kn_ta/translate/resources-iordquote/01.md

5.7 KiB

ವಿವರಣೆಗಳು.

ಭಾಷೆಯಲ್ಲಿ ಎರಡು ರೀತಿಯ ಉಲ್ಲೇಖವಾಕ್ಯಗಳು ಇರುತ್ತವೆ ಪ್ರತ್ಯಕ್ಷ ಉಲ್ಲೇಖ ಮತ್ತು ಪರೋಕ್ಷ ಉದ್ಧರಣಗಳು. ಉಲ್ಲೇಖ ವಾಕ್ಯಗಳನ್ನು ಭಾಷಾಂತರ ಮಾಡುವಾಗ ಭಾಷಾಂತರಗಾರರು ಪರೋಕ್ಷ ಅಪರೋಕ್ಷ ವಾಕ್ಯಗಳು ಇದ್ದಂತೆಯೇ ಭಾಷಾಂತರ ಮಾಡಬೇಕೇ ಇಲ್ಲವೆ ಎಂಬುದರ ಬಗ್ಗೆ ಮೊದಲು ನಿರ್ಧರಿಸಬೇಕು. (ಅಪರೋಕ್ಷ ಮತ್ತು ಪರೋಕ್ಷ ಉಲ್ಲೇಖಗಳನ್ನು)

ULB,ಯಲ್ಲಿ ಅಪರೋಕ್ಷ, ಪರೋಕ್ಷ ಉದ್ಧರಣವಾಕ್ಯಗಳು ಇದ್ದರೆ ಟಿಪ್ಪಣಿಯಲ್ಲಿ ಬೇರೇ ರೀತಿಯ ವಾಕ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗಿರುತ್ತದೆ. ಭಾಷಾಂತರ ನಿಯಮದ ಸಲಹೆಯಂತೆ ಇದನ್ನು ಪ್ರತ್ಯಕ್ಷ ವಾಕ್ಯದಂತೆ ಅಥವಾ ಅಪರೋಕ್ಷ ಉಲ್ಲೇಖ ವಾಕ್ಯದಂತೆ ಭಾಷಾಂತರ ಮಾಡಲು ಹೇಳಬಹುದು, ಇಲ್ಲವೆ ಉಲ್ಲೇಖ ವಾಕ್ಯದ ಸ್ವಭಾವವನ್ನು ಅನುಸರಿಸಬಹುದು.

ಅಪರೋಕ್ಷ ಮತ್ತು ಪರೋಕ್ಷ ಉದ್ಧರಣಗಳ ಬಗ್ಗೆ ಇರುವ ಮಾಹಿತಿ ಪುಟದಲ್ಲಿ ಎರಡು ಉದ್ಧರಣದ ಬಗ್ಗೆ ವಿವರಿಸಲಾಗಿದೆ. ಕೆಲವೊಮ್ಮೆ ಉಲ್ಲೇಖವಾಕ್ಯಗಳ ನಡುವೆ ಕೆಲವು ವಾಕ್ಯಗಳು ಸೇರಿಕೊಂಡಾಗ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆಯೂ ಟಿಪ್ಪಣಿಯಲ್ಲಿ ಮಾಹಿತಿ ಇದೆ. ಕೆಲವು ಭಾಷೆಯಲ್ಲಿ ಈ ಅಪರೋಕ್ಷ, ಪ್ರತ್ಯಕ್ಷ ಉಲ್ಲೇಖಗಳನ್ನು ಭಾಷಾಂತರಿಸುವಾಗ ಸಹಜವಾದ ರೀತಿಯಲ್ಲಿ ಸರಳವಾಗಿ ಭಾಷಾಂತರ ಮಾಡಬಹುದು. ಇವುಗಳ ಟಿಪ್ಪಣಿಯು ಉದ್ಧರಣದೊಳಗೆ ಉಲ್ಲೇಖ "Quotes within Quotes"

ಭಾಷಾಂತರ ಟಿಪ್ಪಣಿಯ ಉದಾಹರಣೆಗಳು.

ಆತನು ಅವನಿಗೆ ಯಾರಿಗೂ ಹೇಳಬೇಡ ಎಂದು ಹೇಳಿದನು.(ಲೂಕ 5:14 ULB)

  • "ಯಾರಿಗೂ ಹೇಳಬೇಡ" ಇದನ್ನು ಅಪರೋಕ್ಷ (direct quote) ಉದ್ಧರಣವಾಗಿ ಭಾಷಾಂತರಿಸಬಹುದು. " ಯಾರಿಗೂ ಹೇಳಬೇಡ" ನೀನು ಶುದ್ಧನಾದ ಬಗ್ಗೆ ಯಾರಿಗೂ ಹೇಳಬೇಡ"ಎಂದು ಆತನು ಅವನಿಗೆ ಹೇಳಿದನು (ಪರ್ಯಾಯ ಅನುವಾದ): "ನೀನು ಸ್ವಸ್ಥವಾಗಿದ್ದಿ ಎಂದು ಯಾರಿಗೂ ಹೇಳಬೇಡ" (ನೋಡಿ: Direct and Indirect Quotations and Ellipsis)

ಇಲ್ಲಿ ಭಾಷಾಂತರ ಟಿಪ್ಪಣಿಯು ಪರೋಕ್ಷ ಉದ್ಧರಣಗಳನ್ನು ಹೇಗೆ ಅಪರೋಕ್ಷ ಉದ್ಧರಣಗಳಾಗಿ ಬದಲಾಯಿಸಬಹುದು ಮತ್ತು ಭಾಷಾಂತರಿಸಲು ಉದ್ದೇಶಿಸಿರುವ ಭಾಷೆಯಲ್ಲಿ ಹೇಗೆ ಸಹಜವಾಗಿ ಹಿಡಿದಿಡಲು ಸಾಧ್ಯ ಎಂಬುದನ್ನು ತಿಳಿಸಿದೆ.

ಸುಗ್ಗಿಕಾಲದ ಸಮಯದಲ್ಲಿ ಬೆಳೆಕೊಯಿಲು ಮಾಡುವವರಿಗೆ " ಮೊದಲು ಹಣಜಿ ಕಳೆಯೆಲ್ಲವನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು" ಎಂದನು . (ಮತ್ತಾಯ 13:30 ULB)

  • ನಾನು ಬೆಳೆಕೊಯಿಲು ಮಾಡುವವರಿಗೆ, ಮೊದಲು ಹಣಜಿ ಕಳೆಯನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ಆದರೆ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ" ಎಂದು ಹೇಳುವೆನು -ನೀವು ಇದನ್ನು ಪರೋಕ್ಷ ಉದ್ಧರಣವಾಗಿ ಬದಲಾಯಿಸಬಹುದು : ." ನಾನು ಬೆಳೆಕೊಯಿಲು ಮಾಡುವವರಿಗೆ, ಮೊದಲು ಹಣಜಿ ಕಳೆಯನ್ನು ಕೊಯ್ದು ಸುಡುವುದಕ್ಕಾಗಿ ಹೊರೆ ಕಟ್ಟಿ, ಆದರೆ ಗೋಧಿಯನ್ನು ನನ್ನ ಕಣಜಕ್ಕೆ ತುಂಬಿರಿ" ಎಂದು ಹೇಳುವೆನು -ನೀವು ಇದನ್ನು ಪರೋಕ್ಷ ಉದ್ಧರಣವಾಗಿ ಬದಲಾಯಿಸಬಹುದು (ನೋಡಿ: Direct and Indirect Quotations)

ಇಲ್ಲಿ ಭಾಷಾಂತರ ಟಿಪ್ಪಣಿ ಅಪರೋಕ್ಷ ಉಲ್ಲೇಖ ವಾಕ್ಯಗಳನ್ನು ಹೇಗೆ ಪರೋಕ್ಷ ಉಲ್ಲೇಖ ವಾಕ್ಯಗಳಾಗಿ ಬದಲಾಯಿಸಬಹುದು, ಭಾಷಾಂತರಿಸುವ ಭಾಷೆಯಲ್ಲಿ ಸಹಜತೆಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆಯೂ ತಿಳಿಸಿದೆ.