kn_ta/translate/guidelines-collaborative/01.md

5.5 KiB

ಒಂದೇ ಭಾಷೆಯನ್ನು ಮಾತನಾಡುವ ಒಂದು ತಂಡದವರು ಒಟ್ಟಾಗಿ ಸೇರಿ ಸಹಕಾರದೊಂದಿಗೆ ಮಾಡುವ ಸತ್ಯವೇದದ ಭಾಷಾಂತರವನ್ನು ಸಹಯೋಜಿತ ಭಾಷಾಂತರ ಎಂದು ಹೇಳಬಹುದು

ನೀವು ಮಾಡಿರುವ ಭಾಷಾಂತರ ಉತ್ತಮ ಮಟ್ಟದ್ದು ಆಗಿರಬೇಕಾಗಿದ್ದಲ್ಲಿ, ನೀವು ಭಾಷಾಂತರ ಮಾಡಬೇಕಾದ ಭಾಷೆಯನ್ನು ಮಾತನಾಡುವ ವಿಶ್ವಾಸಿಗಳೊಂದಿಗೆ ಭಾಷಾಂತರ ಮಾಡುವುದು, ಪರಿಶೀಲಿಸುವುದು ಮತ್ತು ಭಾಷಾಂತರಿಸಿದ ವಿಷಯಗಳನ್ನು ಹಂಚುವುದು ಇತ್ಯಾದಿ ಮಾಡಲು ಯೋಜನೆ ಇರಬೇಕು. ನಿಮ್ಮ ಭಾಷಾಂತರವನ್ನು ಉತ್ತಮ ಗುಣಮಟ್ಟದ್ದಾಗಿರಬೇಕೆಂದರೆ ಇನ್ನಷ್ಟು ಉತ್ತಮ ಪಡಿಸ ಬೇಕೆಂದರೆ ಈ ಕೆಳಗೆ ಕೊಟ್ಟಿರುವ ಅಂಶಗಳನ್ನು ಅಳವಡಿಸಿ.

  • ನೀವು ಮಾಡಿರುವ ಭಾಷಾಂತರವನ್ನು ಇನ್ನೊಬ್ಬರಿಗೆ ಕೇಳಿಸುವಂತೆ ಓದಿ ಕೇಳಿಸಿ. ನೀವು ಓದಿದ ಮೇಲೆ ನಿಮ್ಮ ಭಾಷಾಂತರದಲ್ಲಿರುವ ವಾಕ್ಯಗಳು ಒಂದರೊಡನೊಂದು ಹೊಂದಿಕೊಂಡು ಸರಿಯಾದ ಅರ್ಥ ಕೊಡುವಂತೆ ಇದೆಯೇ ಕೇಳಿ ತಿಳಿದುಕೊಳ್ಳಿ

ನೀವು ಬಳಸಿರುವ ಪದಗಳು, ನುಡಿಗಟ್ಟುಗಳು, ಪದಗುಚ್ಛಗಳು ನಿರ್ದಿಷ್ಟ ಹಾಗೂ ನಿಖರವಾಗಿ ಬಳಸಲಾಗಿದೆಯೇ ಎಂದು ಕೇಳಿ ತಿಳಿದುಕೊಳ್ಳಿ. ನಿಮ್ಮ ಸಮುದಾಯದವರು ಅವರದೇ ಭಾಷೆ ಆಡುವುದರಿಂದ ಸರಿಯಾದ ಉಚ್ಛಾರಣೆ, ಅರ್ಥ ಸ್ಫುರಿಸುವಂತಿದೆಯೇ ಎಂದು ತಿಳಿದು ಬೇಕಾದ ಬದಲಾವಣೆಗಳನ್ನು ಮಾಡಬೇಕು.

  • ಇನ್ನೊಬ್ಬರ ಸಹಾಯ ಪಡೆದು ನಿಮ್ಮ ಭಾಷಾಂತರದಲ್ಲಿ ಆಗಿರುವ ಕಾಗುಣಿತ ತಪ್ಪುಗಳನ್ನು ಗುರುತಿಸಿ ಹೇಳುವಂತೆ ಮಾಡಿ. ಕೆಲವೊಮ್ಮೆ ನೀವು ಅವಶ್ಯಕತೆ ಇಲ್ಲದಿದ್ದರೂ ಕೆಲವು ಪದಗಳನ್ನು ವಿಭಿನ್ನವಾಗಿ ಉಪಯೋಗಿಸಿರಬಹುದು, ಅದನ್ನು ಗುರುತಿಸಿ ಸರಿಪಡಿಸಿ. ಕೆಲವು ಪದಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತವೆ., ಇನ್ನು ಕೆಲವು ಪದಗಳು ಎಲ್ಲಾ ಸನ್ನಿವೇಶಗಳಲ್ಲೂ ಬದಲಾಗದೆ ಉಳಿಯಬಹುದು. ಇಂತಹ ಬದಲಾವಣೆಗಳ ಬಗ್ಗೆ ಗಮನಕೊಡಿ, ಇದರಿಂದ ನಿಮ್ಮ ಭಾಷಾಂತರದಲ್ಲಿ ನೀವು ಉಪಯೋಗಿಸಿರುವ ಪದಗಳ ಕುರಿತುಯಾವ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.
  • ನಿಮ್ಮ ಭಾಷೆಯನ್ನು ಮಾತನಾಡುವ ಸಮುದಾಯದಲ್ಲಿರುವವರು ವಿವಿಧ ಭಾಷೆಯನ್ನು ಮಾತನಾಡುವವರಾಗಿದ್ದು ನೀವು ಬರೆದಿರುವುದನ್ನು ಸುಲಭವಾಗಿ ಗುರುತಿಸಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಕೇಳಿ ತಿಳಿದುಕೊಳ್ಳಿ. ನಿಮ್ಮ ಭಾಷಾಂತರದಲ್ಲಿ ಅರ್ಥವಾಗದೇ ಇರುವಂತದ್ದು, ಅಸ್ಪಷ್ಟವಾಗಿರುವಂತದ್ದು ಯಾವುದಾದರೂ ಇದೆಯೇ ಎಂದು ಇತರರಿಂದ ಕೇಳಿ ತಿಳಿದುಕೊಳ್ಳಿ. ನಿಮ್ಮ ಭಾಷಾಂತರ ಕೃತಿಯನ್ನು ಓದುಗರಿಗೆ ಸಮರ್ಪಿಸುವ ಮೊದಲು ಎಲ್ಲಾ ರೀತಿಯ ಬದಲಾವಣೆಗಳನ್ನು ಮಾಡಿ ಸರಿಪಡಿಸಿ.

ನಿಮ್ಮ ಭಾಷೆಯನ್ನು ಮಾತನಾಡುವ ವಿಶ್ವಾಸಿಗಳು ನಿಮ್ಮ ಭಾಷೆಯಲ್ಲಿ ಭಾಷಾಂತರಮಾಡಲು ಇಚ್ಛಿಸುವವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾದರೆ ಪ್ರಯತ್ನಿಸುವುದನ್ನು ನೆನಪಿನಲ್ಲಿಡಿ, ಇವರು ನಿಮ್ಮೊಂದಿಗೆ ಭಾಷಾಂತರ ಮಾಡುವುದಲ್ಲದೆ ಪರಿಶೀಲಿಸುವುದು, ಭಾಷಾಂತರಿಸಿದ ವಿಷಯವನ್ನು ಇತರರಿಗೆ ಹಂಚುವುದು, ಉತ್ತಮ ಗುಣಮಟ್ಟ ಹೊಂದಿರುವಂತದ್ದು ಮತ್ತು ಹೆಚ್ಚೆಚ್ಚು ಜನರು ಇವುಗಳನ್ನು ಓದುವಂತೆ ಕೈಗೊಳ್ಳವುದು ಇವೆಲ್ಲವನ್ನು ಮಾಡುವವರಾಗಿರಬೇಕು.

(ನೀವು ಈ ವಿಡಿಯೋವನ್ನು ನೋಡಬಹುದು at http://ufw.io/guidelines_collab.)