kn_tw/bible/other/splendor.md

26 lines
2.9 KiB
Markdown

# ವೈಭವ
## ಪದದ ಅರ್ಥವಿವರಣೆ:
“ವೈಭವ” ಎನ್ನುವ ಪದವು ಅತೀ ಹೆಚ್ಚಾದ ಸೌಂದರ್ಯ ಮತ್ತು ಸೊಬಗನ್ನು ಸೂಚಿಸುತ್ತದೆ, ಇದು ಅನೇಕಬಾರಿ ಸಂಪತ್ತು ಮತ್ತು ಶೋಭಾಯಮಾನಗಳೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತದೆ.
* ಅನೇಕಬಾರಿ ವೈಭವ ಎನ್ನುವುದು ಅರಸನಿಗೆ ಇರುವ ಸಂಪತ್ತನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ, ಅಥವಾ ತನ್ನ ಬೆಲೆಯುಳ್ಳ ಜೀವನದಲ್ಲಿ, ಸುಂದರವಾದ ಮನಸ್ಸಿನಲ್ಲಿ ಹೇಗೆ ಕಾಣಿಸಿಕೊಲ್ಲುತ್ತಾನೆ ಎನ್ನುವುದನ್ನು ವಿವರಿಸುತ್ತದೆ.
* “ವೈಭವ” ಎನ್ನುವ ಪದವನ್ನು ಮರಗಳ, ಪರ್ವತಗಳ, ಮತ್ತು ದೇವರು ಸೃಷ್ಟಿ ಮಾಡಿದ ಪ್ರತಿಯೊಂದರ ಸುಂದರವನ್ನು ವಿವರಿಸುವುದಕ್ಕೂ ಉಪಯೋಗಿಸಲ್ಪಟ್ಟಿರುತ್ತದೆ.
* ನಿರ್ದಿಷ್ಟವಾದ ನಗರಗಳು ತಮ್ಮಲ್ಲಿ ಸಿಗುವ ಸ್ವಾಭಾವಿಕ ಸಂಪನ್ಮೂಲಗಳಿಂದ, ಭವನಗಳನ್ನು ಮತ್ತು ರಹದಾರಿಗಳನ್ನು ನಿರ್ಮಿಸುವುದರಿಂದ, ಶ್ರೀಮಂತಿಕೆಯ ಬಟ್ಟೆಗಳು, ಬಂಗಾರ ಮತ್ತು ಬೆಳ್ಳಿ ಲೋಹಗಳನ್ನು ಒಳಗೊಂಡಿರುವ ಜನರ ಸಂಪತ್ತು ಇರುವದರಿಂದ ಅವುಗಳು ವೈಭವನ್ನು ಪಡೆದುಕೊಂಡಿವೆಯೆಂದು ಹೇಳಲಾಗುತ್ತದೆ.
* ಸಂದರ್ಭಾನುಸಾರವಾಗಿ, ಈ ಪದವನ್ನು “ಭವ್ಯವಾದ ಸೌಂದರ್ಯ” ಅಥವಾ “ಅದ್ಭುತವಾದ ಘನತೆ” ಅಥವಾ “ಅರಸನ ದೊಡ್ಡತನ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಮಹಿಮೆ](../kt/glory.md), [ಅರಸ](../other/king.md), [ಘನತೆ](../kt/majesty.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.16:25-27](rc://*/tn/help/1ch/16/25)
* [ವಿಮೋ.28:1-3](rc://*/tn/help/exo/28/01)
* [ಯೆಹೆ.28:6-7](rc://*/tn/help/ezk/28/06)
* [ಲೂಕ.04:5-7](rc://*/tn/help/luk/04/05)
* [ಕೀರ್ತನೆ.089:44-45](rc://*/tn/help/psa/089/044)
* [ಪ್ರಕ.21:26-27](rc://*/tn/help/rev/21/26)
## ಪದ ಡೇಟಾ:
* Strong's: H1925, H1926, H1927, H1935, H2091, H2122, H2892, H3314, H3519, H6643, H7613, H8597