kn_tw/bible/other/water.md

35 lines
6.2 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ನೀರು, ಆಳವಾದ
## ಪದದ ಅರ್ಥವಿವರಣೆ:
ಇದರ ಪ್ರಾಥಮಿಕ ಅರ್ಥದಲ್ಲಿ “ನೀರು” ಎನ್ನವುದು ಸಾಗರ, ಸಮುದ್ರ, ಕೆರೆ ಅಥವಾ ನದಿ ಎನ್ನುವಂತಹ ನೀರಿರುವ ಭಾಗವನ್ನು ಕೂಡ ಅನೇಕಬಾರಿ ಸೂಚಿಸುತ್ತದೆ.
* “ನೀರುಣಿಸುವುದು” ಎನ್ನುವ ಪದವು ನೀರು ಬರುವುದಕ್ಕೆ ಅನೇಕ ಆಧಾರಗಳನ್ನು ಅಥವಾ ನೀರಿನ ಭಾಗಗಳನ್ನು ಸೂಚಿಸುತ್ತದೆ. ಇದು ಬಹು ಹೆಚ್ಚಾದ ನೀರಿರುವುದನ್ನು ಸೂಚಿಸುವ ಸಾಧಾರಣ ಪದವಾಗಿರುತ್ತದೆ.
* “ನೀರುಣಿಸುವುದು” ಎನ್ನುವ ಅಲಂಕಾರಿಕ ಉಪಯೋಗವು ಮಹಾ ಯಾತನೆಯನ್ನು, ಸಂಕಷ್ಟಗಳನ್ನು ಮತ್ತು ಹಿಂಸೆಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ನಾವು “ಜಲಗಳ ಮೂಲಕ ಹಾದು ಹೋಗುತ್ತಿರುವಾಗ”, ಆತನು ನಮ್ಮೊಂದಿಗೆ ಇರುತ್ತಾನೆಂದು ದೇವರು ವಾಗ್ಧಾನ ಮಾಡಿದ್ದನು.
* “ಅನೇಕವಾದ ಜಲಗಳು” ಎನ್ನುವ ಮಾತು ಸಂಕಷ್ಟಗಳನ್ನು ಎಷ್ಟು ಬಹುಭಯಂಕರವಾಗಿವೆ ಎನ್ನುವುದನ್ನು ಒತ್ತಿ ಹೇಳುತ್ತದೆ.
* ಪಶುಪ್ರಾಣಿಗಳಿಗೆ ಮತ್ತು ಇತರ ಪ್ರಾಣಿಗಳಿಗೆ “ನೀರು” ಹಾಕುವುದು ಎಂದರೆ ಅವುಗಳಿಗೆ “ನೀರನ್ನು ಒದಗಿಸಿ ಕೊಡುವುದು” ಎಂದರ್ಥ. ಸತ್ಯವೇದ ಕಾಲಗಳಲ್ಲಿ ಇದು ಬಾದಲಿಯನ್ನು ತೆಗೆದುಕೊಂಡು ಬಾವಿಯೊಳಗೆ ಹಾಕಿ ನೀರನ್ನು ಎಳೆದು, ಬೇರೊಂದು ಪಾತ್ರೆಗಳಿಂದ ಪ್ರಾಣಿಗಳು ನೀರು ಕುಡಿಯುವುದಕ್ಕೆ ತೊಟ್ಟಿಯೊಳಗೆ ಹಾಕುವುದನ್ನು ಒಳಗೊಂಡಿರುತ್ತದೆ.
* ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರಿಗಾಗಿ “ಜೀವಜಲ” ಹುಟ್ಟುವ ಕಾರಂಜಿಯಾಗಿ ಸೂಚಿಸಲ್ಪಟ್ಟಿದ್ದಾನೆ. ಇದಕ್ಕೆ ಅರ್ಥವೇನೆಂದರೆ ಆತನು ಆತ್ಮೀಯ ಶಕ್ತಿಗೆ ಮತ್ತು ಆನಂದಕ್ಕೂ ಆಧಾರವಾಗಿದ್ದಾನೆ.
* ಹೊಸ ಒಡಂಬಡಿಕೆಯಲ್ಲಿ ಯೇಸು “ಜೀವಜಲ” ಎನ್ನುವ ಮಾತನ್ನು ಉಪಯೋಗಿಸಿದ್ದಾರೆ, ಈ ಮಾತು ಒಬ್ಬ ವ್ಯಕ್ತಿಯಲ್ಲಿ ಹೊಸ ಜೀವವನ್ನು ತರುವುದಕ್ಕೆ ಮತ್ತು ರೂಪಾಂತರಗೊಳಿಸುವುದಕ್ಕೆ ಪವಿತ್ರಾತ್ಮನನ್ನು ಸೂಚಿಸುತ್ತಿದ್ದಾನೆ.
## ಅನುವಾದ ಸಲಹೆಗಳು:
* “ನೀರನ್ನು ಎಳೆ” ಎನ್ನುವ ಮಾತನ್ನು “ಬಾದಲಿಯನ್ನು ತೆಗೆದುಕೊಂಡು ಬಾವಿಯೊಳಗಿಂದ ನೀರನ್ನು ಮೇಲಕ್ಕೆ ತರುವುದು” ಎಂದೂ ಅನುವಾದ ಮಾಡಬಹುದು.
* “ಜೀವಜಲದ ಹರಿಗಳು ಅವರಿಂದ ಹರಡುತ್ತವೆ” ಎನ್ನುವ ಮಾತನ್ನು “ಪರಿಶುದ್ಧಾತ್ಮನಿಂದ ಉಂಟಾಗುವ ಶಕ್ತಿ ಮತ್ತು ಆಶೀರ್ವಾದಗಳು ನೀರಿನ ಹರಿಗಳ ಹಾಗೆಯೇ ಅವರೊಳಗಿಂದ ಹರಡಿಬರುವವು” ಎಂದೂ ಅನುವಾದ ಮಾಡಬಹುದು. “ಆಶೀರ್ವಾದಗಳಿಗೆ” ಬದಲಾಗಿ “ವರಗಳು” ಅಥವಾ “ಫಲಗಳು” ಅಥವಾ “ದೈವಿಕ ಗುಣಲಕ್ಷಣಗಳು” ಎನ್ನುವ ಮಾತುಗಳನ್ನು ಉಪಯೋಗಿಸಬಹುದು.
* ಯೇಸು ಬಾವಿಯ ಬಳಿ ಸಮಾರ್ಯ ಸ್ತ್ರೀಯೊಂದಿಗೆ ಮಾತನಾಡುತ್ತಿರುವಾಗ ಉಪಯೋಗಿಸಿದ “ಜೀವಜಲ” ಎನ್ನುವ ಪದವನ್ನು “ಜೀವವನ್ನು ಕೊಡುವ ನೀರು” ಅಥವಾ “ಜೀವವನ್ನು ಅನುಗ್ರಹಿಸುವ ನೀರು” ಎಂದೂ ಅನುವಾದ ಮಾಡಬಹುದು. ಈ ಸಂದರ್ಭದಲ್ಲಿ ನೀರಿನ ಚಿತ್ರಣವನ್ನು ಅನುವಾದದಲ್ಲಿ ಇಡಲೇಬೇಕಾಗಿರುತ್ತದೆ.
* ಸಂದರ್ಭಾನುಸಾರವಾಗಿ, “ನೀರುಣಿಸುವುದು” ಅಥವಾ “ಅನೇಕ ಜಲಗಳು” ಎನ್ನುವ ಮಾತುಗಳನ್ನು “ಮಹಾ ಶ್ರಮೆ (ನೀರಿನಂತೆ ನಿನ್ನನ್ನು ಸುತ್ತಿರುವ ಪರಿಸ್ಥಿತಿಗಳು)” ಅಥವಾ “ಹರಿದುಬರುತ್ತಿರುವ ಸಂಕಷ್ಟಗಳು (ನೀರಿನ ಪ್ರಳಯದಂತೆ) ಅಥವಾ “ಹೆಚ್ಚಾಗಿ ನೀರಿರುವ ಭಾಗಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಜೀವನ](../kt/life.md), [ಆತ್ಮ](../kt/spirit.md), [ಪವಿತ್ರಾತ್ಮ](../kt/holyspirit.md), [ಶಕ್ತಿ](../kt/power.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಅಪೊ.ಕೃತ್ಯ.08:36-38](rc://*/tn/help/act/08/36)
* [ವಿಮೋ.14:21](rc://*/tn/help/exo/14/21)
* [ಯೋಹಾನ.04:10](rc://*/tn/help/jhn/04/10)
* [ಯೋಹಾನ.04:14](rc://*/tn/help/jhn/04/14)
* [ಯೋಹಾನ.04:15](rc://*/tn/help/jhn/04/15)
* [ಮತ್ತಾಯ.14:28-30](rc://*/tn/help/mat/14/28)
## ಪದ ಡೇಟಾ:
* Strongs: H2222, H4325, H4529, H4857, H7301, H7783, H8248, H8415, G504, G4215, G4222, G5202, G5204