kn_tw/bible/other/strength.md

41 lines
8.5 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಬಲ, ಬಲಪಡಿಸು, ಬಲವಾಗಿ
## ಸತ್ಯಾಂಶಗಳು:
“ಬಲ” ಎನ್ನುವ ಪದವು ಭೌತಿಕವಾದ, ಮಾನಸಿಕವಾದ ಅಥವಾ ಆತ್ಮೀಕವಾದ ಶಕ್ತಿಯನ್ನು ಸೂಚಿಸುತ್ತದೆ. ಯಾವುದಾದರೊಂದನ್ನು ಅಥವಾ ಒಬ್ಬರನ್ನು “ಬಲಪಡಿಸು’ ಎಂದರೆ ಆ ವ್ಯಕ್ತಿಯನ್ನು ಅಥವಾ ಆ ವಸ್ತುವನ್ನು ಬಲ ಹೊಂದುವಂತೆ ಮಾಡುವುದು ಎಂದರ್ಥ.
* “ಬಲ” ಎನ್ನುವ ಪದವು ವಿರುದ್ಧವಾಗಿ ಬರುವ ಬಲ ಪ್ರಯೋಗವನ್ನು ತಡೆದಿರುವ ಶಕ್ತಿಯನ್ನು ಸೂಚಿಸುತ್ತದೆ.
* ಒಬ್ಬ ವ್ಯಕ್ತಿ “ಇಚ್ಚೆಯ ಬಲ” ಹೊಂದಿಕೊಂಡಿದ್ದಾನೆಂದರೆ ಆ ವ್ಯಕ್ತಿ ಶೋಧನೆಗೆ ಗುರಿಯಾದಾಗ ಪಾಪ ಮಾಡದಂತೆ ಸಾಮರ್ಥ್ಯವನ್ನು ಹೊಂದಿಕೊಂಡಿರುತ್ತಾನೆ ಎಂದರ್ಥವಾಗಿರುತ್ತದೆ.
* ಕೀರ್ತನೆಗಳನ್ನು ಬರೆದ ಒಬ್ಬ ಲೇಖಕರು ಯೆಹೋವನೇ ತನ್ನ “ಬಲ” ಎಂಬುದಾಗಿ ಹೇಳಿಕೊಂಡಿದ್ದಾರೆ, ಯಾಕಂದರೆ ದೇವರು ಆತನನ್ನು ಬಲವುಳ್ಳವನಾಗುವುದಕ್ಕೆ ಸಹಾಯ ಮಾಡಿದನು.
* ಒಂದು ಗೋಡೆ ಅಥವಾ ಭವನದಂತಿರುವ ಭೌತಿಕ ನಿರ್ಮಾಣವು “ಬಲದಿಂದ” ಇರುತ್ತದೆ, ಜನರು ಕಟ್ಟಡವನ್ನು ಪುನಹ ನಿರ್ಮಿಸಿಕೊಳ್ಳುವರು, ಇದನ್ನು ಇನ್ನೂ ಹೆಚ್ಚಾದ ಕಲ್ಲುಗಳಿಂದ ಅಥವಾ ಇಟ್ಟಿಗೆಗಳಿಂದ ತಿರುಗಿ ಇನ್ನೂ ಹೆಚ್ಚಾಗಿ ಬಲಪಡಿಸುವರು, ಇದರಿಂದ ಯಾವುದೇ ಧಾಳಿಯನ್ನು ಈ ಕಟ್ಟಡವು ತಡೆಯುತ್ತದೆ.
## ಅನುವಾದ ಸಲಹೆಗಳು:
* ಸಾಧಾರಣವಾಗಿ “ಬಲಪಡಿಸು” ಎನ್ನುವ ಪದವನ್ನು “ಬಲವಾಗಿರುವುದಕ್ಕೆ ಕಾರಣವಾಗು” ಅಥವಾ “ಇನ್ನೂ ಹೆಚ್ಚಾಗಿ ಶಕ್ತಿಯುತವಾಗಿರಲು ಮಾಡು” ಎಂದೂ ಅನುವಾದ ಮಾಡಬಹುದು.
* ಆತ್ಮೀಯಕವಾದ ಅರ್ಥದಲ್ಲಿ ಬರುವಾಗ, “ನಿಮ್ಮ ಸಹೋದರರನ್ನು ಬಲಪಡಿಸು” ಎನ್ನುವ ಮಾತನ್ನು “ನಿಮ್ಮ ಸಹೋದರರನ್ನು ಪ್ರೋತ್ಸಾಹಗೊಳಿಸು” ಅಥವಾ “ಸತತವಾಗಿ ನಿಷ್ಠನಾಗಿರುವುದಕ್ಕೆ ನಿಮ್ಮ ಸಹೋದರರಿಗೆ ಸಹಾಯ ಮಾಡು” ಎಂದೂ ಅನುವಾದ ಮಾಡಬಹುದು.
* ಈ ಪದಗಳಿಗೆ ಈ ಕೆಳಗೆ ಕೊಟ್ಟಿರುವ ಉದಾಹರಣೆಗಳು ಅರ್ಥವನ್ನು ಮತ್ತು ಇದರಿಂದ ಉದ್ದವಾದ ಮಾತುಗಳಲ್ಲಿ ಅವುಗಳು ಒಳಪಟ್ಟಿರುವಾಗ, ಅವುಗಳನ್ನು ಹೇಗೆ ಅನುವಾದ ಮಾಡಬಹುದು ಎನ್ನುವುದನ್ನು ತೋರಿಸುತ್ತವೆ,
* “ನಡುಕಟ್ಟಿನಂತೆ ನನ್ನ ಮೇಲೆ ಬಲವನ್ನು ಇಡಲಾಗಿದೆ” ಎನ್ನುವ ಮಾತಿಗೆ “ನನ್ನ ನಡುವನ್ನು ಸುತ್ತುವರಿದಿರುವ ನಡುಕಟ್ಟಿನಂತೆಯೇ, ಸಂಪೂರ್ಣ ಬಲವನ್ನು ಹೊಂದಿಕೊಳ್ಳುವುದಕ್ಕೆ ನನಗೆ ಕಾರಣವಾಗಿದೆ” ಎಂದರ್ಥವಾಗಿರುತ್ತದೆ.
* “ಶಾಂತತೆ ಮತ್ತು ನಂಬಿಕೆಯಲ್ಲಿಯೇ ನಿನ್ನ ಬಲವಿದೆ” ಎನ್ನುವ ಮಾತಿಗೆ “ಮೌನವಾಗಿ ನಡೆದುಕೊಳ್ಳುತ್ತಾ, ದೇವರಲ್ಲಿ ಭರವಸೆ ಇಡುವುದು ನಿನ್ನನ್ನು ಆತ್ಮೀಯಕವಾಗಿ ಬಳಗೊಲಿಸುತ್ತದೆ” ಎಂದರ್ಥವಾಗಿರುತ್ತದೆ.
* “ಅವರ ಬಲವನ್ನು ಪುನರುಜ್ಜೀವನಗೊಳಿಸುತ್ತದೆ” ಎನ್ನುವ ಮಾತಿಗೆ “ಮತ್ತೊಮ್ಮೆ ಇನ್ನೂ ಹೆಚ್ಚಾದ ಬಲವನ್ನು ಹೊಂದಿಕೊಳ್ಳುತ್ತದೆ” ಎಂದರ್ಥವಾಗಿರುತ್ತದೆ.
* “ನನ್ನ ಬಲದಿಂದ ಮತ್ತು ನನ್ನ ಜ್ಞಾನದಿಂದ ನಾನು ನಡೆದುಕೊಂಡಿದ್ದೇನೆ” ಎನ್ನುವ ಮಾತಿಗೆ “ನಾನು ಹೆಚ್ಚಿನ ಬಲವನ್ನು ಮತ್ತು ಜ್ಞಾನವನ್ನು ಹೊಂದಿಕೊಂಡಿರುವುದರಿಂದ ನಾನು ಈ ಎಲ್ಲಾ ಕಾರ್ಯಗಳನ್ನು ಮಾಡಿದ್ದೇನೆ” ಎಂದರ್ಥವಾಗಿರುತ್ತದೆ.
* “ಗೋಡೆಯನ್ನು ಬಲಗೊಳಿಸು” ಎನ್ನುವ ಮಾತಿಗೆ “ಗೋಡೆಯನ್ನು ಪುನರ್ ಬಲಗೊಳಿಸುವುದು” ಅಥವಾ “ಗೋಡೆಯನ್ನು ತಿರುಗಿ ಕಟ್ಟುವುದು” ಎಂದರ್ಥವಾಗಿರುತ್ತದೆ.
* “ನಾನು ನಿನ್ನನ್ನು ಬಲಪಡಿಸುತ್ತೇನೆ” ಎನ್ನುವ ಮಾತಿಗೆ “ನೀನು ಬಲವಾಗಿರುವಂತೆ ನಾನು ಮಾಡುವೆನು” ಎಂದರ್ಥವಾಗಿರುತ್ತದೆ.
* “ಯೆಹೋವನಲ್ಲಿಯೇ ರಕ್ಷಣೆಯು ಮತ್ತು ಬಲವು ಇದೆ” ಎನ್ನುವ ಮಾತಿಗೆ “ಯೆಹೋವನು ಮಾತ್ರವೇ ನಮ್ಮನ್ನು ರಕ್ಷಿಸುವನು ಮತ್ತು ನಮ್ಮನ್ನು ಬಲಪಡಿಸುವನು” ಎಂದರ್ಥವಾಗಿರುತ್ತದೆ.
* “ನಿನ್ನ ಬಲದ ಬಂಡೆ” ಎನ್ನುವ ಮಾತಿಗೆ “ನಿನ್ನನ್ನು ಬಲಪಡಿಸುವ ನಂಬಿಗಸ್ತನಾಗಿರುವ ವ್ಯಕ್ತಿ” ಎಂದರ್ಥವಾಗಿರುತ್ತದೆ.
* “ರಕ್ಷಿಸುವ ತನ್ನ ಬಲಗೈ ಬಳದಿಂದ” ಎನ್ನುವ ಮಾತಿಗೆ “ಯಾರಾದರೊಬ್ಬರು ತನ್ನ ಕೈಯಿಂದ ನಿನ್ನ ಕೈಯನ್ನು ಗಟ್ಟಿಯಾಗಿ ಅಥವಾ ಸುರಕ್ಷಿತವಾಗಿ ಹಿಡಿದುಕೊಳ್ಳುವ ರೀತಿಯಲ್ಲಿಯೇ ಸಮಸ್ಯೆಯಿಂದ ಆತನು ನಿನ್ನನ್ನು ರಕ್ಷಿಸುವವನಾಗಿದ್ದಾನೆ” ಎಂದರ್ಥವಾಗಿರುತ್ತದೆ.
* “ಸ್ವಲ್ಪ ಬಲ” ಎನ್ನುವ ಮಾತಿಗೆ “ಹೆಚ್ಚಿನ ಬಲವಿಲ್ಲದಿರುವುದು” ಅಥವಾ ‘ಬಲಹೀನ” ಎಂದರ್ಥವಾಗಿರುತ್ತದೆ.
* “ನನ್ನ ಪೂರ್ಣ ಬಲದಿಂದ” ಎನ್ನುವ ಮಾತಿಗೆ “ನನ್ನ ಎಲ್ಲಾ ಪ್ರಯತ್ನಗಳನ್ನು ಉಪಯೋಗಿಸುವುದು” ಅಥವಾ “ಬಲವಾಗಿ ಮತ್ತು ಸಂಪೂರ್ಣವಾಗಿ” ಎಂದರ್ಥವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ನಂಬಿಗಸ್ತ](../kt/faithful.md), [ಸಾಧಿಸು](../other/perseverance.md), [ಬಲಗೈ](../kt/righthand.md), [ರಕ್ಷಿಸು](../kt/save.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಅರಸ.18:19-21](rc://*/tn/help/2ki/18/19)
* [2 ಪೇತ್ರ.02:11](rc://*/tn/help/2pe/02/11)
* [ಲೂಕ.10:27](rc://*/tn/help/luk/10/27)
* [ಕೀರ್ತನೆ.021:01](rc://*/tn/help/psa/021/001)
## ಪದ ಡೇಟಾ:
* Strongs: H193, H202, H353, H360, H386, H410, H553, H556, H1369, H1396, H2220, H2388, H2391, H2392, H2393, H2428, H3027, H3028, H3559, H3581, H3811, H3955, H4581, H5326, H5331, H5582, H5797, H5807, H5810, H5934, H5975, H6106, H6109, H6697, H6965, H7292, H7307, H8003, H8443, H8632, H8633, G461, G950, G1411, G1412, G1743, G1765, G1840, G1991, G2479, G2480, G2901, G2904, G3619, G3756, G4599, G4732, G4733, G4741