kn_obs-tn/content/28/01.md

39 lines
2.9 KiB
Markdown

# ಒಂದಾನೊಂದು ದಿನ
ಈ ಪದಗುಚ್ಛವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.
# ಐಶ್ವರ್ಯವಂತನಾದ ಯುವ ಅಧಿಕಾರಿ
ಅವನು ಇನ್ನೂ ಯುವಕನಾಗಿದ್ದರೂ ಈ ವ್ಯಕ್ತಿ ಈಗಾಗಲೇ ಐಶ್ವರ್ಯವಂತನೂ ಮತ್ತು ಪ್ರಬಲ ರಾಜಕೀಯ ಅಧಿಕಾರಿಯು ಆಗಿದ್ದನು.
# ಯೇಸುವಿನ ಬಳಿಗೆ ಬಂದು
ಅಂದರೆ, "ಯೇಸುವನ್ನು ಸಮೀಪಿಸಿದನು."
# ಒಳ್ಳೇಯ ಬೋಧಕನು
ಅಂದರೆ, "ನೀತಿವಂತನಾದ ಬೋಧಕನು." ಯೇಸು ಕೇವಲ ನುರಿತ ಬೋಧಕನೆಂದು ಅವನು ಹೇಳುತ್ತಿಲ್ಲ.
# ನಿತ್ಯಜೀವವನ್ನು ಹೊಂದಲು
ಅಂದರೆ, "ನಿತ್ಯಜೀವವನ್ನು ಪಡೆಯಲು" ಅಥವಾ "ದೇವರೊಂದಿಗೆ ಶಾಶ್ವತವಾಗಿ ಜೀವಿಸಲು". [27:01](27/01) ರಲ್ಲಿ "ನಿತ್ಯಜೀವ" ವನ್ನು ಹೇಗೆ ಭಾಷಾಂತರಿಸಲಾಗಿದೆ ಎಂಬುದನ್ನು ಮತ್ತು ಇದರ ಬಗ್ಗೆಯಿರುವ ಟಿಪ್ಪಣಿಯನ್ನು ಸಹ ನೋಡಿರಿ.
# ನನ್ನನ್ನು 'ಒಳ್ಳೇಯವನು' ಎಂದು ಕರೆಯುವುದು ಏಕೆ
ಯೇಸು ತಾನು ದೇವರು ಎಂಬುದನ್ನು ನಿರಾಕರಿಸುತ್ತಿಲ್ಲ. ಬದಲಾಗಿ, ಯೇಸು ದೇವರು ಎಂಬುದನ್ನು ಅಧಿಕಾರಿಯು ಅರ್ಥಮಾಡಿಕೊಂಡನೋ ಇಲ್ಲವೋ ಎಂದು ಆತನು ಕೇಳುತ್ತಿದ್ದಾನೆ.
# ಒಬ್ಬನು ಮಾತ್ರವೇ ಒಳ್ಳೆಯವನು, ಆತನು ಯಾರೆಂದರೆ ದೇವರೇ
ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನಿಜವಾಗಿಯೂ ಒಳ್ಳೆಯವನು ಯಾರೆಂದರೆ ಅದು ದೇವರು ಮಾತ್ರವೇ" ಅಥವಾ "ದೇವರು ಮಾತ್ರವೇ ನಿಜವಾಗಿಯೂ ಒಳ್ಳೆಯವನು."
# ಅನುವಾದದ ಪದಗಳು
* [[rc://*/tw/dict/bible/kt/jesus]]
* [[rc://*/tw/dict/bible/kt/good]]
* [[rc://*/tw/dict/bible/other/teacher]]
* [[rc://*/tw/dict/bible/kt/eternity]]
* [[rc://*/tw/dict/bible/kt/god]]
* [[rc://*/tw/dict/bible/other/obey]]
* [[rc://*/tw/dict/bible/kt/lawofmoses]]