kn_ta/translate/resources-words/01.md

11 KiB

ಭಾಷಾಂತರ ಪದಗಳು

ಸತ್ಯವೇದದ ಬರಹಗಾರರು ಯಾವ ಉದ್ದೇಶದಿಂದ ಓದುಗರಿಗೆ ತಿಳಿಸಲು ವಾಕ್ಯ ಭಾಗಗಳನ್ನು ಬರೆದರೋ ಅದೇ ಉದ್ದೇಶದಿಂದ ಪ್ರತಿಯೊಬ್ಬ ಭಾಷಾಂತರಗಾರನು ತಾನು ಭಾಷಾಂತರಿಸುವ ಸತ್ಯವೇದದ ವಾಕ್ಯಭಾಗಗಳಲ್ಲಿ ತನ್ನ ಅತ್ಯುತ್ತಮ ಸಾಮರ್ಥ್ಯವನ್ನು ಬಳಸಿ ಅದೇ ಅರ್ಥವನ್ನು ಕೊಡುವಂತೆ ಭಾಷಾಂತರ ಮಾಡುವುದು ಅವನ ಆಧ್ಯ ಕರ್ತವ್ಯವಾಗಿರುತ್ತದೆ. ಈ ಕ್ರಮವನ್ನು ಅನುಸರಿಸಿ ಭಾಷಾಂತರ ಮಾಡಲು ಅವನು ಸತ್ಯವೇದದ ವಿದ್ವಾಂಸರು ರಚಿಸಿರುವ ಭಾಷಾಂತರಕ್ಕೆ ಸಹಕಾರ ಮಾಡುವ ಲೇಖನವನ್ನು ಅಧ್ಯಯನ ಮಾಡಬೇಕು, ಇದರೊಂದಿಗೆ ಭಾಷಾಂತರ ಪದಗಳ ಸಂಪನ್ಮೂಲಗಳನ್ನು ಓದಿ ತಿಳಿಯಬೇಕು.

ಭಾಷಾಂತರ ಪದಗಳನ್ನು ಉಪಯೋಗಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ :

  1. ಮೂಲ ವಾಕ್ಯಭಾಗಗಳಲ್ಲಿ ಗೊಂದಲ ಉಂಟುಮಾಡುವ ಅಥವಾ ಅರ್ಥಮಾಡಿಕೊಳ್ಳಲು ಕಷ್ಟವೆನಿಸುವ ಪದಗಳನ್ನು ಮತ್ತು ಪ್ರಮುಖವಾದ ಪದಗಳನ್ನು ಗುರುತಿಸಿ ಪಟ್ಟಿಮಾಡಿ.
  2. " ಭಾಷಾಂತರ ಪದಗಳು" ಎಂಬ ವಿಭಾಗದ ಕಡೆ ಗಮನಿಸಿ.
  3. ನೀವು ಗುರುತಿಸಿರುವ ಪ್ರಮುಖ ಪದಗಳನ್ನು ಅಥವಾ ಕ್ಲಿಷ್ಟ ಪದಗಳು ಕಂಡುಹಿಡಿದು ಮೊದಲನೇ ಪದದ ಮೇಲೆ ಕ್ಲಿಕ್ ಮಾಡಿ.
  4. ಆ ಪದದ ಪ್ರವೇಶಕ್ಕೆ ಭಾಷಾಂತರ ಪದಗಳ ವಿಭಾಗವನ್ನು ಓದಿ.
  5. ಇದರಲ್ಲಿನ ವ್ಯಾಖ್ಯಾನವನ್ನು ಓದಿದ ಮೇಲೆ ಸತ್ಯವೇದದ ವಾಕ್ಯಭಾಗವನ್ನು ಪುನಃ ಓದುವಾಗ ಈಗಾಗಲೇ ನೀವು ಓದಿರುವ ಭಾಷಾಂತರ ವ್ಯಾಖ್ಯಾನದ ವಿಷಯವನ್ನು ಮನಸ್ಸಿನಲ್ಲೇ ಮನನ ಮಾಡಿಕೊಳ್ಳಬೇಕು.
  6. ಸತ್ಯವೇದದ ಸನ್ನಿವೇಶಕ್ಕೆ ಮತ್ತು ವ್ಯಾಖ್ಯಾನಕ್ಕೆ ಅನುಗುಣವಾಗಿ ನಿಮ್ಮ ಭಾಷೆಗೆ ಎಲ್ಲಾ ರೀತಿ ಸಾಧ್ಯವಾಗುವಂತೆ ಪದಗಳನ್ನು ಭಾಷಾಂತರಿಸಲು ಯೋಚಿಸಿ. ಇದರಿಂದ ನೀವು ಬಳಸಿರುವ ನಿಮ್ಮ ಭಾಷೆಯಲ್ಲಿನ ಪದಗಳು ಮತ್ತು ನುಡಿಗುಚ್ಛಗಳು ಸಮಾನ ಅರ್ಥ ಹೊಂದಿರುವುದನ್ನು ಹೋಲಿಸಿ ನೋಡಲು ಮತ್ತು ಪ್ರತಿಯೊಂದನ್ನು ಪ್ರಯತ್ನಿಸಿ ನೋಡಲು ಸಹಾಯಕವಾಗಿರುತ್ತದೆ.
  7. ನಿಮಗೆ ಯಾವುದು ಅತ್ಯುತ್ತಮ ಎನಿಸುತ್ತದೋ ಅದನ್ನು ಆಯ್ಕೆ ಮಾಡಿ ಮತ್ತು ಅದನ್ನು ಬರೆದಿಡಿ.
  8. ಮೇಲಿನ ಹಂತಗಳನ್ನು ನೀವು ಗುರುತಿಸಿರುವ ಭಾಷಾಂತರ ಪದಗಳೊಂದಿಗೆ ಪುನರಾವರ್ತಿಸಿ.
  9. ಪ್ರತಿ ಭಾಷಾಂತರ ಪದಗಳಿಗೆ ತಕ್ಕಂತೆ ಉತ್ತಮ ಭಾಷಾಂತರ ಮಾಡಲು ಯೋಚಿಸಿದಾಗ ಇಡೀ ವಾಕ್ಯಭಾಗವನ್ನು ಭಾಷಾಂತರಿಸಿ.
  10. ನೀವು ಭಾಷಾಂತರಿಸಿದ ವಾಕ್ಯಭಾಗವನ್ನು ಇತರರಿಗೆ ಓದಿ ಹೇಳುವುದರ ಮೂಲಕ ನಿಮ್ಮ ಭಾಷಾಂತರವನ್ನು ಪರೀಕ್ಷಿಸಬಹುದು. ಹಾಗೆ ಓದಿದಾಗ ಅವರಿಗೆ ಅರ್ಥವಾಗದೆ ಉಳಿದ ಪದಗಳು ಅಥವಾ ನುಡಿಗುಚ್ಛಗಳನ್ನು ಬೇರೆ ಅರ್ಥಪೂರ್ಣ ಪದ ಮತ್ತು ನುಡಿಗುಚ್ಛ ಸೇರಿಸಿ ಸರಿಪಡಿಸಿ.

ಒಮ್ಮೆ ಭಾಷಾಂತರಕ್ಕೆ ಉತ್ತಮ ಭಾಷಾಂತರ ಪದ ಕಂಡುಬಂದರೆ ನೀವು ಅದೇ ಪದವನ್ನು ಇಡೀ ಭಾಷಾಂತರ ಪ್ರಕ್ರಿಯೆಯಲ್ಲಿ ನಿರಂತರವಾಗಿ ಉಪಯೋಗಿಸಬಹುದು. ಭಾಷಾಂತರದ ಯಾವ ಸ್ಥಳದಲ್ಲಿ ಯಾವ ಪದ ಹೊಂದುತ್ತಿಲ್ಲ ಎಂದು ಕಂಡುಬಂದರೆ ಪುನಃ ಅದನ್ನು ತಿದ್ದುವ ಪ್ರಕ್ರಿಯೆಯನ್ನು ತೊಡಗಿಸಿಕೊಳ್ಳಬೇಕು. ಅಂದರೆ ಈ ಪದಕ್ಕಿಂತ ಉತ್ತಮ ಸಮಾನ ಪದ ಹೊಸ ವಾಕ್ಯಭಾಗದಲ್ಲಿ ಎಲ್ಲಿ ಸರಿಯಾಗಿ ಹೊಂದಿ ಕೊಳ್ಳುವಂತೆ ಎಂದು ನೋಡಿಕೊಳ್ಳಬೇಕು. ಪ್ರತಿಯೊಂದು ಭಾಷಾಂತರ ಪದವನ್ನು ಭಾಷಾಂತರಿಸಲು ಬಳಸುವ ಪದ ಅಥವಾ ಪದಗಳ ಬಗ್ಗೆ ಒಂದು ಲೆಕ್ಕ ಇಟ್ಟುಕೊಳ್ಳಬೇಕು ಮತ್ತು ಇದರ ಮಾಹಿತಿ ಭಾಷಾಂತರ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಭಾಷಾಂತರ ತಂಡದ ಸದಸ್ಯರಿಗೆ ಯಾವ ಪದಕ್ಕೆ ಯಾವ ಪದ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

ಅಪರಿಚಿತ ಉದ್ದೇಶಗಳು.

ಕೆಲವೊಮ್ಮೆ ಭಾಷಾಂತರ ಪದಗಳು ಒಂದು ವಸ್ತು ಅಥವಾ ಒಂದು ಸಂಪ್ರದಾಯ ನಮ್ಮ ಉದ್ದೇಶಿತ ಭಾಷೆಯಲ್ಲಿ ಅಪರಿಚಿತವಾಗಿ ಇರುತ್ತದೆ. ವಿವರವಾದ ನುಡಿಗುಚ್ಛಗಳನ್ನು ಉಪಯೋಗಿಸಲು ಸಾಧ್ಯವಾಗುವ ಪರಿಹಾರಗಳೆಂದರೆ ಸಮಾನವಾಗಿರುವ ಕೆಲವು ಪದಗಳನ್ನು ಬೆಂಬಲಿಸುವುದು, ಬೇರೆ ಭಾಷೆಯಿಂದ ವಿದೇಶಿ ಪದವನ್ನು ಬಳಸುವುದು, ಸರ್ವ ಸಾಮಾನ್ಯವಾಗಿರುವ ಪದ ಬಳಸುವುದು ಅಥವಾ ಹೆಚ್ಚು ನಿರ್ದಿಷ್ಟವಾದ ಪದಗಳನ್ನು ಬಳಸುವುದು. (ಅಪರಿಚಿತವಾದುದನ್ನು ಭಾಷಾಂತರಿಸಿ ಈ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ನೋಡಿ.

ಒಂದು ರೀತಿಯ 'ಅಪರಿಚಿತ ಉದ್ದೇಶ' ದ ಪದಗಳು ಯೆಹೂದಿ ಮತ್ತು ಕ್ರೈಸ್ತ ಧರ್ಮದ ಸಂಪ್ರದಾಯ ಪದ್ಧತಿ ಮತ್ತು ನಂಬಿಕೆಗಳನ್ನು ಕುರಿತು ಹೇಳುತ್ತವೆ. ಕೆಲವು ಸಾಮಾನ್ಯ ಅಪರಿಚಿತ ಉದ್ದೇಶಗಳು:

** ಸ್ಥಳಗಳ ಹೆಸರು** ಯಾವುವೆಂದರೆ :

  • ದೇವಾಲಯ (ಇಸ್ರಾಯೇಲರು ತಮ್ಮ ಕಾಣಿಕೆಗಳನ್ನು ದೇವರಿಗೆ ಅರ್ಪಿಸುವ ಕಟ್ಟಡ)
  • ಸಿನೆಗಾಗ್ / ಸಭಾಮಂದಿರ (ಯೆಹೂದಿಗಳು ತಮ್ಮ ದೇವರನ್ನು ಆರಾಧಿಸಲು ಕೂಡಿಬರುವ ಸ್ಥಳ / ಕಟ್ಟಡ)
  • ಯಜ್ಞವೇದಿಕೆ (ಒಂದು ಎತ್ತರವಾದ ವೇದಿಕೆಯ ಮೇಲೆ ಕಾಣಿಕೆ ಸಲ್ಲಿಸುವುದು ಅಥವಾ ದೇವರಿಗೆ ಅರ್ಪಿಸುವುದು)

** ಜನರು ಹೊಂದಿರುವ ಅಧಿಕಾರದ / ಪದವಿಯ ಹೆಸರುಗಳು** ಅಂದರೆ:

  • ಯಾಜಕ(ತನ್ನ ಜನರ ಪರವಾಗಿ ದೇವರಿಗೆ ಯಜ್ಞದ ಮೂಲಕ ಕಾಣಿಕೆಯನ್ನು ಅರ್ಪಿಸಲು ಆಯ್ಕೆಯಾದವ)
  • ಪರಿಸಾಯರು (ಯೇಸುವಿನ ಕಾಲದಲ್ಲಿ ಇಸ್ರಾಯೇಲರ ಧಾರ್ಮಿಕ ನಾಯಕರ ಗುಂಪು)
  • ಪ್ರವಾದಿ (ದೇವರಿಂದ ಆಯ್ಕೆಯಾಗಿ ದೇವರ ಸಂದೇಶವನ್ನು ಜನರಿಗೆ ತಿಳಿಸುವವ)
  • ಮನುಷ್ಯಕುಮಾರ.
  • ದೇವ ಕುಮಾರ / ಮಗ.
  • ರಾಜ (ಸ್ವತಂತ್ರ ನಗರವನ್ನು ಅಥವಾ ರಾಜ್ಯವನ್ನು ಅಥವಾ ದೇಶವನ್ನು ಆಳುವವ)

** ಸತ್ಯವೇದದ ಪರಿಕಲ್ಪನೆಗಳಿಗೆ ಕೀಲಿಕೈ** ಯಾವುವೆಂದರೆ :

  • ಕ್ಷಮಿಸುವುದು (ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿದರೂ ಅವನ ಬಗ್ಗೆ ಅಸಮಾಧಾನ ವ್ಯಕ್ತ ಮಾಡದೆ ಮತ್ತು ಕೋಪಗಳ್ಳದೆ ಇರುವುದು)
  • ರಕ್ಷಿಸು / ರಕ್ಷಣೆ (ಕೆಟ್ಟತನದಿಂದ,ಶತ್ರುಗಳಿಂದ,ಅಪಾಯದಿಂದ ರಕ್ಷಿಸುವುದು ಅಥವಾ ಮುಕ್ತಗೊಳಿಸುವುದು)
  • ವಿಮೋಚನೆ (ನಮಗೆ ಸೇರಿದುದನ್ನು ಇತರರ ವಶದಿಂದ ಬಿಡಿಸುವುದು ಅಥವಾ ಇತರರ ಬಂಧನದಿಂದ ಬಿಡುಗಡೆ ಮಾಡುವುದು)
  • ಕರುಣೆ (ಅವಶ್ಯಕತೆ ಇರುವವರಿಗೆ ಸಹಾಯಮಾಡುವುದು)
  • ಕೃಪೆ (ಯಾರ ಬಳಿ ಯಾವುದು ಇಲ್ಲವೋ, ಹೊಂದಿಲ್ಲವೋ ಅವರಿಗೆ ಅದನ್ನು ನೀಡುವುದು ಇಲ್ಲವೆ ದೊರೆಯುವಂತೆ ಮಾಡುವದು, ಪಡೆಯಲು ಸಹಾಯಮಾಡುವುದು)

(ಇಲ್ಲಿ ಬರುವ ಎಲ್ಲವೂ ನಾಮಪದಗಳು ಆದರೆ ಅವು ಘಟನೆಗಳನ್ನು ಪ್ರತಿನಿಧಿಸುತ್ತಿವೆ (ಆದುದರಿಂದ ಇವುಗಳನ್ನು ಕ್ರಿಯಾಪದದ ವಾಕ್ಯಭಾಗದಿಂದ (ಕ್ರಿಯೆಯ ಮೂಲಕ) ಭಾಷಾಂತರಿಸಬೇಕು). ನೀವು ಇಂತಹ ಭಾಷಾಂತರ ಪದಗಳನ್ನು ಭಾಷಾಂತರ ತಂಡದ ಸದಸ್ಯರೊಂದಿಗೆ ಚರ್ಚಿಸುವ ಅಗತ್ಯವಿದೆ. ಅಥವಾ ನಿಮ್ಮ ಚರ್ಚಿನ ಸದಸ್ಯರು ಅಥವಾ ನಿಮ್ಮ ಊರಿನ ಜನರೊಂದಿಗೆ ಉತ್ತಮವಾದ ರೀತಿಯಲ್ಲಿ ಭಾಷಾಂತರಿಸುವ ಬಗ್ಗೆ ಚರ್ಚಿಸಿ ತಿಳಿದುಕೊಳ್ಳುವ ಅವಶ್ಯವಿದೆ.