kn_ta/translate/resources-clarify/01.md

3.4 KiB

ವಿವರಣೆ

ಕೆಲವೊಮ್ಮೆ UDB ಯಿಂದ ತೆಗೆದ ಭಾಷಾಂತರಕ್ಕಾಗಿ ಟಿಪ್ಪಣಿ ಸಲಹೆ ನೀಡುತ್ತದೆ. ಅಂತಹ ಸಂದರ್ಭದಲ್ಲಿ UDB ಯ ವಾಕ್ಯಭಾಗವು "UDB." ಯಿಂದಲೇ ಅನುಸರಿಸಿ ಭಾಷಾಂತರವಾಗುವುದು

ಭಾಷಾಂತರ ಟಿಪ್ಪಣಿಗಳು ಉದಾಹರಣೆಗಳು.

ಪರಲೋಕದಲ್ಲಿ ಆಸನಾರೂಢನಾಗಿರುವಾತನು ಅವರನ್ನು ಪರಿಹಾಸ್ಯ ಮಾಡುವನು (ದಾ.ಕೀ.2:4 ULB) ಆದರೆ ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನು ಅವರನ್ನು ನೋಡಿ ನಗುವನು (ದಾ.ಕೀ. 2:4 UDB)

ಈ ವಾಕ್ಯವಿರುವ ಟಿಪ್ಪಣಿ ಈ ರೀತಿ ಹೇಳುತ್ತದೆ.

  • ಪರಲೋಕದಲ್ಲಿ ಆತನು ಆಸನಾರೂಢನಾಗಿದ್ದಾನೆ - ಇಲ್ಲಿ ಆಸನಾರೂಢನಾಗಿದ್ದಾನೆ ಎಂಬುದು ಆಡಳಿತವನ್ನು ಪ್ರತಿನಿಧಿಸುತ್ತದೆ. ಆತನು ಕುಳಿತಿರುವುದನ್ನು ಸೂಚಿಸಿರುವುದು ಸ್ಪಷ್ಟವಾಗಿದೆ. AT: " ಪರಲೋಕದಲ್ಲಿ ಆಡಳಿತ ಅಥವಾ ಪರಲೋಕದಲ್ಲಿ ಆತನ ಸಿಂಹಾಸನದ ಮೇಲೆ ಕುಳಿತಿರುವಾತನು " " (UDB) (See: Metonymy and Explicit)

" ಇಲ್ಲಿ ಪರಲೋಕದಲ್ಲಿ ಸಿಂಹಾಸನಾರೂಢನಾಗಿ ಇರುವನು " ಎಂಬ ನುಡಿಗಟ್ಟನ್ನು ವಿವರಿಸಲು ಎರಡು ಮುಖ್ಯ ಅಂಶಗಳನ್ನು ಭಾಷಾಂತರಕ್ಕಾಗಿ ಶಿಫಾರಸ್ಸು ಮಾಡಿದೆ. ಮೊದಲನೆಯದು" ಸಿಂಹಾಸನಾರೂಢನಾಗಿರುವನು" ಎಂಬುದನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. ಎರಡನೆಯದು ಆಡಳಿತ ನಡೆಸುವ ಬಗ್ಗೆ ಸೂಚನೆ ನೀಡಿದರು ಆತನು ಸಿಂಹಾಸನದ ಮೇಲೆ ಕುಳಿತಿರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಸಲಹೆ UDB ಯಿಂದ ದೊರೆತಿದೆ.

ಅವನು ಯೇಸುವನ್ನು ನೋಡಿದೊಡನೆ ಅವನು ಮುಖ ಅಡಿಮಾಡಿ ಬಿದ್ದನು (ಲೂಕ 5:12 ULB) ಅವನು ಯೇಸುವನ್ನು ನೋಡಿದಾಗ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿದನು . (ಲೂಕ5:12 UDB)

ಈ ವಾಕ್ಯದ ಟಿಪ್ಪಣಿ ಹೀಗೆ ಹೇಳುತ್ತದೆ.

  • ಅವನು ಮುಖ ಅಡಿಮಾಡಿ ಬಿದ್ದನು - - ಅಂದರೆ ಮಂಡಿಯೂರಿ ಮುಖವನ್ನು /ಹಣೆಯನ್ನು ನೆಲಕ್ಕೆ ಮುಟ್ಟಿಸಿದನು ಇಲ್ಲವೇ ಭೂಮಿಯವರೆಗೆ ಬಾಗಿ ನಮಸ್ಕರಿಸಿದ(UDB)

(UDB)ಯಿಂದ ಆಯ್ದ ಪದಗಳು ಭಾಷಾಂತರಕ್ಕೆ ಇನ್ನೊಂದು ಸಲಹೆಯನ್ನು ನೀಡಿದೆ.