kn_tw/bible/other/stumble.md

31 lines
4.5 KiB
Markdown

# ಎಡವಿ ಬೀಳುವುದು, ಎಡವಿ ಬೀಳಿಸುವುದು, ಎಡವಿ ಬಿದ್ದಿದೆ, ಎಡವಿ ಬೀಳುತ್ತಿರುವುದು
## ಪದದ ಅರ್ಥವಿವರಣೆ:
“ಎಡವಿ ಬೀಳುವುದು” ಎನ್ನುವ ಮಾತಿಗೆ ಒಬ್ಬರು ನಡೆಯುತ್ತಿರುವಾಗ ಅಥವಾ ಓಡುತ್ತಿರುವಾಗ “ಸಂಪೂರ್ಣವಾಗಿ ಬಿದ್ದುಹೋಗುತ್ತಿರುವುದು” ಎಂದರ್ಥ. ಸಾಧಾರಣವಾಗಿ ಇದು ಏನಾದರೊಂದರ ಮೇಲೆ ತಟಕ್ಕನೆ ಬಿಚ್ಚಿಕೊಳ್ಳುವುದು ಒಳಗೊಂಡಿರುತ್ತದೆ.
* ಅಲಂಕಾರಿಕವಾಗಿ, “ಎಡವಿ ಬೀಳುವುದು” ಎನ್ನುವ ಮಾತಿಗೆ “ಪಾಪ” ಮಾಡುವುದು ಅಥವಾ ನಂಬಿಕೆಯಲ್ಲಿ “ಹಿಂಜರಿಯುವುದು” ಎಂದರ್ಥವಾಗಿರುತ್ತದೆ.
* ಈ ಪದವು ಅಥವಾ ಮಾತು ಶಿಕ್ಷೆಯನ್ನು ಹೊಂದುತ್ತಿರುವಾಗ ಅಥವಾ ಹಿಂಸೆಗೊಳಗಾದ ಅಥವಾ ಯುದ್ಧದಲ್ಲಿ ಹೋರಾಟ ಮಾಡುತ್ತಿರುವಾಗ ಬಲಹೀನತೆಯನ್ನು ತೋರಿಸುವುದಕ್ಕೂ, ಅಥವಾ ತಪ್ಪುಗಳನ್ನು ಸೂಚಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.
## ಅನುವಾದ ಸಲಹೆಗಳು:
* ಕೆಲವು ಸಂದರ್ಭಗಳಲ್ಲಿ “ಎಡವಿ ಬೀಳುವುದು” ಎನ್ನುವ ಮಾತಿಗೆ ಭೌತಿಕವಾಗಿ ಯಾವುದಾದರೊಂದರ ಮೇಲೆ ಬೀಳುವುದು ಎಂದರ್ಥವಾಗಿರುತ್ತದೆ, ಇದನ್ನು “ಸಂಪೂರ್ಣವಾಗಿ ಬಿದ್ದುಹೋಗುತ್ತಿರುವುದು” ಅಥವಾ “ಒಂದರ ಮೇಲೆ ಬಿಚ್ಚಿ ಬೀಳುವುದು” ಎಂದರ್ಥ ಬರುವ ಮಾತುಗಳೊಂದಿಗೆ ಅನುವಾದ ಮಾಡಬೇಕು.
* ಸಂದರ್ಭದಲ್ಲಿ ಸರಿಯಾದ ಅರ್ಥವನ್ನು ಈ ಮಾತು ತಿಳಿಯಪಡಿಸುತ್ತಿದ್ದರೆ, ಇದರ ಅಕ್ಷರಾರ್ಥವನ್ನು ಅಲಂಕಾರಿಕ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಬಹುದು.
* ಅನುವಾದ ಭಾಷೆಯಲ್ಲಿ ಅಕ್ಷರಾರ್ಥವಾದ ಅರ್ಥವನ್ನು ಕೊಡದ ಅಲಂಕಾರಿಕ ಉಪಯೋಗಗಳಲ್ಲಿ, “ಎಡವಿ ಬೀಳುವುದು” ಎನ್ನುವ ಮಾತನ್ನು “ಪಾಪ” ಮಾಡುವುದು ಅಥವಾ “ತಪ್ಪು ಮಾಡುವುದು” ಅಥವಾ “ನಂಬುವುದನ್ನು ನಿಲ್ಲಿಸುವುದು” ಅಥವಾ “ಬಲಹೀನವಾಗುವುದು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
* ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಪಾಪ ಮಾಡುವುದರ ಮೂಲಕ ಎಡವಿ ಬೀಳುವುದು” ಅಥವಾ “ನಂಬದಿರುವದರಿಂದ ಎಡವಿ ಬೀಳುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಎಡವಿ ಬೀಳುವಂತೆ ಮಾಡುವುದು” ಎನ್ನುವ ಮಾತನ್ನು “ಬಲಹೀನವಾಗುವಂತೆ ಮಾಡುವುದು” ಅಥವಾ “ತಪ್ಪು ಮಾಡುವಂತೆ ಮಾಡುವುದು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬು](../kt/believe.md), [ಹಿಂಸಿಸು](../other/persecute.md), [ಪಾಪ](../kt/sin.md), [ವಿಘ್ನ](../other/stumblingblock.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೇತ್ರ.02:7-8](rc://*/tn/help/1pe/02/07)
* [ಹೋಶೆಯ.04:4-5](rc://*/tn/help/hos/04/04)
* [ಯೆಶಯಾ.31:3](rc://*/tn/help/isa/31/03)
* [ಮತ್ತಾಯ.11:4-6](rc://*/tn/help/mat/11/04)
* [ಮತ್ತಾಯ.18:7-8](rc://*/tn/help/mat/18/07)
## ಪದ ಡೇಟಾ:
* Strong's: H1762, H3782, H4383, H4384, H5062, H5063, H5307, H6328, H6761, H8058, G679, G4348, G4350, G4417, G4624, G4625