kn_tw/bible/other/well.md

35 lines
5.7 KiB
Markdown

# ತೊಟ್ಟಿ, ತೊಟ್ಟಿಗಳು, ಬಾವಿ, ಬಾವಿಗಳು
## ಪದದ ಅರ್ಥವಿವರಣೆ:
“ಬಾವಿ” ಮತ್ತು “ತೊಟ್ಟಿ” ಎನ್ನುವ ಪದಗಳು ಸತ್ಯವೇದ ಕಾಲದಲ್ಲಿ ನೀರಿಗೋಸ್ಕರ ಉಪಯೋಗಿಸಿರುವ ಎರಡು ವಿಧವಾದ ಆಧಾರಗಳನ್ನು ಸೂಚಿಸುತ್ತವೆ.
* ಬಾವಿ ಎಂದರೆ ನೆಲವನ್ನು ತುಂಬಾ ಆಳವಾಗಿ ಅಗೆದು ಮಾಡುವ ಒಂದು ಗುಂಡಿಯಾಗಿರುತ್ತದೆ, ಈ ರೀತಿ ಮಾಡುವುದರ ಮೂಲಕ ಅದರೊಳಗಿಂದ ನೀರು ಹರಡಿಬರುತ್ತವೆ.
* ತೊಟ್ಟಿ ಎನ್ನುವುದು ಬಂಡೆಯ ಮೇಲೆ ಅಗೆದು ಮಾಡಿದ ಆಳವಾದ ಗುಂಡಿ, ಇದನ್ನು ಮಳೆ ಬಂದಾಗ ನೀರನ್ನು ಸಂಗ್ರಹಿಸುವುದಕ್ಕೆ ಅಥವಾ ಕೊಳವಾಗಿ ಉಪಯೋಗಿಸುತ್ತಿದ್ದರು.
* ತೊಟ್ಟಿಗಳು ಸಾಧಾರಣವಾಗಿ ಬಂಡೆಯ ಮೇಲೆ ಅಗೆದು ತಯಾರಿಸುತ್ತಾರೆ, ಮತ್ತು ಅದರಲ್ಲಿ ನೀರು ಉಳಿದಿರುವಂತೆ ಮಾಡಲು ಅದರ ಮೇಲೆ ಪ್ಲಾಸ್ಟರ್ ಹಾಕಿರುತ್ತಾರೆ. ಪ್ಲಾಸ್ಟರ್ ಸೀಳಿ ಹೋದಾಗ “ಮುರಿಯಲ್ಪಟ್ಟ ತೊಟ್ಟಿಯಾಗಿ” ಮಾರ್ಪಡುತ್ತದೆ, ಈಗ ಈ ತೊಟ್ಟಿಯಲ್ಲಿರುವ ನೀರೆಲ್ಲವೂ ಸೋರುತ್ತವೆ.
* ತೊಟ್ಟಿಗಳು ಅನೇಕಬಾರಿ ಜನರ ಮನೆಗಳ ಮೇಲ್ಚಾವಣಿಯ ಮೇಲಿ ಮಳೆ ನೀರು ಬಿದ್ದಾಗ, ಅವುಗಳನ್ನು ಸಂಗ್ರಹಿಸಿ ಇಡುವುದಕ್ಕೆ ಅವರ ಮನೆಗಳ ಪ್ರಾಂಗಣದಲ್ಲಿ ಕಂಡುಬರುತ್ತಿರುತ್ತವೆ.
* ಬಾವಿಗಳು ಅನೇಕಬಾರಿ ಕುಟುಂಬಗಳು ಅಥವಾ ಸಮುದಾಯವೆಲ್ಲಾ ಬಂದು ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಸುಲಭವಾಗುವ ಸ್ಥಳದಲ್ಲಿ ಕಂಡುಬರುತ್ತವೆ.
* ಜನರಿಗೂ ಮತ್ತು ಪಶು ಪ್ರಾಣಿಗಳಿಗೂ ನೀರು ತುಂಬಾ ಪ್ರಾಮುಖ್ಯವಾದದ್ದರಿಂದ, ಬಾವಿಯನ್ನು ಉಪಯೋಗಿಸುವ ಹಕ್ಕು ಅನೇಕಬಾರಿ ಸಂಘರ್ಷಗಳಿಗೆ ಮತ್ತು ಜಗಳಗಳಿಗೆ ಕಾರಣವಾಗುತ್ತಿತ್ತು.
* ಬಾವಿಗಳು ಮತ್ತು ತೊಟ್ಟಿಗಳಲ್ಲಿ ಯಾವುದೂ ಬೀಳದಂತೆ ಅವುಗಳ ಮೇಲೆ ಒಂದು ದೊಡ್ಡ ಬಂಡೆಯನ್ನು ಹಾಕಿ ಮುಚ್ಚುತ್ತಿದ್ದರು. ಅನೇಕಬಾರಿ ಬಾದಲಿಗೆ ಅಥವಾ ಕೊಡಕ್ಕೆ ಹಗ್ಗವನ್ನು ಕಟ್ಟಿ, ಕೆಳ ಭಾಗದಿಂದ ನೀರನ್ನು ಮೇಲಕ್ಕೆ ತರುತ್ತಿದ್ದರು.
* ಕೆಲವೊಂದುಬಾರಿ ಒಣ ತೊಟ್ಟಿಯನ್ನು ಯಾರಾದರೊಬ್ಬರನ್ನು ಬಂಧಿಸುವುದಕ್ಕೆ ಉಪಯೋಗಿಸುತ್ತಿದ್ದರು, ಹೀಗೆ ಯೋಸೇಫ ಮತ್ತು ಯೆರೆಮಿಯಾರವರಿಗೆ ನಡೆದಿದೆ.
## ಅನುವಾದ ಸಲಹೆಗಳು:
* “ಬಾವಿ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ನೀರಿರುವ ಆಳವಾದ ಗುಂಡಿ” ಅಥವಾ “ನೀರಿನ ಬುಗ್ಗೆಗಾಗಿ ಅಗೆದಿರುವ ಆಳವಾದ ಗುಂಡಿ” ಅಥವಾ “ನೀರನ್ನು ತೆಗೆಯುವುದಕ್ಕಿರುವ ಆಳವಾದ ಗುಂಡಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ತೊಟ್ಟಿ” ಎನ್ನುವ ಪದವನ್ನು “ಕಲ್ಲಿನ ನೀರಿನ ಹೊಂಡ” ಅಥವಾ “ನೀರಿಗಾಗಿ ಮಾಡಿರುವ ಆಳವಾದ ಮತ್ತು ಕಿರಿದಾದ ಕುಳಿ” ಅಥವಾ “ನೀರನ್ನು ಸಂಗ್ರಹಿಸುವುದಕ್ಕೆ ಒಳಚರಂಡಿ” ಎಂದೂ ಅನುವಾದ ಮಾಡಬಹುದು.
* ಈ ಎಲ್ಲಾ ಮಾತುಗಳು ಒಂದೇ ರೀತಿಯ ಅರ್ಥವನ್ನು ಕೊಡುತ್ತವೆ. ಈ ಪದಗಳ ಮಧ್ಯೆದಲ್ಲಿರುವ ಮುಖ್ಯ ವ್ಯತ್ಯಾಸವೇನೆಂದರೆ ಬಾವಿಯಿಂದ ನಿರಂತರವಾಗಿ ನೀರನ್ನು ಪಡೆದುಕೊಳ್ಳಬಹುದು, ಆದರೆ ತೊಟ್ಟಿಗಳಿಂದ ಮಳೆ ನೀರನ್ನು ಮಾತ್ರವೇ ಪಡೆದುಕೊಳ್ಳುವುದಕ್ಕೆ ಅವಕಾಶ.
(ಈ ಪದಗಳನ್ನು ಸಹ ನೋಡಿರಿ : [ಯೆರೆಮಿಯಾ](../names/jeremiah.md), [ಸೆರೆ](../other/prison.md), [ಕಲಹ](../other/strife.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.11:15-17](rc://*/tn/help/1ch/11/15)
* [2 ಸಮು.17:17-18](rc://*/tn/help/2sa/17/17)
* [ಆದಿ.16:13-14](rc://*/tn/help/gen/16/13)
* [ಲೂಕ.14:4-6](rc://*/tn/help/luk/14/04)
* [ಅರಣ್ಯ.20:17](rc://*/tn/help/num/20/17)
## ಪದ ಡೇಟಾ:
* Strong's: H875, H883, H953, H1360, H3653, H4599, H4726, H4841, G4077, G5421