kn_tw/bible/other/thief.md

25 lines
4.6 KiB
Markdown

# ಕಳ್ಳ, ಕಳ್ಳರು, ಕದಿ, ಕದಿಯುವುದು, ಕದ್ದಿದೆ, ದರೋಡೆಕಾರ, ದರೋಡೆಕಾರರು, ಕಳ್ಳತನ, ಕಳ್ಳತನ ಮಾಡುವುದು
## ಸತ್ಯಾಂಶಗಳು:
“ಕಳ್ಳ” ಎನ್ನುವ ಪದವು ಇತರ ಜನರಿಂದ ಅಸ್ತಿಯನ್ನು ಅಥವಾ ಹಣವನ್ನು ಕದಿಯುವ ವ್ಯಕ್ತಿಯನ್ನು ಸೂಚಿಸುತ್ತದೆ. “ಕಳ್ಳ” ಎನ್ನುವ ಪದಕ್ಕೆ “ಕಳ್ಳರು” ಎನ್ನುವ ಪದವು ಬಹುವಚನವಾಗಿರುತ್ತದೆ. “ದರೋಡೆಕಾರ” ಎನ್ನುವ ಪದವು ಅನೇಕಬಾರಿ ಒಬ್ಬ ವ್ಯಕ್ತಿ ಕದಿಯುವ ಜನರನ್ನು ಬೆದರಿಸುವ ವ್ಯಕ್ತಿಯನ್ನು ಅಥವಾ ಭೌತಿಕವಾಗಿ ಹಾನಿಯನ್ನುಂಟು ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
* ದರೋಡೆಕಾರರಿಂದ ಧಾಳಿಗೆ ಗುರಿಯಾಗಿರುವ ಯೆಹೂದ್ಯ ಮನುಷ್ಯನ ಮೇಲೆ ಪ್ರೀತಿ ತೋರಿಸಿರುವ ಸಮಾರ್ಯ ಮನುಷ್ಯನ ಕುರಿತಾಗಿ ಯೇಸು ಒಂದು ಸಾಮ್ಯವನ್ನು ಹೇಳಿದನು. ದರೋಡೆಕಾರರು ಯೆಹೂದ್ಯ ಮನುಷ್ಯನನ್ನು ಹೊಡೆದು, ತನ್ನ ಬಳಿ ಇರುವ ಹಣವನ್ನು ಮತ್ತು ಬಟ್ಟೆಗಳನ್ನು ಕದಿಯುವುದಕ್ಕೆ ಮುಂಚಿತವಾಗಿ ಅವನನ್ನು ಹೊಡೆದು, ಗಾಯಪಡಿಸಿ ಹೋಗಿದ್ದರು.
* ಕಳ್ಳಲು ಮತ್ತು ದರೋಡೆಕಾರರು ಕದಿಯುವುದಕ್ಕೆ ಜನರಿಗೆ ಗೊತ್ತಿಲ್ಲದಂತೆ ಆಕಸ್ಮಿಕವಾಗಿ ಬರುತ್ತಾರೆ, ಅನೇಕಬಾರಿ ಅವರು ಮಾಡುವ ಕ್ರಿಯೆಗಳನ್ನು ಮರೆಯಾಗಿಡುವುದಕ್ಕೆ ಕತ್ತಲೆಯಲ್ಲಿಯೇ ಮಾಡುತ್ತಾರೆ.
* ಅಲಂಕಾರಿಕ ಭಾವನೆಯಲ್ಲಿ ಹೊಸ ಒಡಂಬಡಿಕೆಯಲ್ಲಿ ಸೈತಾನನನ್ನು ಕದಿಯಲು, ಕೊಲ್ಲಲು ಮತ್ತು ನಾಶನ ಮಾಡುವ ಕಳ್ಳನಾಗಿ ವಿವರಿಸುತ್ತದೆ. ಇದಕ್ಕೆ ಅರ್ಥವೇನೆಂದರೆ ಸೈತಾನನ ಮುಂದಾಲೋಚನೆ ಏನೆಂದರೆ ದೇವರ ಜನರನ್ನು ದೇವರಿಗೆ ವಿಧೇಯತೆ ತೋರಿಸುವುದನ್ನು ನಿಲ್ಲಿಸುವ ಯತ್ನವಾಗಿರುತ್ತದೆ. ಒಂದುವೇಳೆ ಈ ಕಾರ್ಯವನ್ನು ಮಾಡುವುದರಲ್ಲಿ ಅವನು ಯಶಸ್ವಿಯಾದರೆ, ದೇವರು ತನ್ನ ಜನರಿಗಾಗಿ ಇಟ್ಟಿರುವ ಒಳ್ಳೇಯ ವಿಷಯಗಳನ್ನು ಸೈತಾನನು ಕದಿಯುತ್ತಾನೆ.
* ಆಕಸ್ಮಿಕವಾಗಿ ಜನರಿಂದ ಕದಿಯುವುದಕ್ಕೆ ಬರುವ ಕಳ್ಳನ ಹಾಗೆಯೇ ಯೇಸುವು ತನ್ನ ಎರಡನೇ ಬರೋಣದಲ್ಲಿ ಆಕಸ್ಮಿಕವಾಗಿ ಬರುವನೆಂದು ಕಳ್ಳನಿಗೆ ಹೋಲಿಸಿದ್ದಾನೆ. ಜನರು ಎದುರುನೋಡದ ಸಮಯದಲ್ಲಿ ಕಳ್ಳನು ಯಾವರೀತಿ ಬರುತ್ತಾನೋ, ಹಾಗೆಯೇ ಜನರು ಎದುರುನೋಡದ ಸಮಯದಲ್ಲಿ ಯೇಸುವು ಹಿಂದಿರುಗಿ ಬರುತ್ತಾನೆ.
(ಈ ಪದಗಳನ್ನು ಸಹ ನೋಡಿರಿ : [ಆಶೀರ್ವದಿಸು](../kt/bless.md), [ಅಪರಾಧ](../other/criminal.md), [ಶಿಲುಬೆಗೆ ಹಾಕುವುದು](../kt/crucify.md), [ಕತ್ತಲು](../other/darkness.md), [ನಾಶಕ](../other/destroyer.md), [ಶಕ್ತಿ](../kt/power.md), [ಸಮಾರ್ಯ](../names/samaria.md), [ಸೈತಾನ](../kt/satan.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೇತ್ರ.03:10](rc://*/tn/help/2pe/03/10)
* [ಲೂಕ.12:33-34](rc://*/tn/help/luk/12/33)
* [ಮಾರ್ಕ.14:47-50](rc://*/tn/help/mrk/14/47)
* [ಜ್ಞಾನೋ.06:30-31](rc://*/tn/help/pro/06/30)
* [ಪ್ರಕ.03:3-4](rc://*/tn/help/rev/03/03)
## ಪದ ಡೇಟಾ:
* Strong's: H1214, H1215, H1416, H1589, H1590, H1980, H6530, H6782, H7703, G727, G1888, G2417, G2812, G3027