂದ

ನೀವು ಮಾಡಿದ ಪಾಪಗಳನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ಜೀವನವನ್ನು ನಡಿಸುತ್ತಿದ್ದೀರಿ ಎಂಬುದನ್ನು ಸಾಬೀತು ಪಡಿಸಿ.

UDB the Unlocked Dynamic Bible ನಿಂದ

ನೀವು ನಿಮ್ಮ ಪಾಪಮಯವಾದ ನಡವಳಿಕೆಯಿಂದ ಪಶ್ಚಾತ್ತಾಪ ಪಟ್ಟು ಬದಲಾಗಿದ್ದೀರಿ ಎಂಬುದನ್ನು ನಿಮ್ಮ ಒಳ್ಳೆಯ ನಡತೆಯಿಂದ ತೋರಿಸಿ.

ಈ ಎಲ್ಲಾ ಭಾಷಾಂತರಿಸಿದ ವಾಕ್ಯಗಳು ಸಹಜವಾಗಿ, ಅರ್ಥಪೂರ್ಣವಾಗಿ ಅರ್ಥವಾಗುವಂತೆ ಪದಕ್ರಮಗಳನ್ನು ಬದಲಾಯಿಸಿ ಇಂಗ್ಲೀಷ್ ನಲ್ಲಿ ಭಾಷಾಂತರ ಆಗಿರುವುದನ್ನು ತೋರಿಸುತ್ತದೆ. ಆದರೂ ತಕ್ಕ "ಫಲಗಳು" ಎಂಬ ಪದ ವಾಕ್ಯಗಳಲ್ಲಿ ಬಂದಂತೆ ಕಾಣುತ್ತದೆ. ಲಿವಿಂಗ್ ಬೈಬಲ್ ಭಾಷಾಂತರವು ULBಯಲ್ಲಿ ಇರುವ ಬಹುಪಾಲು ಪದಗಳನ್ನು ಬಳಸಿಕೊಂಡಿಲ್ಲ ಮೂಲದಲ್ಲಿ ಬರುವ "ಫಲಗಳು" ಎಂಬ ಪದಕ್ಕೆ ಬದಲಾಗಿ ಅರ್ಥ ಆಧಾರಿತ ಭಾಷಾಂತರದಲ್ಲಿ "ಒಳ್ಳೆಯ ಕಾರ್ಯಗಳು" ಅಥವಾ ನಿಮ್ಮ ಜೀವನದಲ್ಲಿ ನೀವು ಅನುಸರಿಸಿ ನಡೆಯುವ ರೀತಿ ಎಂದು ಬಳಸಿದೆ. "ಫಲಗಳು" ಎಂಬುದು ಇಲ್ಲಿ "ರೂಪಕ" ವಾಗಿ ಬಳಕೆಯಾಗಿದೆ. ಇಲ್ಲಿ "ಫಲಗಳು" ಎಂಬ ಪದವನ್ನು "ರೂಪಕ" ವಾಗಿ ಬಳಸಿದೆ. ಈ ಪದವನ್ನು ಒಬ್ಬ ವ್ಯಕ್ತಿ ಮಾಡುವ ಒಳ್ಳೆಯ ಕೆಲಸವನ್ನು ಸೂಚಿಸುತ್ತದೆ. (ನೋಡಿ Metaphor) - ರೂಪಕ ಅಲಂಕಾರ ನೋಡಿ

ಈ ಭಾಷಾಂತರದಲ್ಲಿ ವಿಷಯ ಆಧಾರಿತ ಹಾಗೂ ಅರ್ಥ ಆಧಾರಿತವಾಗಿ ಭಾಷಾಂತರವಾಗಿದೆಯೇ ಹೊರತು ಪದಕ್ರಮ ಅನುಸರಿಸಿ ಭಾಷಾಂತರ ಆಗಿಲ್ಲ. ಈ ಭಾಷಾಂತರಗಾರರು ಅರ್ಥಪೂರ್ಣವಾದ ಪದಗಳನ್ನು ಪದಗುಚ್ಛಗಳನ್ನು ಇಲ್ಲಿ ಬಳಸಿದ್ದಾರೆ. " ಪಾಪದಿಂದ ಹೊರಬಂದು " ಅಥವಾ " ಪಾಪಮಯವಾದ ನಡವಳಿಕೆಯಿಂದ ಬದಲಾಗಿ” ಎಂಬ ಪದಗಳನ್ನು ಬಳಸಿದ್ದಾರೆ.ಇಲ್ಲಿ "ಪಶ್ಚಾತ್ತಾಪ " ಎಂಬ ಒಂದೇ ಪದವನ್ನು ಬಳಸಿಲ್ಲ. ಅದರ ಬದಲು ಪಶ್ಚಾತ್ತಾಪದ ನಂತರ ಪಶ್ಚಾತ್ತಾಪ ಯಾವುದಕ್ಕೆ ಎಂಬುದನ್ನು ವಿವರಿಸಿದ್ದಾರೆ. ಅಂದರೆ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡರು ಎಂದು ಹೇಳಿದ್ದಾರೆ. ಈ ಎಲ್ಲಾ ವಾಕ್ಯಗಳಲ್ಲಿರುವ ಅರ್ಥ ಅದೇ, ಆದರೆ ಹೇಳಿರುವ ನಮೂನೆಗಳು ವಿಭಿನ್ನ. ಅರ್ಥ ಆಧಾರಿತ ಭಾಷಾಂತರದಲ್ಲಿ ಅರ್ಥವೂ ಹೆಚ್ಚು ಸ್ಪಷ್ಟವಾಗಿದೆ.