kn_tw/bible/other/watchtower.md

25 lines
3.1 KiB
Markdown

# ಕಾವಲು ಗೋಪುರ, ಕಾವಲು ಗೋಪುರಗಳು, ಗೋಪುರ
## ಪದದ ಅರ್ಥವಿವರಣೆ:
“ಕಾವಲು ಗೋಪುರ” ಎನ್ನುವ ಈ ಮಾತು ಅಪಾಯವು ಸಂಭವಿಸುತ್ತದೆಯೆಂದು ಕಾವಲುಗಾರರು ನೋಡುವುದಕ್ಕೆ ಕಟ್ಟಿಕೊಂಡಿರುವ ಒಂದು ದೊಡ್ಡ ಎತ್ತರವಾದ ನಿರ್ಮಾಣವನ್ನು ಸೂಚಿಸುತ್ತದೆ. ಈ ಗೋಪುರಗಳು ಅನೇಕಬಾರಿ ಕಲ್ಲುಗಳಿಂದ ನಿರ್ಮಿಸಲ್ಪಡುತ್ತವೆ.
* ಭೂಮಾಲೀಕರು ಕೆಲವೊಂದುಸಲ ತಮ್ಮ ಹೊಲಗಳನ್ನು ಕಾಯುವುದಕ್ಕೆ ಮತ್ತು ತಮ್ಮ ಹೊಲಗಳಲ್ಲಿ ಬೆಳೆಯುವ ಬೆಳೆಗಳನ್ನು ಯಾರೂ ಕದಿಯದಂತೆ ಕಾಪಾಡಿಕೊಳ್ಳುವುದಕ್ಕೆ ಕಾವಲು ಗೋಪುರಗಳನ್ನು ನಿರ್ಮಿಸಿಕೊಳ್ಳುತ್ತಾರೆ.
* ಗೋಪುರಗಳಲ್ಲಿ ಅನೇಕಬಾರಿ ಕೊಠಡಿಗಳನ್ನು ನಿರ್ಮಿಸುತ್ತಾರೆ, ಯಾಕಂದರೆ ಕಾವಲುಗಾರರು ಅಥವಾ ಕುಟುಂಬದವರು ಆ ಕೊಠಡಿಗಳಲ್ಲಿ ನಿವಾಸ ಮಾಡುತ್ತಿದ್ದರು, ಇದರಿಂದ ಅವರು ರಾತ್ರಿ ಹಗಲು ಬೆಳೆಗಳಿಗೆ ಕಾವಲು ಇರುತ್ತಿದ್ದರು.
* ಪಟ್ಟಣಗಳಿಗಾಗಿ ನಿರ್ಮಿಸಿರುವ ಕಾವಲು ಗೋಪುರಗಳನ್ನು ಪಟ್ಟಣದ ಗೋಡೆಗಳಿಗಿಂತ ಇನ್ನೂ ಎತ್ತರವಾಗಿ ನಿರ್ಮಿಸಿರುತ್ತಾರೆ, ಇದರಿಂದ ಕಾವಲುಗಾರರು ಪಟ್ಟಣವನ್ನು ಧಾಳಿ ಮಾಡುವುದಕ್ಕೆ ಬರುತ್ತಿರುವ ಶತ್ರುಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.
* “ಕಾವಲು ಗೋಪುರ” ಎನ್ನುವ ಮಾತನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಚಿಹ್ನೆಯಾಗಿಯೂ ಉಪಯೋಗಿಸಲ್ಪಟ್ಟಿರುತ್ತದೆ. (ನೋಡಿರಿ: [ರೂಪಕಾಲಂಕಾರ](rc://*/ta/man/translate/figs-metaphor))
(ಈ ಪದಗಳನ್ನು ಸಹ ನೋಡಿರಿ : [ವಿರೋಧಿ](../other/adversary.md), [ವೀಕ್ಷಿಸು](../other/watch.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.27:25-27](rc://*/tn/help/1ch/27/25)
* [ಯೆಹೆ.26:3-4](rc://*/tn/help/ezk/26/03)
* [ಮಾರ್ಕ.12:1-3](rc://*/tn/help/mrk/12/01)
* [ಮತ್ತಾಯ.21:33-34](rc://*/tn/help/mat/21/33)
* [ಕೀರ್ತನೆ.062:1-2](rc://*/tn/help/psa/062/001)
## ಪದ ಡೇಟಾ:
* Strong's: H803, H969, H971, H975, H1785, H2918, H4024, H4026, H4029, H4692, H4707, H4869, H6076, H6438, H6836, H6844, G4444