kn_tw/bible/other/warrior.md

26 lines
3.3 KiB
Markdown

# ಸೈನಿಕ, ಸೈನಿಕರು, ಯೋಧ, ಯೋಧರು
## ಸತ್ಯಾಂಶಗಳು:
“ಯೋಧ” ಮತ್ತು “ಸೈನಿಕ” ಎನ್ನುವ ಪದಗಳೆರಡು ಸೈನ್ಯದಲ್ಲಿ ಹೋರಾಟ ಮಾಡುವ ವ್ಯಕ್ತಿಯನ್ನು ಸೂಚಿಸುತ್ತವೆ. ಆದರೆ ಈ ಎರಡು ಪದಗಳ ನಡುವೆ ಕೆಲವೊಂದು ವ್ಯತ್ಯಾಸಗಳಿವೆ.
* ಸಾಧಾರಣವಾಗಿ “ಯೋಧ” ಎನ್ನುವುದು ಸಾರ್ವತ್ರಿಕ, ವಿಶಾಲವಾದ ಪದವು ಯುದ್ಧದಲ್ಲಿ ಧೈರ್ಯಶಾಲಿಯಾದ ಮತ್ತು ವರವನ್ನು ಪಡೆದ ಒಬ್ಬ ಮನುಷ್ಯನನ್ನು ಸೂಚಿಸುತ್ತದೆ.
* ಯೆಹೋವನನ್ನು ಅಲಂಕಾರಿಕವಾಗಿ “ಯೋಧ” ಎಂದು ಕರೆಯಲಾಗಿರುತ್ತದೆ.
* “ಸೈನಿಕ” ಎನ್ನುವ ಪದವು ಹೆಚ್ಚಾಗಿ ವಿಶೇಷವಾಗಿ ಒಂದು ನಿರ್ದಿಷ್ಟವಾದ ಸೈನ್ಯಕ್ಕೆ ಸಂಬಂಧಪಟ್ಟ ವ್ಯಕ್ತಿಯನ್ನು ಅಥವಾ ನಿರ್ದಿಷ್ಟವಾದ ಯುದ್ಧದಲ್ಲಿ ಹೋರಾಟ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
* ಯೆರೂಸಲೇಮಿನಲ್ಲಿರುವ ರೋಮಾ ಸೈನಿಕರು ಖೈದಿಗಳನ್ನು ಸಾಯಿಸುವಂತಹ ಕರ್ತವ್ಯಗಳನ್ನು ಮಾಡುವುದಕ್ಕೂ ಮತ್ತು ಆದೇಶಗಳನ್ನು ಕೈಗೊಳ್ಳುವುದಕ್ಕೂ ಇರುತ್ತಾರೆ. ಅವರು ಯೇಸುವನ್ನು ಶಿಲುಬೆಗೆ ಏರಿಸುವುದಕ್ಕೆ ಮುಂಚಿತವಾಗಿ ಆತನಿಗೆ ಕಾವಲು ಇದ್ದರು, ಮತ್ತು ಆತನ ಸಮಾಧಿಯ ಬಳಿ ನಿಲ್ಲುವುದಕ್ಕೆ ಇನ್ನೂ ಕೆಲವರು ಆದೇಶಗಳನ್ನು ಹೊಂದಿಕೊಂಡಿದ್ದರು.
* ಅನುವಾದ ಮಾಡುವ ಭಾಷೆಯಲ್ಲಿ “ಯೋಧ” ಮತ್ತು “ಸೈನಿಕ” ಎನ್ನುವ ಎರಡು ಪದಗಳು ಒಂದೇಯಾಗಿದ್ದಾವೋ ಇಲ್ಲವೋ ಅಥವಾ ಅವುಗಳು ಅರ್ಥದಲ್ಲಿ ಬೇರೆ ಬೇರೆಯಾಗಿದ್ದಾವೋ ಇಲ್ಲವೋ ಎಂದು ನೋಡಬೇಕಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಧೈರ್ಯ](../other/courage.md), [ಶಿಲುಬೆಗೆ ಹಾಕು](../kt/crucify.md), [ರೋಮ್](../names/rome.md), [ಸಮಾಧಿ](../other/tomb.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.21:4-5](rc://*/tn/help/1ch/21/04)
* [ಅಪೊ.ಕೃತ್ಯ.21:32-33](rc://*/tn/help/act/21/32)
* [ಲೂಕ.03:14](rc://*/tn/help/luk/03/14)
* [ಲೂಕ.23:11-12](rc://*/tn/help/luk/23/11)
* [ಮತ್ತಾಯ.08:8-10](rc://*/tn/help/mat/08/08)
## ಪದ ಡೇಟಾ:
* Strong's: , H352, H510, H1368, H1416, H1995, H2389, H2428, H2502, H3715, H4421, H5431, H5971, H6518, H6635, H7273, H7916, G4686, G4753, G4754, G4757, G4758, G4961