kn_tw/bible/other/sorcery.md

25 lines
4.0 KiB
Markdown

# ಮಾಂತ್ರಿಕ, ಮಾಂತ್ರಿಕರು, ಮಾಟಗಾರ್ತಿ, ಮಾಟಗಾರಿಕೆ, ಮಾಟ ಮಂತ್ರಗಳು, ಮಂತ್ರ ವಿದ್ಯೆ
## ಪದದ ಅರ್ಥವಿವರಣೆ:
“ಮಾಟಗಾರಿಕೆ” ಅಥವಾ “ಮಂತ್ರ ವಿದ್ಯೆ” ಎನ್ನುವ ಪದಗಳು ಮಾಯ ಮಾಟ ಉಪಯೋಗಿಸುವುದನ್ನು ಸೂಚಿಸುತ್ತದೆ, ಇದರಲ್ಲಿ ದುರಾತ್ಮಗಳ ಸಹಾಯದಿಂದ ಶಕ್ತಿಯುತವಾದ ಕಾರ್ಯಗಳು ಮಾಡುವುದು ಒಳಗೊಂಡಿರುತ್ತದೆ. “ಮಾಂತ್ರಿಕ” ಎನ್ನುವುದು ಇಂಥಹ ಶಕ್ತಿಯುತವಾದ ಮಾಯ ಮಾಟಗಳನ್ನು ಮಾಡುವ ವ್ಯಕ್ತಿ ಎಂದರ್ಥ.
* ಮಾಯ ಮಾಟ ಮತ್ತು ಮಾಟ ಮಂತ್ರಗಳ ಉಪಯೋಗದಲ್ಲಿ ಪ್ರಯೋಜನಕರವಾದ ವಿಷಯಗಳು (ಬೇರೊಬ್ಬರನ್ನು ಗುಣಪಡಿಸುವುದು) ಮತ್ತು ಹಾನಿಕರವಾದ ವಿಷಯಗಳು (ಒಬ್ಬರನ್ನು ಶಪಿಸುವುದು) ಒಳಗೊಂಡಿರುತ್ತವೆ. ಆದರೆ ಎಲ್ಲಾ ವಿಧವಾದ ಮಾಟಗಾರಿಕೆಗಳು ತಪ್ಪಾಗಿರುತ್ತವೆ, ಯಾಕಂದರೆ ಅವರು ದುರಾತ್ಮಗಳ ಶಕ್ತಿಯನ್ನು ಬಳಸುತ್ತಾರೆ.
* ಸತ್ಯವೇದದಲ್ಲಿ ಮಾಟಗಾರಿಕೆಯನ್ನು ಉಪಯೋಗಿಸುವುದು ಇತರ ಅನೇಕ ಭಯಂಕರವಾದ ಪಾಪಗಳಂತೆಯೇ (ವ್ಯಭಿಚಾರ, ವಿಗ್ರಹಗಳನ್ನು ಆರಾಧಿಸುವುದು, ಮತ್ತು ಮಕ್ಕಳನ್ನು ಬಲಿ ಕೊಡುವುದು) ದುಷ್ಟ ಕಾರ್ಯವಾಗಿರುತ್ತದೆ.
* “ಮಾಟಗಾರಿಕೆ” ಮತ್ತು “ಮಾಟ ಮಂತ್ರ” ಎನ್ನುವ ಪದಗಳನ್ನು “ದುರಾತ್ಮ ಶಕ್ತಿ” ಅಥವಾ “ಎರಕಹೊಯ್ದ ಮಂತ್ರಗಳು” ಎಂದೂ ಅನುವಾದ ಮಾಡಬಹುದು.
* “ಮಾಂತ್ರಿಕ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಮಾಯ ಮಂತ್ರವನ್ನು ಮಾಡುವವನು” ಅಥವಾ “ಎರಕಹೊಯ್ದ ಮಂತ್ರಗಳನ್ನು ನುಡಿಯುವ ವ್ಯಕ್ತಿ” ಅಥವಾ “ದುರಾತ್ಮ ಶಕ್ತಿಯನ್ನು ಉಪಯೋಗಿಸುವುದರ ಮೂಲಕ ಅದ್ಭುತಗಳನ್ನು ಮಾಡುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಆತ್ಮ ಪ್ರಪಂಚವನ್ನು ಸಂಪರ್ಕಿಸುವ ಪ್ರಯತ್ನವನ್ನು ಸೂಚಿಸುವ “ಕಣಿ ಹೇಳುವುದು” ಎನ್ನುವ ಪದಕ್ಕಿರುವ ಅರ್ಥಕ್ಕಿಂತ “ಮಾಟಗಾರಿಕೆ” ಎನ್ನುವ ಪದಕ್ಕೆ ವಿಭಿನ್ನವಾದ ಅರ್ಥವನ್ನು ಹೊಂದಿರುತ್ತದೆ,
(ಈ ಪದಗಳನ್ನು ಸಹ ನೋಡಿರಿ : [ವ್ಯಭಿಚಾರ](../kt/adultery.md), [ದೆವ್ವ](../kt/demon.md), [ಕಣಿ ಹೇಳುವುದು](../other/divination.md), [ಸುಳ್ಳು ದೇವರು](../kt/falsegod.md), [ಮಾಯ ಮಂತ್ರ](../other/magic.md), [ಹೋಮ](../other/sacrifice.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.08:9-11](rc://*/tn/help/act/08/09)
* [ವಿಮೋ.07:11-13](rc://*/tn/help/exo/07/11)
* [ಗಲಾತ್ಯ.05:19-21](rc://*/tn/help/gal/05/19)
* [ಪ್ರಕ.09:20-21](rc://*/tn/help/rev/09/20)
## ಪದ ಡೇಟಾ:
* Strong's: H3784, H3785, H3786, H6049, G3095, G3096, G3097, G5331, G5332, G5333