kn_obs-tn/content/28/01.md

2.9 KiB

ಒಂದಾನೊಂದು ದಿನ

ಈ ಪದಗುಚ್ಛವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.

ಐಶ್ವರ್ಯವಂತನಾದ ಯುವ ಅಧಿಕಾರಿ

ಅವನು ಇನ್ನೂ ಯುವಕನಾಗಿದ್ದರೂ ಈ ವ್ಯಕ್ತಿ ಈಗಾಗಲೇ ಐಶ್ವರ್ಯವಂತನೂ ಮತ್ತು ಪ್ರಬಲ ರಾಜಕೀಯ ಅಧಿಕಾರಿಯು ಆಗಿದ್ದನು.

ಯೇಸುವಿನ ಬಳಿಗೆ ಬಂದು

ಅಂದರೆ, "ಯೇಸುವನ್ನು ಸಮೀಪಿಸಿದನು."

ಒಳ್ಳೇಯ ಬೋಧಕನು

ಅಂದರೆ, "ನೀತಿವಂತನಾದ ಬೋಧಕನು." ಯೇಸು ಕೇವಲ ನುರಿತ ಬೋಧಕನೆಂದು ಅವನು ಹೇಳುತ್ತಿಲ್ಲ.

ನಿತ್ಯಜೀವವನ್ನು ಹೊಂದಲು

ಅಂದರೆ, "ನಿತ್ಯಜೀವವನ್ನು ಪಡೆಯಲು" ಅಥವಾ "ದೇವರೊಂದಿಗೆ ಶಾಶ್ವತವಾಗಿ ಜೀವಿಸಲು". 27:01 ರಲ್ಲಿ "ನಿತ್ಯಜೀವ" ವನ್ನು ಹೇಗೆ ಭಾಷಾಂತರಿಸಲಾಗಿದೆ ಎಂಬುದನ್ನು ಮತ್ತು ಇದರ ಬಗ್ಗೆಯಿರುವ ಟಿಪ್ಪಣಿಯನ್ನು ಸಹ ನೋಡಿರಿ.

ನನ್ನನ್ನು 'ಒಳ್ಳೇಯವನು' ಎಂದು ಕರೆಯುವುದು ಏಕೆ

ಯೇಸು ತಾನು ದೇವರು ಎಂಬುದನ್ನು ನಿರಾಕರಿಸುತ್ತಿಲ್ಲ. ಬದಲಾಗಿ, ಯೇಸು ದೇವರು ಎಂಬುದನ್ನು ಅಧಿಕಾರಿಯು ಅರ್ಥಮಾಡಿಕೊಂಡನೋ ಇಲ್ಲವೋ ಎಂದು ಆತನು ಕೇಳುತ್ತಿದ್ದಾನೆ.

ಒಬ್ಬನು ಮಾತ್ರವೇ ಒಳ್ಳೆಯವನು, ಆತನು ಯಾರೆಂದರೆ ದೇವರೇ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನಿಜವಾಗಿಯೂ ಒಳ್ಳೆಯವನು ಯಾರೆಂದರೆ ಅದು ದೇವರು ಮಾತ್ರವೇ" ಅಥವಾ "ದೇವರು ಮಾತ್ರವೇ ನಿಜವಾಗಿಯೂ ಒಳ್ಳೆಯವನು."

ಅನುವಾದದ ಪದಗಳು