kn_ta/translate/guidelines-intro/01.md

7.3 KiB
Raw Permalink Blame History

ನಾಲ್ಕು ಮುಖ್ಯ ಗುಣಲಕ್ಷಣಗಳು.

ಉತ್ತಮ ಭಾಷಾಂತರದಲ್ಲಿ ನಾಲ್ಕು ಮುಖ್ಯ ಗುಣಲಕ್ಷಣಗಳಿವೆ.

ಅವು ಯಾವುವೆಂದರೆ:

ಈ ನಾಲ್ಕು ಗುಣಲಕ್ಷಣಗಳು ಕುರ್ಚಿಯ ನಾಲ್ಕು ಕಾಲುಗಳು ಇದ್ದಂತೆ. ಪ್ರತಿಯೊಂದು ಕಾಲು ಮುಖ್ಯವಾದುದು. ಒಂದು ಇಲ್ಲದಿದ್ದರೂ ಕುರ್ಚಿ ನೆಟ್ಟಗೆ ನಿಲ್ಲಲಾರದು. ಭಾಷಾಂತರದಲ್ಲಿ ಈ ನಾಲ್ಕು ಅಂಶಗಳು ತುಂಬಾ ಮುಖ್ಯವಾದುದು. ಚರ್ಚ್/ ಸಭೆಯ ಸಮ್ಮತಿಗೆ ಇವು ಅನುಕೂಲಕರ ಹಾಗೂ ವಿಶ್ವಾಸಾರ್ಹ ಭಾಷಾಂತರ.

ಸ್ಪಷ್ಟವಾದ.

ಉತ್ಕೃಷ್ಟಮಟ್ಟದ ವ್ಯಾಪ್ತಿಯನ್ನು ಹೊಂದಿದ ಭಾಷಾಂತರ ಮಾಡಲು ಯಾವ ಭಾಷೆಯಿಂದಲಾದರೂ ರಚನಾತ್ಮಕ ವಿಚಾರಗಳನ್ನು ಅಳವಡಿಸಬೇಕು. ಇದರೊಂದಿಗೆ ಸರಳೀಕೃತ ಪರಿಕಲ್ಪನೆಗಳು. ನಿಗಧಿತ ವಾಕ್ಯಭಾಗದ ಪುನರ್ ನಿರೂಪಣೆ, ಅವಶ್ಯಕತೆ ಇರುವ ಪದಗಳನ್ನು ಮೂಲವಾಕ್ಯಭಾಗದ ಅರ್ಥ ಕೆಡದಂತೆ ನಿಖರವಾಗಿ ಮಾಡಲು ಬಳಸುವುದು ಅಗತ್ಯ. ಸ್ಪಷ್ಟವಾದ./ ಪಾರದರ್ಶಕ ಭಾಷಾಂತರ ಮಾಡಲು ನೋಡಿ - ಸ್ಪಷ್ಟ / ಪಾರದರ್ಶಕ ಭಾಷಾಂತರ ಮಾಡುವುದು.

ಸಹಜವಾದ

ನಿಮ್ಮ ಭಾಷೆಗೆ ಸಂಬಂಧಿಸಿದ ವಾಕ್ಯಭಾಗಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಲು ಸೂಕ್ತಪದಗಳನ್ನು ಸಹಜರೀತಿಯಲ್ಲಿ ಬಳಸಬೇಕು. ಸಹಜವಾದ ಭಾಷಾಂತರಮಾಡಲು ನೋಡಿ ಸಹಜವಾದ ಭಾಷಾಂತರಗಳನ್ನು ಸೃಷ್ಟಿಸಿ / ಮಾಡಿ.

ನಿರ್ದಿಷ್ಟ / ನಿಖರವಾದ ಭಾಷಾಂತರ.

ಮೂಲಭಾಷೆಯಿಂದ ಯಾವುದೇ ಬದಲಾವಣೆಯಾಗದಂತೆ, ಮೂಲಭಾಷೆಯನ್ನು ಅರ್ಥ ಮಾಡಿ ತೋರಿಸಿದ ಶ್ರೋತೃಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕೆಂದರೆ ಈ ಅಂಶಗಳನ್ನು ಗಮನದಲ್ಲಿಡಬೇಕು. ನಿರ್ದಿಷ್ಟ, ನಿಖರವಾಗಿ,ಯಾವುದೇ ಬದಲಾವಣೆ ಇಲ್ಲದೆ, ಯಾವಅಂಶವನ್ನೂ ಬಿಡದೆ, ಯಾವ ಹೊಸ ಪದಗಳನ್ನೂ ಸೇರಿಸದೆ ಭಾಷಾಂತರ ಮಾಡಬೇಕು. ಮನಸ್ಸಿನಲ್ಲಿ ವಾಕ್ಯಭಾಗದ ಅರ್ಥಗಳನ್ನು ಸರಿಯಾಗಿ ಮನನ ಮಾಡಿ ಭಾಷಾಂತರ ಮಾಡಬೇಕು, ನಂತರ ಇದರೊಂದಿಗೆ ವಿಶ್ವಾಸಪೂರ್ಣ ಮಾಹಿತಿಯನ್ನು, ಗೊತ್ತಿರದ ಪರಿಕಲ್ಪನೆಗಳನ್ನು ಮತ್ತು ಅಲಂಕಾರಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ, ನಿಖರವಾಗಿ ಭಾಷಾಂತರಿಸಿ ತಿಳಿಸಬೇಕು. ನಿಖರವಾದ ಭಾಷಾಂತರಮಾಡಲು ಕಲಿತುಕೊಳ್ಳ ಬೇಕೆಂದರೆ ನೋಡಿ ನಿಖರವಾದ ಭಾಷಾಂತರಗಳನ್ನು ಸೃಷ್ಟಿಸಿ / ಮಾಡಿ.

ಸಭೆಯಿಂದ / ಚರ್ಚನಿಂದ ಮಾನ್ಯತೆ ಪಡೆದ ಭಾಷಾಂತರ.

ಒಂದು ಭಾಷಾಂತರ.ಸ್ಪಷ್ಟವಾಗಿ, ಸಹಜವಾಗಿ ಮತ್ತು ನಿಖರವಾಗಿ ಇದ್ದು ಸಭೆ/ ಚರ್ಚ್ ನಿಂದ ಮಾನ್ಯತೆ ಪಡೆಯದಿದ್ದರೆ, ಸಮ್ಮತಿ ಪಡೆಯದಿದ್ದರೆ ಚರ್ಚ್ ಅಥವಾ ಸಭೆ ಆತ್ಮೋನ್ನತಿಗೆ ನೀತಿ ಬೋಧನೆ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ ಸಭೆ/ ಚರ್ಚ್ ಇಂತಹ ಭಾಷಾಂತರದಲ್ಲಿ ತೊಡಗಿಸಿಕೊಂಡು ಪರಿಶೀಲಿಸಿ ತಿದ್ದುಪಡಿ ಮಾಡುವುದು. ಮತ್ತು ಭಾಷಾಂತರಿಸಿದ ಮಾಹಿತಿಯನ್ನು ವಿತರಿಸುವುದರಲ್ಲಿ ಪಾತ್ರವಹಿಸಬೇಕು. ಸಭೆ/ ಚರ್ಚ್ ನಿಂದ ಮಾನ್ಯತೆ ಪಡೆಯುವಂತಹ ಭಾಷಾಂತರಮಾಡಲು ಕಲಿಯುವುದಕ್ಕಾಗಿ ನೋಡಿ ಚರ್ಚ್ ಅಥವಾ ಸಭೆಯಿಂದ ಮಾನ್ಯತೆ ಪಡೆಯುವಂತಹ ಭಾಷಾಂತರ ಮಾಡುವುದು.

ಆರು ಇತರ ಗುಣಲಕ್ಷಣಗಳು.

ಇದರೊಂದಿಗೆ ಸ್ಪಷ್ಟ/ ಪಾರದರ್ಶಕ, ಸ್ವಾಭಾವಿಕ / ಸಹಜವಾದ, ನಿಖರ ಮತ್ತು ಚರ್ಚ್/ ಸಭೆಯಿಂದ ಸಮ್ಮತಿ ಪಡೆದ ಉತ್ತಮ ಭಾಷಾಂತರಗಳು ಆಗಿರಬೇಕು.