kn_obs-tn/content/40/07.md

30 lines
1.9 KiB
Markdown

# ತೀರಿತು!
ಇದನ್ನು "ಮುಗಿಯಿತು" ಅಥವಾ "ನಾನು ಅದನ್ನು ಮುಗಿಸಿದ್ದೇನೆ" ಅಥವಾ "ನಾನು ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ" ಎಂದು ಅನುವಾದಿಸಬಹುದು. ಯೇಸುವಿನ ರಕ್ಷಣೆಯ ಕಾರ್ಯವು ಪೂರ್ಣಗೊಂಡಿದೆ ಎಂಬುದು ಇದರರ್ಥವಾಗಿದೆ.
# ನಿನ್ನ ಕೈಗಳಿಗೆ
ಅಂದರೆ, "ನಿನ್ನ ಪರಾಮರಿಕೆಗೆ."
# ತನ್ನ ತಲೆ ಬಾಗಿದನು
ಅಂದರೆ, "ತನ್ನ ತಲೆಯನ್ನು ತಗ್ಗಿಸಿದನು."
# ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು
ಅಂದರೆ, "ದೇವರಿಗೆ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು" ಅಥವಾ "ದೇವರಿಗೆ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟು ಸತ್ತನು."
# ಉದ್ದನೆಯ ಪರದೆ
ಇದು ದೇವಾಲಯದಲ್ಲಿ ತೂಗು ಹಾಕಲ್ಪಟ್ಟಿದ್ದ ಉದ್ದವು, ಗಟ್ಟಿಯು ಆದ ಬಟ್ಟೆಯಾಗಿತ್ತು. ಇದು ಒಂದು ಕೊಠಡಿಯನ್ನು ಇನ್ನೊಂದು ಕೊಠಡಿಯಿಂದ ಬೇರ್ಪಡಿಸುವ ಗೋಡೆಯಂತಿತ್ತು. ಇದನ್ನು "ದಪ್ಪನೆಯ ಪರದೆ" ಅಥವಾ "ತೂಗು ಹಾಕಿದ ಬಟ್ಟೆ" ಅಥವಾ "ತೆರೆ" ಎಂದು ಅನುವಾದಿಸಬಹುದು.
# ಅನುವಾದದ ಪದಗಳು
* [[rc://*/tw/dict/bible/kt/jesus]]
* [[rc://*/tw/dict/bible/kt/godthefather]]
* [[rc://*/tw/dict/bible/kt/spirit]]
* [[rc://*/tw/dict/bible/other/death]]
* [[rc://*/tw/dict/bible/kt/god]]
* [[rc://*/tw/dict/bible/kt/temple]]