kn_tw/bible/other/tencommandments.md

29 lines
4.3 KiB
Markdown

# ಹತ್ತು ಆಜ್ಞೆಗಳು
## ಸತ್ಯಾಂಶಗಳು:
“ಹತ್ತು ಆಜ್ಞೆಗಳು” ಎಂದರೆ ಇಸ್ರಾಯೇಲ್ಯರು ಕಾನಾನ್ ಭೂಮಿಗೆ ಹೋಗುವ ಪ್ರಯಾಣದಲ್ಲಿ ಅವರು ಅರಣ್ಯದಲ್ಲಿರುವಾಗ ಸೀನಾಯಿ ಬೆಟ್ಟದ ಮೇಲೆ ದೇವರು ಮೋಶೆಗೆ ಕೊಟ್ಟಿರುವ ಆಜ್ಞೆಗಳಾಗಿದ್ದವು. ದೇವರು ಈ ಆಜ್ಞೆಗಳನ್ನು ಎರಡು ದೊಡ್ಡ ಶಿಲಾಶಾಸನಗಳ ಮೇಲೆ ಬರೆದಿದ್ದರು.
* ಇಸ್ರಾಯೇಲ್ಯರು ವಿಧೇಯತೆ ತೋರಿಸುವುದಕ್ಕೆ ದೇವರು ಆವರಿಗೆ ಅನೇಕ ಆಜ್ಞೆಗಳನ್ನು ಕೊಟ್ಟಿದ್ದರು, ಆದರೆ ಇಸ್ರಾಯೇಲ್ಯರು ದೇವರನ್ನು ಆರಾಧಿಸುವುದಕ್ಕೆ, ಪ್ರೀತಿಸುವುದಕ್ಕೆ ಮತ್ತು ಇತರ ಜನರನ್ನು ಪ್ರೀತಿ ಮಾಡುವುದಕ್ಕೆ ಸಹಾಯ ಮಾಡಲು ಹತ್ತು ಆಜ್ಞೆಗಳು ತುಂಬಾ ವಿಶೇಷವಾಗಿದ್ದವು.
* ಈ ಆಜ್ಞೆಗಳು ದೇವರು ತನ್ನ ಜನರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿಯೂ ಭಾಗವಾಗಿದ್ದವು. ಅವರು ಏನು ಮಾಡಬೇಕೆಂದು ದೇವರು ಆಜ್ಞಾಪಿಸಿದ್ದಾರೋ ಅವುಗಳಿಗೆ ವಿಧೇಯತೆಯನ್ನು ತೋರಿಸುವುದರ ಮೂಲಕ, ಇಸ್ರಾಯೇಲ್ ಜನರು ದೇವರನ್ನು ಪ್ರೀತಿಸುತ್ತಿದ್ದಾರೆಂದು ಮತ್ತು ಆತನಿಗೆ ಸಂಬಂಧಪಟ್ಟವರಾಗಿರುತ್ತಾರೆಂದು ತೋರಿಕೆಯಾಗುತ್ತದೆ.
* ಶಿಲಾಶಾಸನಗಳ ಮೇಲೆ ಬರೆಯಲ್ಪಟ್ಟಿರುವ ಆಜ್ಞೆಗಳನ್ನು ಒಡಂಬಡಿಕೆಯ ಮಂಜೂಷದ ಮೇಲೆ ಇಟ್ಟಿದ್ದರು, ಈ ಮಂಜೂಷವನ್ನು ಗುಡಾರದಲ್ಲಿ ಅತೀ ಪರಿಶುದ್ಧ ಸ್ಥಳದಲ್ಲಿ ಇಟ್ಟಿದ್ದರು ಮತ್ತು ಇದಾದನಂತರ, ದೇವಾಲಯದಲ್ಲಿ ಇಟ್ಟಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಒಡಂಬಡಿಕೆಯ ಮಂಜೂಷ](../kt/arkofthecovenant.md), [ಆಜ್ಞೆ](../kt/command.md), [ಒಡಂಬಡಿಕೆ](../kt/covenant.md), [ಅರಣ್ಯ](../other/desert.md), [ಧರ್ಮಶಾಸ್ತ್ರ](../kt/lawofmoses.md), [ವಿಧೇಯತೆ ತೋರಿಸು](../other/obey.md), [ಸೀನಾಯಿ](../names/sinai.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.04:13-14](rc://*/tn/help/deu/04/13)
* [ಧರ್ಮೋ.10:3-4](rc://*/tn/help/deu/10/03)
* [ವಿಮೋ.34:27-28](rc://*/tn/help/exo/34/27)
* [ಲೂಕ.18:18-21](rc://*/tn/help/luk/18/18)
## ಸತ್ಯವೇದದಿಂದ ಉದಾಹರಣೆಗಳು:
* __[13:07](rc://*/tn/help/obs/13/07)__ ದೇವರು ಎರಡು ಶಿಲಾಶಾಸನಗಳ ಮೇಲೆ ಈ __ ಹತ್ತು ಆಜ್ಞೆಗಳನ್ನು __ ಬರೆದು, ಮೋಶೆಗೆ ಅವುಗಳನ್ನು ಕೊಟ್ಟನು.
* __[13:13](rc://*/tn/help/obs/13/13)__ ಮೋಶೆಯು ಪರ್ವತದಿಂದ ಕೆಳಗೆ ಇಳಿದು ಬಂದಾಗ, ಇಸ್ರಾಯೇಲ್ಯರು ಇಟ್ಟುಕೊಂಡಿರುವ ಪ್ರತಿಮೆಯನ್ನು ನೋಡಿ, ತುಂಬಾ ಕೋಪಗೊಂಡು, ದೇವರು ಬರೆದು ಕೊಟ್ಟಿರುವ __ ಹತ್ತು ಆಜ್ಞೆಗಳ __ ಶಿಲಾಶಾಸನಗಳನ್ನು ತುಂಡು ತುಂಡುಗಳಾಗಿ ಮಾಡಿದನು.
* __[13:15](rc://*/tn/help/obs/13/15)__ ಮೋಶೆ ಮುರಿದ ಶಿಲಾಶಾಸನಗಳಿಗೆ ಬದಲಾಗಿ, ಹೊಸ ಶಿಲಾಶಾಸನಗಳ ಮೇಲೆ__ ಹತ್ತು ಆಜ್ಞೆಗಳನ್ನು __ ತಿರುಗಿ ಬರೆದನು.
## ಪದ ಡೇಟಾ:
* Strong's: H1697, H6235