kn_ta/translate/figs-parables/01.md

13 KiB

ಸಾಮ್ಯಗಳು ಎಂದರೆ ಅದೊಂದು ಸಣ್ಣಕಥೆ, ಸತ್ಯಸಂಗತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಮರೆಯಲು ಸಾಧ್ಯವಿಲ್ಲದ್ದು.

ವಿವರಣೆಗಳು

ಸಾಮ್ಯಗಳು ಎಂದರೆ ಸಣ್ಣಕಥೆ, ಸತ್ಯವನ್ನು ಬೋಧಿಸಲು ಹೇಳುವಂತಹ ಕಥೆಗಳು. ಈ ಸಾಮ್ಯಗಳಲ್ಲಿರುವ ಘಟನೆಗಳು ನಡೆಯುವಂತಹದ್ದಾದರೂ ಕೆಲವು ಅವುಗಳಲ್ಲಿ ನಿಜವಾಗಿ ನಡೆದಿಲ್ಲ. ಇವುಗಳನ್ನು ಜೀವನದಲ್ಲಿನ ಸತ್ಯಸಂಗತಿಗಳನ್ನು ತಿಳಿಸಲು ಹೇಳಿದ ಕಥೆಗಳು. ಈ ಸಾಮ್ಯಗಳಲ್ಲಿ ಕಂಡುಬರುವ ನಿರ್ದಿಷ್ಟವ್ಯಕ್ತಿಗಳಿಗೆ ಕೆಲವರಿಗೆ ಮಾತ್ರ ಹೆಸರು ಇರುತ್ತದೆ. (ಇಷ್ಟು ವಿವರಗಳ ಮೂಲಕ ನಿಮಗೆ ಸಾಮ್ಯಗಳು ಎಂದರೇನು ? ನಿಜವಾದ ಘಟನೆ ಎಂದರೆ ಏನು ? ಎಂಬುದು ತಿಳಿದಿರಬಹುದು.) ಸಾಮಾನ್ಯವಾಗಿ ಈ ಸಾಮ್ಯಗಳಲ್ಲಿ ಉಪಮಾ ಅಲಂಕಾರ ಮತ್ತು ರೂಪಕ ಅಲಂಕಾರಗಳನ್ನು ಬಳಸಿರುತ್ತಾರೆ ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.

"ಒಬ್ಬ ಕುರುಡನು ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಲು ಆದಿತೇ?" ಹಾಗೇನಾದರೂ ಮಾಡಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವುದಿಲ್ಲವೇ?" (ಲೂಕ 6:39 ULB)

ಈ ಸಾಮ್ಯದಿಂದ ಒಬ್ಬ ವ್ಯಕ್ತಿಗೆ ಆತ್ಮಿಕವಾದ ಜ್ಞಾನವಿಲ್ಲದಿದ್ದರೆ ಇನ್ನೊಬ್ಬರನ್ನು ಆತ್ಮಿಕವಾಗಿ ಬೆಳೆಸಲು ಅವರಿಗೆ ಬೇಕಾದ ವಿಷಯ ತಿಳಿಸಲು ಸಾಧ್ಯವಿಲ್ಲ.ಇಬ್ಬರೂಅಜ್ಞಾನದಲ್ಲಿ ಬಿದ್ದು ನರಳುವರು ಎಂದು ತಿಳಿಸುತ್ತದೆ.

ಸತ್ಯವೇದದ ಉದಾಹರಣೆಗಳು.

ದೀಪವನ್ನು ಹೊತ್ತಿಸಿ ಕೊಳಗದೊಳಗೆ ಯಾರೂ ಇಡುವುದಿಲ್ಲ ದೀಪಸ್ಥಂಭದ ಮೇಲೆ ಇಡುತ್ತಾರಷ್ಟೆ, ಆಗ ಮನೆಯಲ್ಲಿ ಇರುವವರೆಲ್ಲರಿಗೆ ಬೆಳಕು ಕೊಡುತ್ತದೆ. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ, ಹೀಗಾದರೆ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. (ಮತ್ತಾಯ 5:15-16 ULB)

ಈ ಸಾಮ್ಯದ ಮೂಲಕ ನಾವು ದೇವರಿಗಾಗಿ ಜೀವಿಸುವ ಜೀವನಜನರ ಮುಂದೆ ಬಚ್ಚಿಡದೆ ಪ್ರಕಟವಾಗಿಡಬೇಕು (ತೆರೆದ ಪುಸ್ತಕದಂತೆ) ಎಂದು ತಿಳಿಯುತ್ತೇವೆ.

ನಂತರ ಯೇಸು ಇನ್ನೊಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, "ಪರಲೋಕ ರಾಜ್ಯವು ಸಾಸಿವೆಕಾಳಿಗೆ ಹೋಲಿಕೆ ಯಾಗಿದೆ" ಒಬ್ಬ ಮನುಷ್ಯಸಾಸಿವೆ ಕಾಳನ್ನು ತನ್ನ ಹೊಲದಲ್ಲಿ ಬಿತ್ತಿದನು". ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ." (ಮತ್ತಾಯ 13:31-32 ULB)

ಈ ಸಾಮ್ಯವು ದೇವರ ಪರಲೋಕ ರಾಜ್ಯವು ಮೊದಲು ನೋಡಲು ಚಿಕ್ಕದಾದರೂ ಆಮೇಲೆ ಬೃಹದಾಕಾರವಾಗಿ ಇಡೀ ವಿಶ್ವವನ್ನು ವ್ಯಾಪಿಸಿ ಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ತಂತ್ರಗಳು.

  1. ಕೆಲವೊಮ್ಮೆ ಕೆಲವರಿಗೆ ಈ ಸಾಮ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಏಕೆಂದರೆ ಇದರಲ್ಲಿ ಕೆಲವೊಮ್ಮೆ ಓದುಗರಿಗೆ ಪರಿಚಯವಿಲ್ಲದ ಪದಗಳಿರಬಹುದು ಅಂತಹ ಸಂದರ್ಭದಲ್ಲಿ ಅವರಿಗೆ ಪರಿಚಯವಿರುವ ಪದಗಳನ್ನು ಬಳಸಿ ತಿಳಿಸಬಹುದು. ಆದರೆ ಇಲ್ಲಿರುವ ಬೋಧನೆಯ ಅಂಶಗಳನ್ನು ಬದಲಾಯಿಸಬಾರದು. ಅಪರಿಚಿತ ಭಾಗಗಳನ್ನು ಭಾಷಚಾಂತರಿಸುವುದು ನೋಡಿ.
  2. ಈ ಸಾಮ್ಯದಲ್ಲಿರುವ ಬೋಧನೆಗಳು ಅಸ್ಪಷ್ಟವಾಗಿದ್ದರೆ ಪೀಠಿಕೆಯಲ್ಲಿಈ ಸಾಮ್ಯದಲ್ಲಿ ಬರುವ ವಿಚಾರಗಳನ್ನು ವಿವರಿಸಿ ಜನರು ಉದಾರವಾಗಿರಬೇಕು ಎಂಬುದರ ಬಗ್ಗೆ ಹೇಳಿರುವ ಮಾತುಗಳನ್ನು ತಿಳಿಸಬೇಕು

ಭಾಷಾಂತರ ತಂತ್ರಗಳನ್ನು ಅಳವಡಿಸಿರುವುದಕ್ಕೆ ಉದಾಹರಣೆಗಳು.

  1. ಕೆಲವೊಮ್ಮೆ ಕೆಲವರಿಗೆ ಈ ಸಾಮ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಏಕೆಂದರೆ ಇದರಲ್ಲಿ ಕೆಲವೊಮ್ಮೆ ಓದುಗರಿಗೆ ಪರಿಚಯವಿಲ್ಲದ ಪದಗಳಿರಬಹುದು ಅಂತಹ ಸಂದರ್ಭದಲ್ಲಿ ಅವರಿಗೆ ಪರಿಚಯವಿರುವ ಪದಗಳನ್ನು ಬಳಸಿ ತಿಳಿಸಬಹುದು. ಆದರೆ ಇಲ್ಲಿರುವ ಬೋಧನೆಯ ಅಂಶಗಳನ್ನು ಬದಲಾಯಿಸಬಾರದು.
  • ಯೇಸು ಅವರನ್ನು ಕುರಿತು " ದೀಪವನ್ನು ತಂದು ಕೊಳಗದೊಳಗಾಗಲೀ, ಮಂಚದ ಕೆಳಗಾಗಲೀ ಇಡುತ್ತಾರೆಯೇ ? " ದೀಪದ ಸ್ಥಂಭದಮೇಲೆ ಇಡುತ್ತೀರಲ್ಲವೇ ? ". (ಮಾರ್ಕ 4:21 ULB) –ನಿಮ್ಮ ಜನರಿಗೆ ದೀಪದ ಸ್ಥಂಭ ಎಂಬುದು ತಿಳಿಯದೇ ಇದ್ದಲ್ಲಿ ಅವರು ತಮ್ಮ ಮನೆಯಲ್ಲಿ ದೀಪದ ಬೆಳಕು ಸಂಪೂರ್ಣವಾಗಿ ಬೆಳಗಲು ದೀಪವನ್ನು ಎಲ್ಲಿ ಇಡುತ್ತಾರೆ ಎಂದು ತಿಳಿದು ಆ ಪದವನ್ನು ಬಳಸಿ.
  • ಯೇಸು ಅವರನ್ನು ಕುರಿತು "ದೀಪವನ್ನು ತಂದು ಕೊಳಗದೊಳಗಾಗಲೀ, ಮಂಚದ ಕೆಳಗಾಗಲೀ ಇಡುತ್ತಾರೆಯೇ ?" ನೀವು ದೀಪವನ್ನು ತಂದು ಎತ್ತರವಾದ ಅಟ್ಟಣಿಗೆಯ ಮೇಲೆ ಇಡುತ್ತೀರೀ .
  • ನಂತರ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದನು. " ಆತನು ಅವರಿಗೆ " ದೇವರ ಪರಲೋಕ ರಾಜ್ಯವು ಸಾಸಿವೆ ಕಾಳಿನಂತೆ, ಅದನ್ನು ಒಬ್ಬ ಮನುಷ್ಯ ತೆಗೆದುಕೊಂಡು ತನ್ನ ಹೊಲದಲ್ಲಿಬಿತ್ತಿದನು. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. " (ಮತ್ತಾಯ 13:31-32 ULB) ಕಾಳುಗಳನ್ನು ಬಿತ್ತುವುದು ಎಂದರೆ ಅವು ನೆಲದ ಮೇಲೆ ವ್ಯರ್ಥವಾಗಿ ಚೆಲ್ಲಿಹೋಗದಂತೆ ಬಿತ್ತುವುದು." ಜನರಿಗೆ " ಬಿತ್ತುವುದು " ಎಂಬ ಪದ ಅರ್ಥವಾಗದಿದ್ದರೆ " ನೆಡುವುದು " ಎಂದು ಬಳಸಬಹುದು.
  • ನಂತರ ಯೇಸು ಇನ್ನೊಂದು ಸಾಮ್ಯ ಹೇಳಿದನು. ಅದೇನೆಂದರೆ, " ಪರಲೋಕ ರಾಜ್ಯವು ಸಾಸಿವೆಕಾಳಿಗೆ ಹೋಲಿಕೆ ಯಾಗಿದೆ " ಒಬ್ಬ ಮನುಷ್ಯಸಾಸಿವೆ ಕಾಳನ್ನು ತನ್ನ ಹೊಲದಲ್ಲಿ ಬಿತ್ತಿದನು ". ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.
  1. ಈ ಸಾಮ್ಯದಲ್ಲಿರುವ ಬೋಧನೆಗಳು ಅಸ್ಪಷ್ಟವಾಗಿದ್ದರೆ ಪೀಠಿಕೆಯಲ್ಲಿಈ ಸಾಮ್ಯದಲ್ಲಿ ಬರುವ ವಿಚಾರಗಳನ್ನು ವಿವರಿಸಿ ಜನರು ಉದಾರವಾಗಿರಬೇಕು ಎಂಬುದರ ಬಗ್ಗೆ ಹೇಳಿರುವ ಮಾತುಗಳನ್ನು ತಿಳಿಸಬೇಕು
  • **ಯೇಸು ಅವರನ್ನು ಕುರಿತು ,ನೀವು ದೀಪವನ್ನು ಮನೆಯೊಳಗೆ ತಂದು ಕೊಳಗದಲ್ಲಿ ಇಡುತ್ತೀರೋ, ಅಥವಾ ಮಂಚದ ಕೆಳಗೆ ಇಡುತ್ತೀರೋ ಎಂದು ಕೇಳಿದನು.

ನೀವು ಅದನ್ನು ತಂದು ದೀಪಸ್ಥಂಭದ ಮೇಲೆ ಇಡುತ್ತೀರಲ್ಲವೇ ?** (ಮಾರ್ಕ 4:21 ULB)

  • ಯೇಸು ಅವರಿಗೆ ಈ ಸಾಮ್ಯ ಏಕೆ ಹೇಳಿದನೆಂದರೆ ತಂದೆ ದೇವರಿಗೆ ಸಾಕ್ಷಿಯನ್ನು ಪ್ರಕಟವಾಗಿ ತಿಳಿಸಬೇಕು ಹೆದರಬಾರದು, ಹಿಂಜರಿಯಬಾರದು ಎಂದು ತಿಳಿಸಲು ಹೇಳಿದ್ದು ಆದುದರಿಂದಲೇ " ನೀವು ದೀಪವನ್ನು ಮನೆಯೊಳಗೆ ತಂದು ಕೊಳಗದೊಳಗೆ ಇಲ್ಲವೇ ಮಂಚದ ಕೆಳಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದಾನೆ. ನೀವು ಅದನ್ನು ತಂದು ಎತ್ತರವಾದ ದೀಪಸ್ಥಂಭದ ಮೇಲೆ ಇಡುವಿರಿ(ಮಾರ್ಕ 4:21 ULB)
  • ಆಗ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದ.ಆತ ಅವರನ್ನು ಕುರಿತು ದೇವರ ಪರಲೋಕ ರಾಜ್ಯವು ಸಾಸಿವೆಕಾಳಿನಂತೆ, ಒಬ್ಬ ಮನುಷ್ಯನು ಅವುಗಳನ್ನು ತೆಗೆದುಕೊಂಡು ತನ್ನ ಹೊಲದಲ್ಲಿ ಬಿತ್ತಿದನು. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. "." (ಮತ್ತಾಯ 13:31-32 ULB)
  • ಆಗ ಯೇಸು ಅವರಿಗೆ ಇನ್ನೊಂದು ಸಾಮ್ಯ ಹೇಳಿದ ಅದೇನೆಂದರೆ ದೇವರ ರಾಜ್ಯ ಹೇಗೆ ಬೆಳೆಯುತ್ತದೆ ಎಂಬುದನ್ನು ತಿಳಿಸಿದನು, . ಆತ ಹೇಳಿದ್ದು,. " ದೇವರ ಪರಲೋಕ ರಾಜ್ಯ ಒಬ್ಬ ಮನುಷ್ಯನು ಸಾಸಿವೆಕಾಳನ್ನು ತನ್ನ ಹೊಲದಲ್ಲಿ ಬಿತ್ತಿ ಬೆಳೆಸಿದಂತೆ. ಈ ಕಾಳು ಎಲ್ಲಾ ಕಾಳಿಗಿಂತ ಚಿಕ್ಕದಾಗಿದೆ. ಆದರೆ ಅದು ಬೆಳೆದ ಮೇಲೆ ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆಯುತ್ತದೆ.ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. "