kn_ta/translate/resources-def/01.md

3.3 KiB

ವಿವರಣೆ

ULB (Unlocked Literal Bible) ಸತ್ಯವೇದದಲ್ಲಿ ಇರುವ ಪದಗಳ ಅರ್ಥ ಕೆಲವೊಮ್ಮೆ ನಿಮಗೆ ತಿಳಿಯದೆ ಹೋಗಬಹುದು. ಟಿಪ್ಪಣಿಗಳಲ್ಲಿ ಲಕ್ಷಣ, ವ್ಯಾಖ್ಯಾನ ಅಥವಾ ವಿವರಣೆಗಳು ಪದಗಳ ಅಥವಾ ಪದಗುಚ್ಛಗಳ ಬಗ್ಗೆ ಕೊಡಲ್ಪಟ್ಟು ಅವುಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಕೆಲವೊಮ್ಮೆ ಪದಗಳ ಅಥವಾ ನುಡಿಗಟ್ಟುಗಳ ಬಗ್ಗೆ ಸರಳ ವ್ಯಾಖ್ಯಾನಗಳನ್ನು ಉದ್ಧರಣಾ ಪದಗಳು ಅಥವಾ ವಾಕ್ಯರೂಪಗಳನ್ನು ಸೇರಿಸದೆ ಮಾಡಬಹುದು. ಇಲ್ಲಿ ಕೆಲವು ಉದಾಹರಣೆಗಳು ಇವೆ.

ಮಕ್ಕಳು ಪೇಟೆ ಬೀದಿಗಳಲ್ಲಿ ಕುಳಿತು ತಮ್ಮ ಗೆಳೆಯರಿಗೆ " ನಿಮಗೋಸ್ಕರ ಕೊಳಲೂದಿದೆವುಎಂದರು (ಮತ್ತಾಯ 11:16-17 ULB)

  • ಪೇಟೆ ಬೀದಿ - ವಿಶಾಲವಾದ ತೆರೆದ ಜಾಗ ಅಲ್ಲಿ ಜನರು ತಮ್ಮ ವಸ್ತುಗಳನ್ನು ಮಾರುತ್ತಾರೆ.
  • ಕೊಳಲು - ಇದೊಂದು ಬಿದರಿನಿಂದ ಮಾಡಿದ ಉದ್ದವಾದ ಸಂಗೀತ ಸಾಧನ ಇದರಲ್ಲಿ ಅಲ್ಲಲ್ಲಿ ರಂಧ್ರವಿದ್ದು ಅದರ ಮೂಲಕ ಗಾಳಿಯನ್ನು ಲಯಬದ್ಧವಾಗಿ ಊದುವುದರ ಮೂಲಕ ಸಂಗೀತನಾದವನ್ನು ಹೊರಡಿಸ ಬಹುದು.

ಶೋಭಾಯಮಾನವಾದ ಉಡುಪನ್ನು ಧರಿಸಿರುವವರು, ಭೋಗದಲ್ಲಿ ಭಾಳುವವರು ರಾಜನ ಅರಮನೆಗಳಲ್ಲಿ ವಾಸಿಸುವವರು (ಲೂಕ 7:25 ULB)

  • ರಾಜನ ಅರಮನೆ - ವಿಶಾಲವಾದ, ದೊಡ್ಡ, ಭವ್ಯವಾದ ಆಡಂಬರದ ಮನೆ ಅಲ್ಲಿ ರಾಜನು ವಾಸಿಸುತ್ತಾನೆ.

ಭಾಷಾಂತರ ತತ್ವಗಳು.

  • ಸಾಧ್ಯವಾದಷ್ಟೂ ನಿಮ್ಮ ಭಾಷೆಯಲ್ಲಿರುವ ಪದಗಳನ್ನೇ ಬಳಸಿ.
  • ಭಾವಾಭಿವ್ಯಕ್ತಿಯ ವಾಕ್ಯಗಳನ್ನು, ಸನ್ನಿವೇಶಗಳನ್ನು ಆದಷ್ಟು ಸಂಕ್ಷಿಪ್ತವಾಗಿ ಹೇಳಿ.
  • ದೇವರ ಆಜ್ಞೆಗಳು ಮತ್ತು ಐತಿಹಾಸಿಕವಾದ,ನಿಖರವಾದ ಮಾಹಿತಿಗಳನ್ನು ಪುನರ್ ಉಲ್ಲೇಖಿಸಿ.

ಭಾಷಾಂತರ ಕೌಶಲ್ಯಗಳು.

ನೋಡಿ ಅಪರಿಚಿತ ಭಾಷಾಂತರ ಭಾಷಾಂತರ ಮಾಡುವ ಪದಗಳು, ಅಥವಾ ನುಡಿಗಟ್ಟುಗಳು ನಿಮ್ಮ ಭಾಷೆಯಲ್ಲಿ ಅಪರಿಚಿತವಾಗಿದ್ದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.