kn_tw/bible/other/veil.md

30 lines
3.8 KiB
Markdown

# ಮುಸುಕು, ಮುಸುಕು ಹಾಕಲಾಗಿದೆ, ಮುಸುಕು ತೆರೆಯುವುದು
## ಪದದ ಅರ್ಥವಿವರಣೆ:
“ಮುಸುಕು” ಎನ್ನುವ ಪದವು ಸಾಧಾರಣವಾಗಿ ತಲೆಯ ಮೇಲೆ ಹಾಕಿಕೊಳ್ಳುವುದಕ್ಕೆ, ಮುಖವನ್ನು ಅಥವಾ ತಲೆಯನ್ನು ಕಾಣಿಸಿದಂತೆ ಮುಚ್ಚುಕೊಳ್ಳುವುದಕ್ಕೆ ಉಪಯೋಗಿಸುವ ತೆಳುವಾದ ಬಟ್ಟೆಯನ್ನು ಸೂಚಿಸುತ್ತದೆ.
* ಮೋಶೆಯು ಯೆಹೋವನ ಸನ್ನಿಧಿಯಲ್ಲಿದ್ದು ಬಂದ ನಂತರ ಆತನು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದನು, ಇದರಿಂದ ತನ್ನ ಮುಖದ ಮೇಲಿರುವ ಪ್ರಕಾಶಮಾನವನ್ನು ಜನರು ನೋಡದಂತೆ ಮುಚ್ಚಿಕೊಂಡಿದ್ದನು.
* ಸತ್ಯವೇದದಲ್ಲಿ ಸ್ತ್ರೀಯರು ತಮ್ಮ ತಲೆಗಳ ಮೇಲೆ ಮುಸುಕುಗಳನ್ನು ಹಾಕಿಕೊಂಡಿರುತ್ತಿದ್ದರು, ಮತ್ತು ಅವರು ಸಾರ್ವಜನಿಕ ಸ್ಥಳದಲ್ಲಿ ಬರುವಾಗ ಅಥವಾ ಪುರುಷರಿರುವ ಸ್ಥಳಕ್ಕೆ ಬಂದಾಗ ತಮ್ಮ ಮುಖಕ್ಕೆ ಮುಸುಕನ್ನು ಹಾಕಿಕೊಂಡಿರುತ್ತಿದ್ದರು.
* “ಮುಸುಕು” ಎನ್ನುವ ಪದಕ್ಕೆ ಕ್ರಿಯಾಪದವು ಏನೆಂದರೆ ಮುಸುಕಿನಿಂದ ಯಾವುದಾದರೊಂದನ್ನು ಹೊದಿಸುವುದು ಎಂದರ್ಥ.
* ಕೆಲವೊಂದು ಆಂಗ್ಲ ಅನುವಾದಗಳಲ್ಲಿ, “ಮುಸುಕು” ಎನ್ನುವ ಪದವನ್ನು ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಪ್ರವೇಶದ್ವಾರಕ್ಕಿದ್ದ ದಪ್ಪವಾದ ತೆರೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಆದರೆ “ತೆರೆ” ಎನ್ನುವುದು ಈ ಸಂದರ್ಭದಲ್ಲಿ ಉತ್ತಮ ಪದವಾಗಿರುತ್ತದೆ, ಯಾಕಂದರೆ ಇದು ತುಂಬಾ ದಪ್ಪವಾಗಿರುವ ಬಟ್ಟೆಯಾಗಿರುತ್ತದೆ.
## ಅನುವಾದ ಸಲಹೆಗಳು:
* “ಮುಸುಕು” ಎನ್ನುವ ಪದವನ್ನು “ತೆಳುವಾದ ಬಟ್ಟೆಯ ಮುಸುಕು” ಅಥವಾ “ಬಟ್ಟೆಯಿಂದ ಹೊದಿಸುವುದು” ಅಥವಾ “ತಲೆಯನ್ನು ಮುಚ್ಚಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಸಂಸ್ಕೃತಿಗಳಲ್ಲಿ ಸ್ತ್ರೀಯರಿಗೆ ಹಾಕುವ ಮುಸುಕುಗೆ ಒಂದು ವಿಭಿನ್ನವಾದ ಪದವನ್ನು ಹೊಂದಿರಬಹುದು. ಈ ಪದವನ್ನು ಮೋಶೆಗೆ ಉಪಯೋಗಿಸುವಾಗ ಒಂದು ವಿಭಿನ್ನವಾದ ಪದವನ್ನು ಕಂಡುಕೊಂಡುಕೊಳ್ಳುವುದು ಅತ್ಯಗತ್ಯವಾಗಿರಬಹುದು.
(ಈ ಪದಗಳನ್ನು ಸಹ ನೋಡಿರಿ : [ಮೋಶೆ](../names/moses.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಕೊರಿಂಥ. 03:12-13](rc://*/tn/help/2co/03/12)
* [2 ಕೊರಿಂಥ. 03:14-16](rc://*/tn/help/2co/03/14)
* [ಯೆಹೆ. 13:17-18](rc://*/tn/help/ezk/13/17)
* [ಯೆಶಾಯ. 47:1-2](rc://*/tn/help/isa/47/01)
* [ಪರಮ. 04:3](rc://*/tn/help/sng/04/03)
## ಪದದ ದತ್ತಾಂಶ:
* Strong's: H7289, G2665